ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನಕ ಸಾಹಿತ್ಯ ದರ್ಶನ-೨ ನಿದ್ದುದಕೆ ಫಲವೇನು ಭಕ್ತಿ ವಿ ರುದ್ಧವಾಗದವೋಲು ರಕ್ಷಿಸು ನಮ್ಮನನವರತ ೭೬ ಕೇಳುವುದು ಕಡುಕಷ್ಟ ಕಷ್ಟದ ಬಾಳುವೆಯ ಬದುಕೇನು ಸುಡು ಸುಡು ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ಬಾಳಬೇಕೆಂಬವಗೆ ನೆರೆ ನಿ ನ್ಯೂಳಿಗವ ಮಿಗೆ ಮಾಡಿ ಭಕ್ತಿಯೊ ಛಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ R21 ದೇಹಧಾರಕನಾಗಿ ಬಹುವಿಧ ಮೋಹದೇಳಿಗೆಯಾಗಿ ಮುಕುತಿಗೆ ಬಾಹಿರನು ತಾನಾಗಿ ವಿಷಯಾದಿಗಳಿಗೊಳಗಾಗಿ ದೇಹವೀ ಸಂಸಾರವೆನ್ನದೆ ಮೊಹಿಸುವ ಮತಿಗೇಡಿ ಮಾನವ ಸಾಹಸಿಯೆ ಸಟೆ ಮಾತು ರಕ್ಷಿಸು ನಮ್ಮನನವರತ [೭೮ ಅಳಿವ ಒಡಲನು ನೆಚ್ಚಿ ವಿಷಯಂ ಗಳಿಗೆ ಕಾತರನಾಗಿ ಮಿಗೆ ಕಳ ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ ತಿಳಿದು ಮನದೊಳು ನಿನ್ನ ನಾಮಾ ವಳಿಯ ಜಿಹ್ನೆಗೆ ತಂದು ಪಾಪವ ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ ವರುಷ ನೂರಾಯುಷ್ಯವದರೊಳ ಗಿರುಳು ಕಳೆದೈವತ್ತು ಐವ ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮೂವತ್ತು ಇರದೆ ಸಂದುದು ಬಳಿಕವಿಪ್ಪತು