ಪುಟ:ಕನ್ನಡದ ಬಾವುಟ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ನಿರ್ವ್ಯಾಜ ಭಕ್ತಿಯಿನಿಂತು ಪೊಗಳ ನಂತರಂ ಪುರುಷಪುಂಗವಂ ಪುಂಗವ ಧ್ವಜಂಗಾತ್ಮಾರ್ಪಣಂ ಗೆಯ್ಲಿ ನಿಸಾನುಂ ಪೊಳನಿಮಿಷಾಕ್ಷಿಯಿಂ ನಿರೀಕ್ಷಿಸಿ ಪಳಿಕುಗೊಡದೊಳಗೆ ಪೊರಗು ಜ್ವಳಿಪಂತರ್ಜ್ಯೋತಿಯಂತಿರೊಳಗಂ ಪೊರಗಂ ಬೆಳಪ ಮನೋಮಧ್ಯ ಸಮು ಜ್ವಲಿಂಗವನರಸನಳ್ಳರಿ೦ ಜಾನಿಸಿದಂ ಅಣಿಯರನುಭವನ ಸುಗುಣನು ನೆಣಿಪಂತಿರೆ ನಚ್ಚಿ ಮಚ್ಚಿ ತನ್ಮಹಿಮೆಗಳ೦ ಗುಣಿಪಂತಿರೆ ಜನಸಾಲಾ ಗ್ರಣಿ ಪಂಚಾಕ್ಷರಮನಮಮ ಜಪಿಸಿದನಾಗ ೧೩, ದಾಸರ ಪದಗಳು ಪುರಂದರದಾಸರು ಸು. ೧೫೪೦ ಈ ಪರಿಯ ಸೊಬಗಾವ ದೇವರಲಿ ಕಾಣೆ ಗೋ ಪೀಜನಪ್ರಿಯ ಗೋಪಾಲಗಲ್ಲದೆ || ಪ || ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕಾಂತನು ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ ಗುರುವತನದಲಿ ನೋಡೆ ಜಗದಾದಿ ಗುರುವು ಪಾವನತ್ವದಿ ನೋಡೆ ಅಮರಗಂಗಾಜನಕ ದೇವತದಲಿ ನೋಡೆ ದಿವಿಜರೊಡೆಯ | ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ ಆವ ಧೈರ್ಯದಿ ನೋಡೆ ಅಸುರಾಂತಕ ಗಗನದಲಿ ಸಂಚರಿಪ ಗರುಡದೇವನೆ ತುರಗ ಜಗತೀಧರ ಶೇಷ ಪರಿಯಂಕಶಯನ | ನಿಗಮಗೋಚರ ಪುರಂದರವಿಠಲಗಲ್ಲದೆ ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ ಬಿನ್ನಹಕೆ ಬಾಯಿಲ್ಲವಯ್ಯಾ ಅನಂತ ಅಪರಾಧ ಎನ್ನಲ್ಲಿ ಇರಲಾಗಿ || ಪ ||