ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ನಾಲ್ಕು ನೈತಿಕ ಸಿದ್ಧತೆ ಮಾನವ ಜೀವನದಿಂದ ಲಭಿಸಿದ ಬೆಲೆಯುಳ್ಳ ಸುಸಂಧಿಯನ್ನು ದೂರೀಕರಿಸದಿರು ( ರಾಗ-ಭೈರವಿ, ತಾಲ-ದೀಪಚಂದಿ) ಮಾನವ ಜನ್ಮ ದೊಡ್ಡದು | ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ || ಪ || ಕಣ್ಣು ಕೈಕಾಲು ಕಿವಿ ನಾಲಿಗೆ ಇರಲಿಕ್ಕೆ | ಮಣ್ಣು ಮುಕ್ಕಿ ಮರುಳಾಗುವರೇ || ಹೊನ್ನು ಹೆಣ್ಣಿಗೆ ಮೆಚ್ಚಿ ಹರಿನಾಮಾಮೃತ | ಉಣದೆ ಉಪವಾಸ ಮಾಡುವರೆ ಪ್ರಾಣಿ ಕಾಲನ ದೂತರು ಕರಪಿಡಿದೆಳೆವಾಗ | ತಾಳು ತಾಳೆಂದರೆ ತಾಳುವರ || ದಾಳಿ ಬಾರದ ಮುನ್ನ ಧರ್ಮವ ಕೈಕೊಳ್ಳಿ ಸುಳ್ಳಲ್ಲ ಸಂಸಾರ ಸುಳಿಗಾಳಿಯಂತಿದೆ ಏನು ಕಾರಣ ನಮ್ಮ ಯದುಪತಿಯ ಮರೆತಿರಿ | ಧನಧಾನ್ಯ ಪುತ್ರರು ಕಾಯುವರೆ || ಇನ್ನು ಆದರೂ ಏಕೋಭಾವದಿ ಪೂಜಿಸಿ | ಉನ್ನತ ಪುರಂದರ ವಿಠಲನ ಭಜಿಸಿರಿ 9 ಮನಸಿನ ಮುರಗಿಯ ತಿದ್ದಿ ಸೋ ದೇವಾ ? ( ರಾಗ-ಭೈರವಿ, ತಾಲ-ದೀಪಚಂದಿ) ಮನಸಿನ ಮುರಿಗೆಯ ತಿದ್ದಿ ಸೋ ದೇವಾ ಪ್ರಾತಃಕಾಲಕ್ಕೆ ಎದ್ದು ಪರದ್ರವ್ಯ ಅಪಹಾರ | ಸಾಧುರ ನಿಂದೆಯನಾಡುತಲ್ಯಾದ || ಸಾಧಿಸಿ ಯಮನವರು ಎಳೆದೊಯ್ಯುವಾಗ | ಸತ್ತೆ ಸತ್ತೆನೆಂದು ಮರುಗುತಲ್ಯಾದ 11011