9 ಕನ್ನಡ ಪರಮಾರ್ಥ ಸೋಪಾನ
ದಿನಕ್ಕೆ ವರುಷವರುಷಕ್ಕೆ ಬೆಳೆಯುತ್ತಿರಬೇಕು; ಮತ್ತು ಅದರ ಫಲವಾಗಿ ಸಾಧಕನು ಬರಬರುತ್ತ ಪರಮಾತ್ಮನನ್ನು ಸಮೀಪಿಸುತ್ತಿರಬೇಕು. ಕೊನೆಗೆ ಅವನು ಪರಮಾತ್ಮನಲ್ಲಿ ಬೆರೆಯುವನೋ ಇಲ್ಲವೋ, ನಮಗೆ ಹೇಳಲು ಬರು ವಂತಿಲ್ಲ! ಏಕೆಂದರೆ ಸಂತಶ್ರೇಷ್ಠರಾದ ಜ್ಞಾನೇಶ್ವರರು ಉಸುರುವ ಮೇರೆಗೆ, "ಭಕ್ತ-ಭಗವಂತರಲ್ಲಿ ಕೆಲವೊಂದು ಭೇದವು ಕೊನೆಯ ವರೆಗೂ ಉಳಿದೇ ತೀರುವದು. ಸಾರ್ವತ್ರಿಕತೆಯು (Universality) ಅಂದರೆ ಎಲ್ಲಾ ಮಾನವ ಬಳಗಗಳಲ್ಲಿಯ ಅಸ್ತಿತ್ವ, ಅನುಭಾವದ ಇನ್ನೊಂದು ಕುರುಹು. ವಿಶ್ವದ ಎಲ್ಲ ಅನುಭಾವಿಗಳ ಅನುಭಾವಗಳನ್ನು ಕಲೆಹಾಕುವುದು ಸಾಧ್ಯವಾದರೆ ಅವುಗಳಲ್ಲಿ ನೂರಕ್ಕೆ ಎಂಬತ್ತರಿಂದ ತೊಂಬತ್ತರಷ್ಟು ಸಾಮ್ಯವಿರುವದನ್ನು ಕಾಣಬಹುದು. ಆತ್ಮಾನಂದವು (Beatification) ಅನುಭಾವದ ಅತಿ ಮಹತ್ವದ ಕುರುಹು. ಈ ಆತ್ಮಾನಂದದ ವಿಷಯವಾಗಿಯೂ, ಒಂದು ತತ್ವಜ್ಞಾನದ ಪರಂಪರೆಯು ಬೆಳೆಯಲಿದೆ. ಅದರ ತಾತ್ವಿಕ ವಿವೇಚನೆಯನ್ನೊಳಗೊಂಡ ಹೊಸ ಗ್ರಂಥ ವನ್ನು ಬರೆಯುವ ಅಪೇಕ್ಷೆಯು ಬಹುಕಾಲದಿಂದ ನನ್ನಲ್ಲಿ ನೆಲೆಸಿರುವದು ಎಂದು ಡಾ| ರಾನಡೆಯವರು ಬರೆದಿರುವರು. ಜಗತ್ತಿನಲ್ಲಿಯ ಎಲ್ಲ ಅನುಭಾವಿ ಗಳು ತಮ್ಮೆದುರಿರಿಸಿದ ಅತ್ಯುನ್ನತವಾದ ಧೈಯವೆಂದರೆ ಆತ್ಮಾನಂದವೇ. ಈ ಆನಂದಾನುಭವವೇ ಎಲ್ಲ ಸತ್ಪುರುಷರನ್ನು ಒಂದೆಡೆ ತರುವದು. ಮತ್ತು ಅವರನ್ನು ಏಕಸೂತ್ರದಿಂದ ಕಟ್ಟುವದು.
ಕನ್ನಡ ಅನುಭಾವಿಗಳನ್ನು ಸಾಮಾನ್ಯವಾಗಿ ಎರಡು ಪಂಗಡಗಳಲ್ಲಿ ವಿಂಗ ಡಿಸಬಹುದು: ಶೈವರು ವೈಷ್ಣವರು ಎಂದು. ನಿಜವಾದ ಅನುಭಾವಿಯು ಶೈವನೂ ಅಲ್ಲ ವೈಷ್ಣವನೂ ಅಲ್ಲ. ಅವೆರಡೂ ಒಂದೇ ಅನುಭಾವದಲ್ಲಿ ಕೂಡಬಹುದು. ಎಲ್ಲ ಅನುಭಾವಿಗಳಿಗೆ ಕಾಣುವ ಶೇಷನು, ಶೈವರಿಗೂ ವೈಷ್ಣವರಿಗೂ ಒಂದೇ ಬಗೆಯಾಗಿ ಪೂಜ್ಯನು. ಶೇಷನು ಶಿವನ ಭೂಷಣನಾದರೆ ವಿಷ್ಣುವಿನ ಹಾಸಿಗೆಯಾಗಿರುವನು. ಅವನು ಅವರಿಬ್ಬರನ್ನೂ ಒಂದುಗೂಡಿಸುವನು. "ನಾನಿಲ್ಲಿ ಅವರೀರ್ವರ (ಶೈವ ವೈಷ್ಣವರ) ಅನುಭಾವಗಳನ್ನು, ಇಬ್ಬರಿಗೂ ಆಗುವ ಅನುಭವಗಳನ್ನು ವಿವರಿಸಲಿರುವೆ; ಅವರಲ್ಲಿಯ ಭೇದಗಳನ್ನಲ್ಲ. ಅನುಭಾವದ ಬೆಳವಣಿಗೆಗೆ ಅವರಿತ್ತ ಕಾಣಿಕೆಯೇನು ಎಂಬುದೆ ನನ್ನೆದುರಿನ ಸಮಸ್ಯೆ!" ಹೀಗೆಂದಿರುವರು ಡಾ| ರಾನಡೆಯವರು. ಜಗತ್ತಿನ ಬೇರೆ ಅನು
ಈ ದೃಷ್ಟಿಯಿಂದ ಕನ್ನಡ ಅನುಭಾವಿಗಳಲ್ಲಿಯೂ ಭಾವಿಗಳಲ್ಲಿಯೂ ತುಂಬಾ ಹೋಲಿಕೆ ಕಾಣುವದು. ಗ್ರೀಕ ತತ್ವಜ್ಞರನ್ನು ನೋಡುವಾ, ಪ್ರಭುದೇವನು ಸಾಕ್ರೆಟೀಸನನ್ನು, ಬಸವೇಶ್ವರನು ಪ್ಲೇಟೋನನ್ನು, ಚೆನ್ನ ಬಸವನು ಫೀಡೋನನ್ನು ಹೋಲುವನು ಎನ್ನಬಹುದು. ಅದೇ ರೀತಿ ಸರ್ವಜ್ಞನು ಹಿಡಾಟಾಸನನ್ನು ಸರಿಗಟ್ಟಬಹುದು. ಕ್ರಿಶ್ಚನ್ ಸಂತರನ್ನು