ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vijj ಆ ಬೇರೆಯವರಲ್ಲಿ ಕೆಲವರು ಉತ್ತರಿಸುತ್ತಾರೆ, ಕೆಲವರು ಉತ್ತರಿಸುವುದಿಲ್ಲ. ಲೇಖನಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸಿದ್ದಾಯಿತು. ಬರೆಯುವುದೊಂದೇ ಉಳಿದಿರುವ ಕೆಲಸವೆಂದು ಅಲ್ಪಮಂದಿ ಲೇಖಕರು ಬರೆದು ಮೂರುತಿಂಗಳಾದರೂ ಲೇಖನ ಹೊರಬರುವ ಸೂಚನೆ ಕಾಣುವುದಿಲ್ಲ. (ಪ್ರಾಯಶಃ ಕೆಲಸಕ್ಕಡ್ಡಿಯಾಗುವುದೇ ಆ ಹಿಡಿಮಂದಿಯ ಉದ್ದೇಶವಾಗಿರುವಂತೆ ತೋರುತ್ತದೆ.) - ಲೇಖನಗಳು ಕೈಸೇರಿದ ನಂತರ ಅವುಗಳನ್ನು ಸಂಪಾದಿಸುವ ಕಾರ್ಯ ಮತ್ತೂ ಜಟಿಲವಾದುದು. ಕೆಲವು ವಿಷಯಕ್ಕೆ ತಕ್ಕಂತೆ ಸಿದ್ದಗೊಂಡ ಲೇಖನಗಳ ಜತೆಗೆ, ಅತಿವ್ಯಾಪ್ತಿ ಅಪೂರ್ಣತೆ ಅಸಮಗ್ರತೆಯಿಂದ ಕೂಡಿದ ಲೇಖನಗಳೂ ಸೇರಿಕೊಳ್ಳುತ್ತವೆ. ಎರಡನೆಯ ಗುಂಪಿಗೆ ಸೇರಿದ ಲೇಖನಗಳನ್ನು ಪುನರಾವರ್ತನೆಗಾಗಿ ಹಿಂದಿರುಗಿಸಿದರೆ, ಕೋಪಿಸಿಕೊಳ್ಳುವ ಮಿತ್ರರೂ ಉಂಟು. ಕೆಲವರು ಗೊಣಗಿಕೊಂಡು, ಕೆಲವರು ಹೃತೂರ್ವಕವಾಗಿ ತಮ್ಮ ಲೇಖನಗಳನ್ನು ತಿದ್ದಿ ತೀಡಿ ಹಿಂದಿರುಗಿಸುತ್ತಾರೆ; ಕೆಲವರು ಪುನರಾವರ್ತನೆ ಮಾಡದೆಯೇ ಹಳೆಯದನ್ನೆ ನಕಲುಮಾಡಿ ಕಳಿಸುತ್ತಾರೆ; ಪುನರಾವರ್ತನೆ ಸಾಧ್ಯವಿಲ್ಲ, ಅಗತ್ಯವೂ ಇಲ್ಲ, ತಾವು ಬರೆದದ್ದನ್ನೇ ಅಚ್ಚುಮಾಡಿಸಿರೆಂದು ಅಥವಾ ಹಿಂದಿರುಗಿಸಿರೆಂದು ಬರೆದವರೂ ಇದ್ದಾರೆ ; ಏನೂ ಬರೆಯದೆ, ಉತ್ತರವನ್ನು ಸಹ ಕೊಡದಿರುವವರೂ ಇದ್ದಾರೆ. ಕೊನೆಗುಳಿಯುವುದು, ಕೆಲವು ಪ್ರಬಂಧಗಳಲ್ಲಿ ನಿರ್ಲಕ್ಷ್ಯದಿಂದಲೋ, ಅಜ್ಞಾನದಿಂದಲೋ ಉಳಿದಿರುವ ಕಾಗುಣಿತದ ತಪ್ಪುಗಳನ್ನು ತಿದ್ದುವ, ಅನಾವಶ್ಯಕವಾದ, ಪುನರಾವರ್ತನೆಯಾಗಬಹುದಾದ ಸಂಗತಿಗಳಿಗೆ ಕತ್ತರಿ ಪ್ರಯೋಗಮಾಡುವ ಕೆಲಸ. ಕತ್ತರಿ ಪ್ರಯೋಗ ಮಾಡಿದರೂ, ಪುನರಾವರ್ತನೆಗಳು ಇಂಥದೊಂದು ಸಂಕಲನ ಗ್ರಂಥದಲ್ಲಿ ಅನಿವಾದ್ಯವೆಂಬುದನ್ನು ವಿದ್ವಜ್ಜನರು ಬಲ್ಲರು. ಎಷ್ಟು ತಿಣುಕಿದರೂ ಕೈಬರಹದ ಮೋಡಿಯಿಂದಾಗಿ ಸಂಪಾದಕ ಗುರುತಿಸಲಾಗದ ಅಕ್ಷರಗಳು ಉಳಿದೇ ಉಳಿಯುತ್ತವೆ, ಗ್ರಂಥಗಳಿಂದ ಉದ್ಧತಗೊಳ್ಳುವ ಭಾಗಗಳಲ್ಲಿಯೂ ಅನೇಕ ತಪುಗಳುಳಿಯುತ್ತವೆ. ಕಿಪ್ರವಾಗಿ ಗ್ರಂಥ ಮುದ್ರಣ ಮಾಡಬೇಕಾದ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರು ಈ ಕೆಲವು ತಪ್ಪುಗಳು ನಿಂತು ಬಿಡುವ ಸಂಭವವುಂಟು. ತಪ್ಪುಗಳೇನಾದರೂ ನುಸುಳಿದ್ದರೆ ಲೇಖಕ, ಸಂಪಾದಕ, ಕರಡು ತಿದ್ದುಗಾರ ಮತ್ತು ಮುದ್ರಕರೆಲ್ಲರೂ ಹೊಣೆಗಾರರೆಂದು ಈ ಸಂದರ್ಭದಲ್ಲಿ ಹೇಳಬೇಕಾಗಿದೆ. ಲೇಖನಗಳನ್ನು ಸಂಪಾದಿಸಿದ ಬಗ್ಗೆ ಒಂದೆರಡು ಮಾತು ಅತ್ಯವಶ್ಯ ಸಮಿತಿಯ ಅಧ್ಯಕ್ಷರು ಲೇಖನಗಳನ್ನೊಮ್ಮೆ ಓದಿ, ತಮ್ಮ ಅಭಿಪ್ರಾಯದೊಡನೆ ಸಂಪಾದಕ ಮಂಡಲಿಯ ಮುಂದಿಡುತ್ತಾರೆ. ಅವರು ಅಧ್ಯಕ್ಷರಿಗೆ ಪೂರ್ಣ ಒಪ್ಪಿಗೆಯಾಗಿರುವ ಲೇಖನಗಳ ಮೇಲೆ ಕಣ್ಣಾಡಿಸಿ, ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ. ಅಧ್ಯಕ್ಷರಿಗೆ ಪೂರ್ಣ ಒಪ್ಪಿಗೆಯಾಗದ ಪ್ರಬಂಧಗಳನ್ನು ಸದಸ್ಯರು ಮನೆಗೆ ಕೊಂಡೊಯ್ದು ಓದಿ, ಟಿಪ್ಪಣಿ ಮಾಡಿಕೊಂಡು ಬರುತ್ತಾರೆ. ಆ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಅವುಗಳನ್ನು ಸಭೆಯಲ್ಲಿ ಪುನರ್ವಿಮರ್ಶಿಸಿ, ಅನಿವಾದ್ಯವೆಂದು ತೋರಿದಾಗ ಮಾತ್ರ,