ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಕಲ್ಲಿನಲಿ ಕಲ್ಪವೃಕ್ಷ ಕಾಣಾ | ಬೇಡಿದ ಫಲಗಳ 1 ಕೊಡುವ ಬೀದ ಉಂಟು ನೋಡಣ್ಣಾ ||

ಗುರು ಲಿಂಗ ಜಂಗಮ ಚರಣ | ಹೊಂದಿಡೋ ಎಂದಿಗಗಲದೆ | ಬೆಲ್ಲ ಸವಿಯು ಕೂಡಿದಂತೆ | ಕೂಡಿಕೊಳ್ಳೋ ನೀನು ಇಲ್ಲೆ

ಅನಾಹತನಾದವು ಎಲ್ಲ ವಿಕಾರ ಕಾಮನೆಗಳನ್ನು ನಾಶಗೊಳಿಸುವದು (ರಾಗ-ಮಾಂಡ, ತಾಲ-ಕೇರವಾ )

ನಾದವ ಕೇಳುತ ನಿದ್ರೆಯ ಮಾಡುವ | ಬ್ರಹ್ಮವು ತಾನಾಗಿ ||

ನಾದವ ಕೇಳಲು ನಾನಾ ಗುಣಗಳು | ಹೋದವು ತಾವಾಗಿ

ಕೂಡಿತು ದೃಷ್ಟಿ ಪರಬ್ರಹ್ಮದೊಳು ತಾ | ಅನುದಿನದಲ್ಲಿ ಬೇಗೀ ||

ಮನಸೇಂದ್ರಿಯಗಳು ಹುಡುಕಿದರಿಲ್ಲಾ | ಹೋದವು ತಾವಾಗಿ

ನಾನಾ ವರ್ಣದ ಛಾಯವ ನೋಡುತ | ನಿದ್ರೆಯ ಮಾಡಿದೆನೋ ||

ಭಾನುಕೋಟಿ ಪ್ರಕಾಶದ ಬೆಳಕಲಿ ನಾದವ ಕೇಳಿದೆನೋ

ಕಾಣದ ರೂಪವು ಕಾಣುತ್ತಲೆ ನಾ | ಕಾಮಿಸಿ ಮಲಗಿದೆನೋ ||

ಬೋಧ ಚಿದಾನಂದ ಸದ್ಗುರುನಾಥನ | ಧ್ಯಾನವ ಮಾಡಿದೆನೋ

ಪಾರಮಾರ್ಥಿಕ ಪರಮಾಮೃತದ ಸಿದ್ಧತೆಯನ್ನು ಬಣ್ಣಿಸುವ ಹಿರಿದಾದ ವಾಕ್ ಸಿದ್ಧಿಯ ರೂಪಕ (ರಾಗ-ಭೂಪ, ತಾಲ-ದೀಪಚಂದಿ)

ನೆಲ್ಲು ಕುಟ್ಟುಣು ಬಾರಮ್ಮಾ | ಇಬ್ಬರು ಕೂಡಿ

ನೆಲ್ಲು ಕುಟ್ಟುಣು ಬಾರೆ | ನಿಲ್ಲದೆ ಬೆನ್ನು ಹತ್ತಿ | ಹನ್ನೆರಡು ಹದಿನಾರು ನಲ್ಲೆಯರು ಕೂಡಿಕೊಂಡು