ಕನಕದಾಸರ ಸಮಗ್ರ ಜೀವನ ಚರಿತ್ರೆ ಕನಕದಾಸನ ಪವಾಡ ಅಲ್ಲ, ಅವನ ಮೇಧಾವಿತನವೂ ಅಲ್ಲ ; ಅಲ್ಲಿ ಸುವೇದ್ಯವಾಗುವುದು ಕನಕ ದರ್ಶನ ! ದೇವನು ಎಲ್ಲೆಡೆಯೂ ಇದ್ದಾನೆ, ಅವನು ಅಣುವಿನಲ್ಲಿ ಅಣುವಾಗಿದ್ದಾನೆ, ಘನದಲ್ಲಿ ಘನವಾಗಿದ್ದಾನೆ ; ನೀರಿನಲ್ಲಿ ತಂಪಾಗಿದ್ದಾನೆ, ಗಾಳಿಯಲ್ಲಿ ವೇಗವಾಗಿದ್ದಾನೆ, ಸೂರ್ಯನಲ್ಲಿ ತೇಜಸ್ಸಾಗಿದ್ದಾನೆ. ಚಂದ್ರನಲ್ಲಿ ಕಾಂತಿಯಾಗಿದ್ದಾನೆ, ನಕ್ಷತ್ರದಲ್ಲಿ ನಗೆಯಾಗಿದ್ದಾನೆ, ಹಕ್ಕಿಯ ಕಂಠದಲ್ಲಿ ಹಾಡಾಗಿದ್ದಾನೆ, ಹೂವಿನಲ್ಲಿ ಪರಿಮಳವಾಗಿದ್ದಾನೆ, ಕಲ್ಲಿನಲ್ಲಿ ಘನೀಭೂತವಾಗಿ ಕುಳಿತಿದ್ದಾನೆ. ಎಲ್ಲ ಸಚರಾಚರ ಚೇತನಗಳಲ್ಲೂ ಸುಪ್ತಶಕ್ತಿಯಾಗಿದ್ದು, ಗುಪ್ತಗಾಮಿಯಾಗಿ, ಸದಾ ಸ್ಪಂದಿಸುತ್ತಾ ವಿನೂತನ ಸೃಷ್ಟಿಯ ಕ್ರತುಶಕ್ತಿ ತಾನಾಗಿದ್ದಾನೆ. ಆ ಜಗತ್‌ಶಕ್ತಿ, ಆದಿಶಕ್ತಿ, ಪರಾತ್ಪರ ಶಕ್ತಿಯ ಅಸ್ತಿತ್ವವು ವ್ಯಾಸಕೂಟದ ಜಡರಿಗೆ ತಾತ್ತಿಕ ತಿಳಿವಾಗಿದ್ದರೆ, ಕನಕದಾಸನಿಗೆ ಅದೊಂದು ಸಹಜಾನುಭವವೇ ಆಗಿದ್ದಿತು. ಈ ಹಿರಿಮೆಯನ್ನು ಜಗಜ್ಜಾಹೀರು ಮಾಡಿದ ಕೀರ್ತಿ ವ್ಯಾಸರಾಯರದು. ಅವರ ಶ್ರೀ ಮಠದಲ್ಲಿ ಸಂಸ್ಕೃತವನ್ನಾಶ್ರಯಿಸಿದ ವ್ಯಾಸಕೂಟದವರೂ, ಕನ್ನಡವನ್ನು ದುಡಿಸಿಕೊಂಡ ದಾಸಕೂಟದವರೂ ಇದ್ದರಷ್ಟೆ. ಅವರು ಯಾರು ಏನೇ ಆಗಿರಲಿ; ವ್ಯಾಸರಾಯರ ದೃಷ್ಟಿಯಲ್ಲಿ ಪುರಂದರದಾಸ ಕನ್ನಡದ ಹೇಮಕೂಟ ; ಕನಕದಾಸ ಆ ಹೇಮಕೂಟದ ನೆತ್ತಿಯಮೇಲೆ ಹಾರಾಡುವ ಕನ್ನಡ ಬಾವುಟ ! ಎರಡು ಮೇಲೆ ಉದ್ದರಿಸಿದ ದಾಸವರೇಣ್ಯರ ಧ್ವನಿಪೂರ್ಣ, ಅರ್ಥಪೂರ್ಣ ಕೀರ್ತನೆ ಕನಕದಾಸನ ಕಾಲನಿರ್ಧಾರಕ್ಕೆ ತುಂಬಾ ಸಹಕಾರಿಯಾಗಿದೆ. ವ್ಯಾಸರಾಯ ಪುರಂದರ ದಾಸ ಮತ್ತು ಕನಕದಾಸ ಇವರು ಸಮಕಾಲೀನರು. ಈ ಮೂವರೂ ಜಗತ್ತಿಸಿದ್ದ ಚಕ್ರವರ್ತಿಗಳಲ್ಲೊಬ್ಬನಾದ ವಿಜಯನಗರದ ಶ್ರೀಕೃಷ್ಣದೇವರಾಯನ (ಕ್ರಿ.ಶ. ೧೫೦೯-೧೫೨೯) ವೈಭವದ ದಿನಗಳಲ್ಲಿ ಬದುಕು ಮಾಡಿದವರು. ಅವನ ಆಸ್ಥಾನದ ಭಕ್ತಿ, ಗೌರವ ಮನ್ನಣೆಗಳಿಗೆ ಪಾತ್ರರಾಗಿದ್ದವರು. ವ್ಯಾಸರಾಯರು ಅಂದು ಇದ್ದುದಕ್ಕೆ ಅವರಿಗೆ ಸಂಬಂಧಿಸಿದ ಅಂದರೆ ಆಳುವ ಪ್ರಭುವಿನಿಂದ ಅವರಿಗೆ ವ್ಯಾಸ ಸಮುದ್ರವನ್ನು ನಿರ್ಮಿಸುವುದಕ್ಕಾಗಿ ದೊರೆತ ಉಂಬಳಿ ವಿಷಯ ಹೊತ್ತ ೧೫೨೭ನೆಯ ಇಸವಿಯದೆಂದು ಹೇಳಲಾದ ಶಿವಮೊಗ್ಗೆಯ ಒಂದು ಶಾಸನ ಸಾಕ್ಷಿ ಹೇಳುತ್ತದೆ. ಕನಕದಾಸನು ವಿಜಯನಗರದಲ್ಲಿದ್ದುದಕ್ಕೆ ಅವನು ಶ್ರೀಕೃಷ್ಣದೇವರಾಯನ ಅಭಿಮಾನಿ ಆಶ್ರಿತನಾಗಿದ್ದುದಕ್ಕೆ ಶ್ರೀ ಕೃಷ್ಣದೇವರಾಯನನ್ನೂ, ಅವನ ಆಸ್ಥಾನವೈಭವವನ್ನೂ ಕಂಡುಂಡುದಕ್ಕೆ ಮೋಹನ ತರಂಗಿಣಿಯ
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೨೪
ಗೋಚರ