ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
v

ಪ್ರಕಾಶಕರ ಮಾತು


ಕನಕದಾಸರು ಕವಿ ವಿಶಿಷ್ಟವಾದ ಸಹಜ ಪ್ರತಿಭೆಯಿಂದ ಉದಾರತೆಯಿಂದ,
ವಸ್ತುವೈವಿಧ್ಯ ಹಾಗೂ ಛಂದೋ ವೈವಿಧ್ಯತೆಯಿಂದ, ಸಮಕಾಲೀನ ಪ್ರಜ್ಞೆಯಿಂದ
ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಕನಕದಾಸರು
ದಾಸರಲ್ಲಿ ಕವಿಗಳು ಇದೇ ಅವರ ವೈಶಿಷ್ಟ್ಯ. ಕನಕದಾಸರು ಹಲವಾರು ಭಾವಪೂರ್ಣ
ಕೀರ್ತನೆಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ರಚನೆ ಕೇವಲ ಕೀರ್ತನೆಗಳಿಗೆ
ಸೀಮಿತಗೊಳ್ಳದೆ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ
ನೃಸಿಂಹಸ್ತವ ಎಂಬ ಕೃತಿಗಳನ್ನೂ ರಚಿಸಿದ್ದಾರೆ. ನೃಸಿಂಹಸ್ತವ ಉಪಲಬ್ದವಿಲ್ಲ.
ತತ್-ನೀತಿ ಭಕ್ತಿಗಳಿಂದ ಮುಪ್ಪುರಿಗೊಂಡ ಹರಿಭಕ್ತಿಸಾರ, ನಳದಮಯಂತಿಯರ
ಹೃದಯಸ್ಪರ್ಶಿಯಾದ ಪಾತ್ರ ಚಿತ್ರಣದ ನಳಚರಿತ್ರೆ ಜನಾದರಣೀಯವಾಗಿದೆ. ಅಂದಿನ
ಸಮಾಜದಲ್ಲಿ ನೆಲಸಿದ್ದ ವರ್ಗ, ವರ್ಣದ ಅಂತರವನ್ನು ವ್ಯಂಗ್ಯವಾಗಿ, ಮಾರ್ಮಿಕವಾಗಿ
ಎತ್ತಿತೋರಿಸುವ ರಾಮಧಾನ್ಯಚರಿತ್ರೆಯು ವಿನೂತನವಾಗಿದ್ದು, ಕನ್ನಡ ಕಾವ್ಯಲೋಕದಲ್ಲಿ
ಅನನ್ಯ ಕೃತಿಯೆನಿಸಿದೆ. ಕನಕದಾಸರು ತಮ್ಮ ಸ್ಪೋಪಜ್ಞ ಸಾಧನೆ-ಸಿದ್ಧಿಗಳಿಂದ
ದಾಸ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಾಸಶ್ರೇಷ್ಠರಲ್ಲಿ
ಒಬ್ಬರಾದ ಕನಕದಾಸರ ೫೦೦ನೆಂತು ಜಯಂತ್ಯುತ್ಸವದ ಅಂಗವಾಗಿ
ಡಾ. ದೇ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಡಾ. ಹೆಚ್.ಜೆ. ಲಕ್ಕಪ್ಪಗೌಡ,
ಡಾ. ಬರಗೂರು ರಾಮಚಂದ್ರಪ್ಪ ಮತ್ತು ಡಾ. ಸಾ.ಶಿ. ಮರುಳಯ್ಯನವರ ನ್ನೊಳಗೊಂಡ
ಸಂಪಾದಕ ಮಂಡಳಿಯನ್ನು ರಚಿಸಿ, ಕನಕದಾಸರ ಸಮಗ್ರ ಸಾಹಿತ್ಯವನ್ನು ಕನಕಸಾಹಿತ್ಯ
ದರ್ಶನ ಎಂಬ ಹೆಸರಿನಲ್ಲಿ ನಾಲ್ಕು ಸಂಪುಟಗಳಲ್ಲಿ ಹೊರತಂದಿತ್ತು.
ಕನಕ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳು ಅಲಭ್ಯವಾಗಿದ್ದು, ಅದಕ್ಕೆ
ಸಾರ್ವಜನಿಕರಿಂದ ಅಪಾರ ಬೇಡಿಕೆಯಿರುವುದರಿಂದ ಪ್ರಸಕ್ತ, ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ವತಿಯಿಂದ ಮೂರು ಸಂಪುಟಗಳ ಶೀರ್ಷಿಕೆಯಲ್ಲಿ ಅಲ್ಲ
ಬದಲಾವಣೆಯೊಂದಿಗೆ ಮರುಮುದ್ರಣ ಮಾಡಲಾಗುತ್ತಿದೆ. ಮತ್ತು ಹೊಸದಾಗಿ
ಪ್ರೊ|| ಸುಧಾಕರ ಅವರು ಸಂಪಾದಿಸಿರುವ ಮೋಹನ ತರಂಗಿಣಿ ಕೃತಿಯನ್ನು
ಗದ್ಯಾನುವಾದದೊಂದಿಗೆ ಪ್ರಕಟಿಸಲಾಗುತ್ತಿದೆ.
ಕನಕದಾಸರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಮರುಮುದ್ರಿಸಲು ಸಹಕರಿಸಿದ
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದವರಿಗೂ, ಈ ಸಂಪುಟದ ಸಂಪಾದಕರಾದ
ಡಾ. ಸಾ.ಶಿ. ಮರುಳಯ್ಯ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಸದರಿ
ಸಂಪುಟಗಳನ್ನು ಹೊರತರಲು ಒಪ್ಪಿಗೆ ನೀಡಿದ ಇಲಾಖೆಯ ಕಾರ್ಯದರ್ಶಿಗಳಾದ