ಪುಟ:ಕಬ್ಬಿಗರ ಕಾವಂ ೨.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯ ೨೮೫, ಅಗಿದು-ಹೆದರಿ; ಧಾ. ಅಗಿ, ಸಂತ್ರಾಸಹಸ್ಪೃಚರಣರೇಷು, ಜೋಲೆ- ಜೋಲಾಡಿ ಹೋಗಲು, ೨೮೪, ನೆಣ-ವಸೆ. ಜಾದು -ದ, ಧಾತು, ಕೆಂಪುಕಲ್ಲು, ಮಗುಟ್ಟುವಂತೆ ವಾಂತಿಯನ್ನು ಮಾಡುವ ಹಾಗೆ, ೨೮೫, ಆಗಳೆ ಈಂಟಿ-ಇಲ್ಲಿ ಸಂಧಿಯಿಲ್ಲ. ಶ. ದ. ೫೬. ಮೆಯ್ಯ ಲಿಗಳ-ವೀರರ. ಒಕ್ಕಣ-ಹೊಸಗನ್ನಡದಲ್ಲಿ ಬೊಕ್ಕಣ, ತಿಂಡಿ, ಮೆಯ್ಯಲೆದು ಮೆಯ್ಯು ಒಂ ದು ಕಡೆಗೆ ಜೂಗಲಾಡಿ, ಕಬ್ಬು --ಕಮ್ + ಪಜಿ, ಕೈಚಪ್ಪಾಳೆ, ೨೮೬. ಕೊಕ್ಕರಿಕೆಯದ-ಭೀತಿಯಿಂದ ಅಂಗಸಂಕೋಚವನ್ನುಂಟುಮಾಡಿದ, ಅಲಗನುಗಿದು-ಕತ್ತಿಯನ್ನು ಹಿರಿದುಕೊಂಡು, ೨೮೭, ಎಬ್ಬಿಟ್ಟಿದಂ-ಹಿಂದಟ್ಟಿದನು; ಧಾ, ಎಟ್ಟು, ಅನುಧಾವನೇ ೨೮೮. 'ತೇನತೇನವೆಂದು ಮೇಲೆ ಮೇಲೆ' ಶ, ದ, ಪು. 40-4 ಜಾರಿಂಗಲ್ -ಜಾರುಗುಪ್ಪೆ, ಕೂಳುಗುಳ-ಯುದ್ದ, ಪೊಲಂಬುಗಿಡಿಸೆಯುಂ-ಮಾರ್ಗತ ಪ್ಪಿಸಿಯೂ, ತಾಯ್ಯಲ್ಲೋಲತಿ-ತಳದ ಮರಳು ತೋರುವಂತ, ನಿಬ್ಬರ ದೃ. ನಿರ್ಭರ, ವೇಗವಾಗಿ ೨೯೦. ಗುಂಡಿಗೆ-, ಕುಂಡಿಕಾ, ಜಲಪಾತ್ರೆ, ನೇವರಿಸಿದ-ಸವರಿಕೊಂಡ. ಈ ಪದ್ಯದಲ್ಲಿ ಈಶ್ವರಮನ್ಮಧರ ಯುದ್ಧವನ್ನು ನೋಡುವದಕ್ಕೆ ತ್ರಿಮೂರ್ತಿ ಗಳಲ್ಲಿ ಒಬ್ಬನಾದ ಈಶ್ವರನು ಬಂದಂತೆ ಹೇಳಿದೆ !! ೨೯೨, ಪರ್ದು-ಗರುಡ, ೨೯ಲೆ, ಕೆನ್ನಂ-ವಿಶೇಷವಾಗಿ; ಶ, ದ, 304 ೨೯೯, ಗೋಣ , ಗುಣ, ಬಿಲ್ಲಿನ ಹೆದೆ. ೩೦೦. ಕೂಡದರ-ಅನುರಾಗವಿದ್ದ ಒಂದು ದಿವಸವೂ ಸೇರಲವಕಾಶವಿಲ್ಲ ದವರ, ಬಿರ್ಚಿದೋಪರ-ಅಗಲಿದ ಪ್ರಿಯರ, ನಾಣ್ಣಲ್-ಲಜ್ಜೆಗಳು, ೩೦೦ ಎಡೆಗೊಂಡು-ಎಡೆಗೊಳ್ಳಲು, ೩೦೪, ಕರಿಕು - ಮಸಿ, ಇದ್ದ ಲು. ೩೦೫, ಈ೦ಬ-ಹೆರುವ; ಧಾ, ಪೂನ್, ತಿರಕಸವೇ ಪಣದರ-ಈಶ್ವರ. ೩೦೭, ಮಾದೇವಿ-ವಾಲ್ವತಿ, ಕೈಮೊಗ-ಹಸ್ತ, ಕಾವನಂಬುಗಳ್ತಾವೈದು “ಅರವಿಮಶೋಕಂ ಚ ಚತಂ ಚ ನವಮಲ್ಲಿಕಾ | ನೀಲೋತ್ಪಲಂಚ ಪಂ ಚೈತೇ ಪಂಚಬಾಣಸ್ಯ ಸಾಯಕಾಃ |» ಅಮರ ೩೦೮, ಒಟ್ಟಜೆಗೆಟ್ಟು - ಗೌರವವನ್ನು ಹಾಳುಮಾಡಿಕೊಂಡು, ಶಕ್ತಿಗುಂದಿ; “ಒಟ್ಟಜೆ, ಅತಿಶಯಂ” ಶಬ್ದ ಸಾರ, ನೆಲನನೊಡಂಬಟ್ಟರೆ-ಮೂರ್ಛಿತರಾಗಿ ನೆಲದಲ್ಲಿ ಬೀಳಲು'