ಪುಟ:ಕನ್ನಡದ ಬಾವುಟ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೭ ಏನು ಕಾರಣ ಯದುಪತಿ ಯನು ಮರೆತಿರಿ ಧನ ಧಾನ್ಯ ಪುತ್ರರು ಕಾಯುವರೆ | ಇನ್ನಾದರು ಏಕೋಭಾವದಿ ಭಜಿಸಿರೊ ಚೆನ್ನ ಶ್ರೀ ಪುರಂದರವಿಠಲರಾಯನ (vi) ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದೇನು ಫಲ || ಪ || ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯ ಮಾಡಿದರೇನು ಫಲ ಸಟೆಯನ್ನಾಡುವ ಮನುಜರು ಸಂತತ ನಟನೆಯ ಮಾಡಿದರೇನು ಫಲ ಕಪಟತನದಲಿ ಕಾಡುತ ಜನರನು ಜಪವನು ಮಾಡಿದರೇನು ಫಲ ಕುಸಿತತನವನು ಬಿಡದೆ ನಿರಂತರ ಉಪವಾಸಮಾಡಿದರೇನು ಫಲ ಮಾತಾಪಿತರನು ಬಳಲಿಸಿದಾತನು ಯಾತ್ರೆಯ ಮಾಡಿದರೇನು ಫಲ ಘಾತಕತನವನು ಬಿಡದೆ ನಿರಂತರ ಗೀತೆಯನೋದಿದರೇನು ಫಲ ಪತಿಗಳ ನಿ೦ದಿಪ ಸತಿಯರು ಬಹು ವಿಧ ವ್ರತಗಳ ಮಾಡಿದರೇನು ಫಲ ಅತಿಥಿಗಳೆಡೆಯಲಿ ಭೇದವ ಮಾಡುತ ಗತಿಯನು ಬಯಸಿದರೇನು ಫಲ ಹೀನಗುಣಂಗಳ ಹಿಂಗದೆ ಗಂಗೆಯ ಸ್ನಾ ನವ ಮಾಡಿದರೇನು ಫಲ ಶ್ರೀನಿಧಿ ಪುರಂದರವಿಠಲನ ನೆನೆಯದೆ ಮೌನವ ಮಾಡಿದರೇನು ಫಲ (vii) ಕಂಡು ಕಂಡು ಎನ್ನ ಕೈ ಬಿಡುವರೆ ಪುಂಡರೀಕಾಕ್ಷ ಪುರುಷೋತ್ತಮ ದೇವ || ಪ ||