ಪ್ರಕರಣ ಒಂಬತ್ತು . ಸಂತರ ಲಕ್ಷಣಗಳು ಭಕ್ತಶ್ರೇಷ್ಠರು ಯಾರು ? ( ರಾಗ, ಕಾಂಬೋಧಿ, ತಾಲ, ಝಪತಾಲ) ಭಕ್ತನೆಂದರೆ ಭಕ್ತ ಪ್ರಹ್ಲಾದನು | ಮಿಕ್ಕ ಭಕ್ತರು ಎಲ್ಲ ಭಕ್ತವರರೇನು ? ಮಲತಾಯಿ-ಮೋಸದಿಂದಳಿಯೆ ಅರಸೊತ್ತಿಗೆಯು | ಬಲಿತ ಕೋಪದಿ ಕಾನನವ ಸೇರುತ || ಅಳಿಯದಿಹ ಅರಸುತನ ಗಳಿಸೆ ಹರಿಯನು ನೆನೆವ | ಎಳೆಯ ಧ್ರುವನೆಂತು ತಾ ಭಕುತವರನಹನು ? ವೀಣೆಯಿನಿಸರದಲ್ಲಿ ಗಾನವನು ಬೆರಸುತಲಿ | ಹರಿಯ ಹೊಗಳುತ ಅಲೆವ ಬ್ರಹ್ಮಕುವರ || ಕಲಹವನ್ನು ಮೊಳಿಸಿ ಬೆಳೆಸುವದರಲಿ ನಲಿಯುತಿಹ | ಭಕುತ ಬಿರುದನು ಪಡೆಯೆ ಅರ್ಹನೇನು ? || 9 |] ನೂರಾರು ಕಥೆಗಳಿಂ ಮರಾರು ಗ್ರಂಥಗಳ 1 ಬರೆದು ಪುರುಷಾರ್ಥಗಳ ಮಹಿಮೆಯನ್ನು || ಸಾರ್ವಹವ್ಯಾಸದಲಿ ತುಂಬ ಮುಳುಗಿದ ವ್ಯಾಸ | ಭಕುತಿ ಶಾಂತಿಯನೆಂತು ಹೊಂದುತಿಹನು ? ಜ್ಞಾನಕರ್ಮದ ಬೆರಕೆ ಮೇಲೆಂದು ಬಗೆದದರ | || Q || ಹಿರಿಮೆಯನು ಬಿತ್ತರಿಪ ಗ್ರಂಥದಲ್ಲಿ 1 ಜ್ಞಾನಕರ್ಮದಿ ಇಂತು ಶಿಷ್ಯನಾದ ವಶಿಷ್ಠ |' ಭಕುತರಲಿ ಶ್ರೇಷ್ಠ ನೆಂತಾಗುತಿಹನು ? || 9 || ಜ್ಞಾನದಿಂದಲೆ ಭುಕ್ತಿ ಜ್ಞಾನದಿಂದಲೆ ಮುಕ್ತಿ | ಜ್ಞಾನವೇ ಚಿರಸುಖವ ಪಡೆವ ಯುಕ್ತಿ || ಜ್ಞಾನಶಕ್ತಿಯನಿನಿತು ತುಂಬ ಹೊಗಳುವ ಶುಕನು || ಪರಮ ಭಕ್ತನ ಪದವ ಪಡೆಯಬಹುದೇನು ? 4F 118 11
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೯
ಗೋಚರ