ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರಿಭಕ್ತಿ ಸಾರ

ವರುಷವದರೊಳಗಾದುದಂತಃ ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ

ಊರು ತನಗೊಂದಿಲ್ಲ ಹೊತ್ತ ಶ ರೀರಗಳ ಮಿತಿಯಿಲ್ಲ ತಾ ಸಂ ಚಾರಿಸದ ಸ್ಥಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ ಬೇರೆ ಹೊಸತೊಂದಿಲ್ಲ ಉಣ್ಣದ ಸಾರ ವಸ್ತುಗಳಿಲ್ಲ ತನು ಸಂ ಚಾರವೇ ಬಗೆಯಾಯ್ತು ರಕ್ಷಿಸು ನಮ್ಮನನವರತ [ ೮೧) ಗೋಪುರದ ಭಾರವನು ಗಾರೆಯ ರೂಪುದೋರಿದ ಪ್ರತಿಮೆಯಂದದೊ ಟೀ ಪರಿಯ ಸಂಸಾರ ಭಾರವನಾರು ತಾಳುವರು ತಾ ಪರಾಕ್ರಮಿಯೆಂದು ಮನುಜನು ಕಾಪಥವನಯುವನು ವಿಶ್ವ ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ (೮೨) ಬೀಜ ವೃಕ್ಷದೊಳಾಯ್ತು ವೃಕ್ಷಕೆ ಬೀಜವಾರಿಂದಾಯ್ತು ಲೋಕದಿ ಬೀಜವೃಕ್ಷನ್ಯಾಯವಿದ ಭೇದಿಸುವರಾರಿನ್ನು ಸೋಜಿಗವ ನೀ ಬಲ್ಲೆ ನಿನ್ನೊಳು ರಾಜಿಸುತ ಮೊಳೆದೋರುವುದು ಸುರ ರಾಜನಂದನ ನಮಿತ ರಕ್ಷಿಸು ನಮ್ಮನನವರತ (೮೩) ತೊಗಲು ಬೊಂಬೆಗಳಂತೆ ನಾಲಕು ಬಗೆಯ ನಿರ್ಮಾಣದಲಿ ಇದರೊಳು ನೆಗಳಿದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ ಬಗೆಬಗೆಯ ನಾಮಾಂಕಿತದ ಜೀ