ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ ಜಾತಿಯೊಳು ಪುಟ್ಟಿ, ಅಜಾತನಾದವಗೆ | ಜಾತಿ ಧರ್ಮಗಳು ಆತನೇನು || ಜ್ಯೋತಿಪ್ರಕಾಶ ನಮ್ಮ ಕೂಡಲೂರೇಶನು | ದಾತ ಪ್ರಖ್ಯಾತ ಅವಧೂತನವನು 5 ತನ್ನ ತಾ ಕಂಡ ಬಳಿಕ ದೇಹ ಇದ್ದರೂ ಸರಿ, ಬಿದ್ದರೂ ಸರಿ ! ( ರಾಗ- ದರಬಾರಿ, ತಾಲ-ಕೇರವಾ) ಇದ್ದರಿರಲೀ ದೇಹಾ ಹೋದರೆ ಹೋಗಲಿ

ಪಂಚತತ್ವ ಭಾವನಳಿದು ಪರಮ ಆಸನ ಮುದ್ರೆ ಬಲಿದು | ಸಂಚಿತಾರ್ಥ ಕರ್ಮ ಹರಿದು, ಸರ್ವಸಾಕ್ಷಿಯಾದ ಮೇಲೆ

ಹೆಣ್ಣು ಹೊನ್ನು ಮಣ್ಣು ಬಿಟ್ಟು ಕಣ್ಣಿನೊಳಗೆ ಕಣ್ಣು ಕಂಡು | ಕನ್ನಡಿ ಹಿಡಿದು ನೋಡಿದಂತೆ ತನ್ನ ನಿಜವ ತಿಳಿದ ಬಳಿಕ

ಸುತ್ತು ಸುಳಿವ ಮನವ ನಿಲಿಸಿ, ಚಿತ್ತ ಕಳೆ ಪೂರ್ಣ ತುಂಬಿ | ಮತ್ತೆ ಗಂಗಾ ಯಮುನೆ ಸ್ನಾನ ನಿತ್ಯ ನೇಮದಿ ಮಾಡಿದ ಮೇಲೆ || ೨ ||

ಮಲ ಮಂತ್ರ ಜಪವು ಬಲಿದು, ಸೂಲಸೂಕ್ಷ್ಮ ಕಾರಣ ತಿಳಿದು | ಕಾಲತ್ರಯದ ಸಮಯನಳಿದು, ಮೂಲಬ್ರಹ್ಮನಾದ ಮೇಲೆ

ಗುರುವಿನ ಜ್ಞಾನ ಕಣ್ಣಿಲೆ ಕಂಡು, ಪರಕೆ ಪರನ ನೆನಿಸಿಕೊಂಡು | ಶ್ರೀಗಿರಿಮಲ್ಲೇಶನ ಕಂಡು, ಪರಮಪಾವನನಾದ ಮೇಲೆ


ವಿಶ್ವದ ಮೂಲೆಮೂಲೆಗಳಲ್ಲಿ ಪರಮಾತ್ಮನನ್ನು ಕಂಡು ಸಂತನು ಅತ್ಯಾನಂದದಲ್ಲಿ ಮೈಮರೆಯುವನು ( ರಾಗ-ಕಾಫಿ, ತಾಲ-ಕೇರ ವಾ )

ತನ್ನ ತಾ ತಿಳಿದ ಮೇಲೆ ಇನ್ನೇ ನಿನ್ನೇನು | ತನ್ನಂತೆ ಪರರ ಜೀವರ ಮನ್ನಿಸಿ ಮೂಕನಾದ ಮೇಲೆ

ತಾನೆ ಪೃಥ್ವಿ ಆಪ ತೇಜಾ | ತಾನೇ ವಾಯು ಆಕಾಶಾತ್ಮಾ | ತಾನೆ ಸೂರ್ಯ ಚಂದ್ರ ತಾರಾ | ತಾನೇ ಬ್ರಹ್ಮಾಂಡಾದ ಮೇಲೆ || ೧ ||

ತಾನೆ ಜಿಹ್ವಾ ಘ್ರಾಣ ನೇತ್ರಾ | ತಾನೆ ಶೋತೃ ತ್ವಕ್ಕು ಹೃದಯಾ | ತಾನೆ ಕಾಯಾ ಕರಣಾ ಹರಣಾ | ತಾನೆ ಬಂಡಾಂಡಾದ ಮೇಲೆ