ಪುಟ:ಕನ್ನಡದ ಬಾವುಟ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಯ ವಿಕಾರ. ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದವರು ಕಾಯಗೊಂಡಿ ದ್ದರೆನಬೇಡ. ಬಂಜೆ ಬೇನೆಯನರಿಯಳು. ಬಲತಾಯಿ ಮುದ್ದ ಬಲ್ಲಳೆ ? ನೊಂದ ನೋವ ನೋಯದವರೆತ್ತ ಬಲ್ಲರು ? ಚೆನ್ನಮಲ್ಲಿಕಾರ್ಜುನ, ನೀನಿರಿದಲಗು ಒಡಲಲ್ಲಿ ಮುರಿದು ಹೊರಳುವಳ ನೀವೆತ್ತ ಬಲ್ಲರೆ ಎಲೆ ತಾಯಿಗಳಿರಾ? ಅಳಿ ಸಂಕುಳವೇ, ಮಾಮರವೇ, ಬೆಳುದಿಂಗಳೇ, ಕೋಗಿಲೆಯೇ, ನಿಮ್ಮ ನಿಮ್ಮನೆಲ್ಲರನು ಒಂದ ಬೇಡುವೆನು. ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡರೆ ಕರೆದು ತೋರಿರೆ. ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ ? ಸರವೆ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ ? ಎರಗಿ ಬ೦ದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ ? ಕೊಳನ ತಡಿಯೋಳಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೆ ? ಗಿರಿಗಹ್ವರ ದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ ? ಚೆನ್ನ ಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ನೀವು ಹೇಳಿರೆ, ನೀವು ಹೇಳಿರೆ. ಆಕಾರವಲ್ಲದ ನಿರಾಕಾರದ ಲಿಂಗವ ಕೈಯಲ್ಲಿ ಹಿಡಿದು, ಕೊರಳಲ್ಲಿ ಕಟ್ಟಿದೆ ವೆಂದೆಂಬರು ನರಕಿ ಜೀವಿಗಳು. ಹರಿ ಬ್ರಹ್ಮರು ವೇದಶಾಸ್ತ್ರಂಗಳರಸಿ ಕಾಣದ ಲಿಂಗ, ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ. ಕರ್ಮಕ್ಕೆ ನರಕವಲ್ಲದೆ, ಲಿಂಗವಿಲ್ಲ. ವೈರಾಗ್ಯಕ್ಕೆ ಮುಕ್ತಿಯಲ್ಲದೆ, ಲಿಂಗವಿಲ್ಲ. ಜ್ಞಾನಕ್ಕೆ ಪರಿಭ್ರಮಣ ವಲ್ಲದೆ, ಲಿಂಗವಿಲ್ಲ. ಇದು ಕಾರಣ ಅದೈತದಿಂದ ತನ್ನ ತಾನರಿದು ತಾನಾದರೆ. ಚೆನ್ನಮಲ್ಲಿಕಾರ್ಜುನ ಲಿಂಗ ತಾನೆ ಬೇರಿಲ್ಲ. ಹೊಳೆವ ಕೆಂಜೆಡೆಗಳ, ಮಣಿಮುಕುಟ ಒಪ್ಪುವ, ಸುಲಿಪಲ್ಲ, ನಗೆಮೊಗದ ಕಂಗಳ, ಕಾಂತಿಯಿಂ ಈರೇಳು ಭುವನಮಂ ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು, ಕಂಡೆನ್ನ ಕಂಗಳ ಬರ ಹಿಂಗಿಂದು, ಗಂಡ ಗಂಡರೆಲ್ಲ ಹೆಂಡ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು. ಜಗದಾದಿಶಕ್ತಿಯೊಳು ಬೆರಸಿ ಯೊಡನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು. ೧೦. ಹರಿಹರ : ಭಕ್ತಿಯ ಆವೇಶ ಕರೆವುದದೆಂದು ಕಾಲ್ವಡಿಸಿಕೊಳ್ಳುದದೆಂದು ದಯಾಕಟಾಕ್ಷದಿಂ ಪೊರೆವುದದೆಂದು ಮೆಲ್ಕು ಡಿಗಳಿಂ ಮದವೇ ಆ ಪುದೆಂದು ಸೋ೦ಕಿನಿಂ ಹರಿಪುದದೆಂದು ಸಂತಸದೆ ಪೆರ್ಚಿಪುದೆಂದು ಮನಸ್ವಿ ನೀಂ ಕರಂ ಕರಗಿಪುದೆನ್ನ ನೆಂದೊಸೆದು ಪೇಳೆನಗಿಂದೆಲೆ ಹಂಪೆಯಾಳನೇ