ಪುಟ:ಕನ್ನಡದ ಬಾವುಟ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿಶುಮೋಹ ಸತಿಮೋಹ ಜನನಿಜನಕರ ಮೋಹ ರಸಿಕ ಮಿತ್ರರ ಮೋಹ ರಾಜಮೋಹ ಪಶುಮೇಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ ಅನ್ನ ಮದ ಅರ್ಥಮದ ಅಖಿಲವೈಭವದ ಮದ ಮುನ್ನ ಪ್ರಾಯದ ಮದವು ರೂಪಮದವು ತನ್ನ ಸತ್ವದ ಮದ ಧಾತ್ರಿವಶವಾದ ಮದ ಇನ್ನು ತನಗೆದುರಿಲ್ಲವೆಂದೆಂಬ ಮದದಿಂದ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನನ್ನ ಜೀವನದಾಸೆ ಪುರಂದರವಿಠಲ 6 dL 2 (iii) ಉದರವೈರಾಗ್ಯವಿದು ನಮ್ಮ ಪದುಮನಾಭನಲಿ ಲೇಶ ಭಕುತಿಯಿಲ್ಲ ! ಪ || ಉದಯಕಾಲದಲೆದು ಗಡಗಡ ನಡುಗುತ ನದಿಯೊಳು ಮಿಂದೆವೆಂದು ಹೇಳುತಲಿ ಮದ ಮತ್ಸರ ಮೋಹ ಒಳಗೆ ತುಂಬಿಟ್ಟುಕೊಂಡು ಬದಿಯಲಿದ್ದವರಿಗಾಶ್ಚರ್ಯ ತೋರುವುದು ಕಂಚುಗಾರರಾ ಅಂಗಡಿಯಂದದಿ | ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ ಮಿಂಚಲೆನುತೆ ಬಹು ಜೋತಿಗಳನೆ ಹಚ್ಚಿ ವಂಚನೆಯಲಿ ಘನಪೂಜೆ ಮಾಡುವುದು ಕರದೊಳು ಜಪಮಣಿ ಬಾಯೊಳು ಮಂತ್ರವು ಅರಿವೆಯ ಮುಸುಕನು ಮೋರೆಗೆ ಹಾಕಿ ಪರಸತಿ ಪರಧನಕಾಗಿ ಚಿಂತಿಸುತೆ | ಪರಮವೈರಾಗ್ಯದ ಮೂರ್ತಿಯೆನಿಸುವುದು ಬೂಟಕತನದಲಿ ಬಹಳ ಬಕುತಿಮಾಡಿ ನೋಟಕೆ ಇವನಿಗೆ ಸರಿಯಿಲ್ಲೆ ನಿಸಿ ನಾಟಕ ಸ್ತ್ರೀಯಳಂತೆ ಬಯಲ ಡಂಬವ ತೋರೆ ಊಟದ ಮಾರ್ಗದ ಜ್ಞಾನವಿದಲ್ಲದೆ