ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ ರಸನೇಂದ್ರಿಯ ವಿಷಯದಿಂದ ಮತ್ಸ ಕೆಡುವದು ಜಲಗಾರನ ಬಲೆಯಲ್ಲಿ ತ್ವಗೇಂದ್ರಿಯ ವಿಷಯದಿಂದ ಗಜ ಕೆಡುವದು ರಾಜನ ಕೃತಕದಲ್ಲಿ ಇಂತಿಷ್ಟು ಪ್ರಾಣಿಗಳು ಒಂದೊಂದು ವಿಷಯಕ್ಕೆ ಬಂಧನಕ್ಕೊಳಗಾದವು. ಇಂತಪ್ಪ ಪಂಚೇಂದ್ರಿಯ- ವಿಷಯ-ವ್ಯಾಪಾರದಲ್ಲಿ ಹರಿದಾಡುವ ಮಂದಮತಿ ಎನ್ನನ್ನು ಸಲಹಿಕೊಳ್ಳಯ್ಯಾ ದೇವಾ ಅಖಂಡೇಶ್ವರಾ, ತನ್ನ ಅನೇಕ ವಿಧ ಪಾರಮಾರ್ಥಿಕ ರೋಗದ ನಿದಾನವನ್ನು ಅರುಹಲು ಸಾಧಕನು ಪರಮಾತ್ಮನಿಗೆ ಮಾಡಿದ ಪ್ರಾರ್ಥನೆ ( ಶಾಗ-ಕಾಂಬೋಧಿ, ತಾಲ-ದಾದರಾ ) ಆವ ರೋಗವು ಎನಗೆ ದೇವ ಧನ್ವಂತರಿ | ಸಾವಧಾನದಿ ಎನ್ನ ಕೈ ಹಿಡಿದು ನೋಡಯ್ಯ ಹರಿಯ ಮೂರ್ತಿಯು ಎನ್ನ ಕಣ್ಣಿಗೆ ಕಾಣಿಸದು | ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ || ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ | ಹರಿಪ್ರಸಾದವು ಜಿಲ್ಲೆಗೆ ಸವಿಯಾಗದಯ್ಯ ಹರಿಪಾದ ಸೇವೆಗೆ ಹಸ್ತಗಳು ಚಲಿಸವು | ಗುರುಹಿರಿಯರಂಘ್ರಗೆ ಶಿರ ಬಾಗದು || ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ! ಹರಿಯಾತ್ರೆಗೆನ್ನ ಕಾಲೇಳವಯ್ಯ ಅನಾಥಬಂಧು ಗೋಪಾಲ ವಿಠಲರಾಯ ಎನ್ನ ಭಾಗದ ವೈದ್ಯ ನೀನೆಯಾದಿ || |||| || 9 || ಅನಾದಿಕಾಲದ ಭವರೋಗ ಕಳೆಯಯ್ಯ | ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ || ||