ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

K" ಪುನರಾವರ್ತನೆಗೆಂದು ಕೆಲವನ್ನು ಲೇಖಕರಿಗೆ ಹಿಂದಿರುಗಿಸಿರುವುದುಂಟು. ಹೀಗೆ ಹಿಂದಿರುಗಿಸುವಾಗ ಮಂಡಲಿಯ ಸದಸ್ಯರು ಬುದ್ದಿವಂತರೆಂಬ ಭಾವನೆಯಾಗಲಿ, ಲೇಖಕರ ವಿದ್ವತ್ತಿನ ಬಗ್ಗೆ ಸಂಶಯವಾಗಲಿ ಇಲ್ಲ. ಮಂಡಲಿ ರೂಪಿಸಿಕೊಂಡ ಚೌಕಟ್ಟಿಗೆ ಹೊಂದಿಕೊಳ್ಳುವಂತೆ, ಒಟ್ಟು ಗ್ರಂಥದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಸಮಗ್ರತೆಯನ್ನು ಸಾಧಿಸುವ ದೃಷ್ಟಿಯಿಂದ ಲೇಖನಗಳನ್ನು ಪುನರ್ವಿಮರ್ಶಿಸುವಂತೆ ಲೇಖಕರಿಗೆ ಕಳಿಸಿಕೊಡಲಾಗುತ್ತದೆ. ಹೀಗಿರುವಾಗ ಒಬ್ಬರು ಮಿತ್ರರು ಬರೆದರು : “ನಾನು ಹಲವು ವರ್ಷಗಳಿಂದ ಅಧ್ಯಾಪನ ವೃತ್ತಿ ಕೈಗೊಂಡು, ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ಕೃಷಿಮಾಡಿ, ವಿದ್ವಾಂಸರ ಮೆಚ್ಚುಗೆ ಪಡೆದಿದ್ದೇನೆ. ಪ್ರಸ್ತುತ ಲೇಖನವನ್ನು ವಿದ್ವಾಂಸರು ಪ್ರಶಂಸಿಸಿದ್ದಾರೆ. ನಾನು ತಿದ್ದುಪಡಿ ಮಾಡಬೇಕಾದದ್ದೇನೂ ಇಲ್ಲ' ಎಂದು. 'ಲೇಖನಗಳನ್ನು ಬಿಡಿಬಿಡಿಯಾಗಿ ನೋಡಿದಾಗ ಅವು ಸ್ವಯಂಪೂರ್ಣವಾಗಿ, ನ್ಯೂನತೆಗಳಿಂದ ಮುಕ್ತವಾಗಿ ತೋರುತ್ತವೆ ; ಆದರೆ ಇಡೀ ಗ್ರಂಥದ ಹಿನ್ನೆಲೆಯಲ್ಲಿ ನೋಡಿದಾಗ ಕೆಲವು ಅರೆಕೊರೆಗಳು ಕಾಣುತ್ತವೆ ; ದೋಷ ಶೋಧವಾಗಲಿ ಖಂಡನೆಯಾಗಲಿ ಸಮಿತಿಯ ಉದ್ದೇಶವಲ್ಲ. ಲೇಖಕರ ವಿದ್ವತ್ತನ್ನು ಅಭಿರುಚಿಯನ್ನು ಅನುಭವವನ್ನು ಗಮನದಲ್ಲಿರಿಸಿಕೊಂಡೇ ಸಮಿತಿ ಅವರನ್ನು ಆಯ್ಕೆ ಮಾಡಿದೆ. ಬಿಟ್ಟು ಹೋಗಿರುವ ಅಂಶಗಳನ್ನು ಸೇರಿಸಬೇಕೆಂಬುದು ಸಮಿತಿಯ ಅಭಿಪ್ರಾಯ. ವಿಷಯ ಪ್ರತಿಪಾದನೆಯ ಬಗ್ಗೆ, ವಾಕ್ಯರಚನೆಯ ಬಗ್ಗೆ, ಅಭಿಪ್ರಾಯ ಸಮರ್ಥನೆಯ ಬಗ್ಗೆ ಸಮಿತಿ ತಲೆಹಾಕುವುದಿಲ್ಲ, ನಿಮ್ಮ ವಿದ್ವತ್ತು ಸರಿಯಾಗಿ ಪ್ರಕಾಶಕ್ಕೆ ಬರಲೆಂದೇ ಈ ಕ್ರಮಕೈಗೊಂಡಿದೆ ಎಂದವರಿಗೆ ಸಮಿತಿಯ ಅಧ್ಯಕ್ಷರು ಪತ್ರ ಬರೆದಾಗ, ಕೆಲವರಿಗೆ ಸಮಾಧಾನವಾಗಿದೆಯೆಂದು ಅವರು ಬರೆದ ಉತ್ತರಗಳಿಂದ ಸ್ಪಷ್ಟವಾಗಿದೆ. ಅವರಿಗೆ ತೊಂದರೆಯಾದದ್ದಕ್ಕಾಗಿ ನಾನು ನನ್ನ ಮತ್ತು ಮಂಡಲಿಯ ಪರವಾಗಿ ಕ್ಷಮೆಯಾಚಿಸುತ್ತೇನೆ. ಸಮಿತಿ ಯಾವೊಂದು ಲೇಖನವನ್ನು ತಿರಸ್ಕರಿಸಿಲ್ಲ. ಲೇಖಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಅವರೇ ಜವಾಬ್ದಾರರು. ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿದರೂ, ಹಸ್ತಪ್ರತಿಗಳಲ್ಲಿರುವ ದೋಷಗಳು ಅಚ್ಚಿನಲ್ಲಿಯೂ ಪುನರಾವರ್ತನೆಯಾಗಿವೆ. ಶ್ರೀ ಶಾರದಾಪ್ರಸಾದರು ಕರಡು ತಿದ್ದುವುದರಲ್ಲಿ ಜಾಣರು; ಕರಡಿನ ಬಹುಭಾಗದ ಮೇಲೆ ನಾನೂ ಕಣ್ಣಾಡಿಸಿದ್ದೇನೆ ; ಹ. ಕ. ರಾಜೇಗೌಡರು ಸಂತೋಷದಿಂದ ಕರಡು ತಿದ್ದಿದ್ದಾರೆ. ಆದರೂ ಕೆಲವು ದೋಷಗಳು ಉಳಿದಿರಲಾಗಿ ವಾಚಕರು ಕ್ಷಮಿಸುವರೆಂದು ನಂಬಿದ್ದೇನೆ. ಸದ್ಯಕ್ಕೆ ಈ ಪ್ರಶಸ್ತಿ ಗ್ರಂಥ ಹೊರಬಂದಿದೆ. ಕನಕ ಸಾಹಿತ್ಯವನ್ನೊಳಗೊಂಡ ಎರಡು ಸಂಪುಟಗಳು ಈ ವರ್ಷ ತುಂಬುವುದರೊಳಗಾಗಿ ಮುದ್ರಣಗೊಂಡು ಹೊರ ಬರಲಿವೆಯೆಂದು ಮಂಡಲಿಯ ಪರವಾಗಿ ಆಶ್ವಾಸನೆ ನೀಡಬಯಸುತ್ತೇನೆ. ಈ ಪವಿತ್ರ ಕಾರ್ಯದಲ್ಲಿ ಸಹಾಯ ಹಸ್ತನೀಡಿ, ಸಂತೋಷದಿಂದ ಸಹಕರಿಸಿದ, ಕನ್ನಡನಾಡಿನ ಸಂಪತ್ತೆನ್ನಬಹುದಾದ ವಿದ್ವಜ್ಜನರು ಮನಸ್ಸು ಮಾಡದಿದ್ದರೆ