ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಂಗಳಂ ಸರ್ವದಿಭೂತಗೆ ಮಂಗಳಂ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ್ವತಂತ್ರಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್ಯಕೀರ್ತಿಗೆ ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ ಮಂಗಳಂ ದೌಪದಿಯ ಪೊರೆದಗೆ JOL ಮಂಗಳಂ ಧುವರಾಜಗೊಲಿದರೆ ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ 191 ಜಯ ಸುರೇಂದ್ರವರಾರ್ಚಿತಾಂಪ್ರಿಯ ಜಯ ಪುರಾಧಿಪಸಂಸ್ತುತಾತ್ಮನೆ ಜಯ ಮಹಾಮುನಿ ಯೋಗಗಮ್ಯನೆ ಮೇಘಮೇಚಕನೆ ಜಯ ಜನಕಜೆ ಮುಖಾಬ್ದಮಿತ್ರನೆ ಜಯ ಕಲಾಧಿಪ ಸೂರ್ಯನೇತ್ರನೆ ಜಯ ಜಯ ಜಗನ್ನಾಥ ದೇವನೆ ಚೆನ್ನಕೇಶವನೆ
- * * *
121