ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ಮೂರು ಪರಮಾರ್ಥ - ಪ್ರೇರಣೆಗಳು (ಭಾಗ ೨) ಮಾನವನ ಜೀವನವ್ಯಾಪಾರಗಳೆಲ್ಲ ಕ್ಷಣಭಂಗುರವಾದವುಗಳು ( ರಾಗ - ಭೂಪ, ತಾಲ - ದೀಪಚಂದಿ) ಹೇಗೆ ಇರಬೇಕು ಸಂಸಾರದಲ್ಲಿ || ಹೇಗೆ ಬರೆದಿದೆ ಪ್ರಾಚೀನದಲ್ಲಿ ಹಕ್ಕಿ ಅಂಗಳದಲ್ಲಿ ಬಂದು ಕೂತಂತೆ || ಆ ಕ್ಷಣದಲ್ಲಿ ಹಾರಿಹೋದಂತೆ | | ನಾನಾ ಪರಿಯಲ್ಲಿ ಸಂತೆ ನೆರೆದಂತೆ || ಮಕ್ಕಳಾಡಿ ಮನೆ ಕಟ್ಟಿದಂತೆ || ನಾನಾ ಪಂಥವ ಹಿಡಿದು ಹೋದಂತೆ ಸಾಕೆಂದು ಆಟ ಅಳಿಸಿ ಪೋದಂತೆ || a:ll ವಸತಿಕಾರನು ವಸತಿ ಬಂದಂತೆ || ತುಸು ಹೊತ್ತೇರೆ ಹೊರಟು ಹೋದಂತೆ | 9 || ಸಂಸಾರಪಾಶವ ನೀನೆ ಬಿಡಿಸಯ್ಯ || ಕಂಸಾರಿ ಪುರಂದರ ವಿಠಲರಾಯ G ಚಿಂತೆಯ ಸಾರ್ವತ್ರಿಕ ಸಾಮ್ರಾಜ್ಯವು ( ರಾಗ- ಪುರಿಯ ಧನಾತ್ರಿ, ತಾಲ - ದೀಪಚಂದಿ) ಅನುಗಾಲವು ಚಿಂತೆಯು ಮನುಜರಿಗೆ ಮನ ಹೋಗಿ ಮಾಧವನ ಒಳಗೂಡು ತನಕ ಸತಿಯು ಇದ್ದರು ಚಿಂತೆ ಇಲ್ಲದಿದ್ದರೂ ಚಿಂತೆ | ಮತಿಹೀನ ಸತಿಯಾದರು ಚಿಂತೆಯು ಪೃಥಿವಿಯೊಳಗೆ ಸತಿ ಅತಿ ಚೆಯಾದರೂ ಮಿತಿಮಾರಿ ನಡೆದರೆ ಅವಳೊಂದು ಚಿಂತೆ 00