ಪುಟ:ಕಬ್ಬಿಗರ ಕಾವಂ ೨.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಬ್ಬಿಗರ ಕಾವದ ಟಿಪ್ಪಣ. ಕಥಾಸಾರ, -:9: - ಕನ್ನಡ ನಾಡಿನಲ್ಲಿ (೧೯) ವೂವಿನ ಪೊಳಲೆಂಬ(೨೭) ಒಂದು ಪಟ್ಟಣವಿತ್ತು. ಅದನ್ನು ನೆನೆಯಂಬನೆಂಬ ಅರಸು ಆಳುತ್ತಿದ್ದನು (೪೫), ಆತನು ವಸಂತಋತು ವಿನಲ್ಲಿ ಒಂದು ದಿವಸ ತನ್ನ ಸ್ನೇಹಿತನಾದ ನಗೆಗಾರನನ್ನು ಬಳಸಿ (೭೨), ತಾನು ಆ ದಿನದ ಬೆಳಗಿನ ಜಾವಗಲ್ಲಿ ಒಬ್ಬ ಸುಂದರಿಯನ್ನು ಕನಸಿನಲ್ಲಿ ಕಂಡುದಾಗಿ ಹೇಳಿದನು (೭೯), ಅದಕ್ಕೆ ಆ ನಗೆಗಾರನು- “ ಈ ಕನಸು ನಿಶ್ಚಯ. ಶೀಘ್ರದ ಲ್ಲಿಯೇ ನಿನಗೆ ಒಂದು ಸ್ತ್ರೀ ರತ್ನವು ದೊರಕುವದು.” ಎಂದು ಹೇಳಿದನು (೮೧). ಆ ಮಾತಿಗೆ ಮೆಚ್ಚಿ ರಾಜನು ಅವನನ್ನು ಸನ್ಮಾನಿಸಿ, ಅವನೊಡನೆ ಉಪ್ಪರಿಗೆಗೆ ಹತ್ತಿ, ಅಲ್ಲಿ ಗೋಡೆಯಲ್ಲಿ ಚಿತ್ರಲಿಖಿತವಾದ ವನವನ್ನು ನೋಡುತ್ತಿದ್ದನು (೮೨). ಆ ನಗೆಗಾರನು- “ಈ ಬರೆದ ಬನವಿರಲಿ, ಈ ಪಕ್ಕದ ಹೂದೋಟವನ್ನು ನೋಡು,” ಎಂದು ತೋರಿಸುತ್ತಿದ್ದನು (೮೩), ಅಷ್ಟರಲ್ಲಿಯೇ ಒಬ್ಬ ವನಪಾಲ ಕನು ಬಂದು, ಹಣ್ಣು ಹಂಪಲುಗಳನ್ನು ಕಾಣಿಕೆಗೊಟ್ಟು (ಲಲಿ)-ಮಹಾರಾ ಜನು ವನವನ್ನು ನೋಡಬೇಕು” ಎಂದು ಬಿನ್ನವಿಸಿದನು (೮೯). ಬಳಿಕ ರಾಜನು ಪರಿಜನದೊಡನೆ ಹೊರಟು, ವನಕ್ಕೆ ಬಂದು (೯೨), ಅದರ ಸೌ೦ದ ವ್ಯವನ್ನು ನೋಡುತ್ತಾ ಬರುವಲ್ಲಿ, ಒಂದುಮಾವಿನ ಮರದ ಕೆಳಗೆ ವನಲಕ್ಷ್ಮಿಯಂತೆ ನಿಂತಿ ದ್ದ ಒಬ್ಬ ಸ್ತ್ರೀಯನ್ನು ಕಂಡನು (೧೧೨), ಕಂಡು, ಅಲ್ಲಿಗೆ ಹೋಗಿ, “ನೀವು ಯಾರು ?” ಎಂದು ಕೇಳಿದನು. ಅದಕ್ಕೆ ಆ ಅಪ್ಪರಸ್ತ್ರೀಯು-ತಾನು ವನವಿ ಲೋಕನಾರ್ಥವಾಗಿ ಬಂದವಳೆಂದು ಹೇಳಿದಳು (೧೧೫), “ನೀವು ಇಂತಪ್ಪ ವನವನ್ನು ಎಲ್ಲಿಯಾದರೂ ಹಿಂದೆ ನೋಡಿದುದುಂಟೆ ? ” ಎಂದು ಕೇಳಿದನು. ಅದಕ್ಕೆ ಅವಳು ಇಂತೆಂದಳು:-(೧೧೭), ಕ೦ಪಿನ ಪೊಳಲೆಂಬ ಪಟ್ಟಣದಲ್ಲಿ (೧೧೮) ಕರ್ವುವಿಲ್ಲನೆಂಬ ದೊರೆಯಿ ದ್ದನು (೧೧೯), ಅವನಿಗೆ ಇಚ್ಚೆಗಾರ್ತಿಯೆಂಬ ಪತ್ನಿಯಿದ್ದಳು (೧೨೦), ಅವರಿ ಬ್ಬರೂ ಸುಖದಿಂದಿರುತ್ತಿದ್ದರು. ಹೀಗಿರುವಲ್ಲಿ, ಒಂದು ದಿನ ರಾಜನು ಒದ್ದೋ ಲಗದಲ್ಲಿ ಕುಳಿತಿರುವಾಗ (೧೨೯), ಒಬ್ಬ ಪಡಿಯರತಿಯು ಜೊನ್ನವಕ್ಕಿಯಂಬ ದೂತನನ್ನು ಕರೆದುಕೊಂಡು ಬಂದಳು. ಆ ದೂತನು ಪ್ರಭುವಿಗೆ ನಮಸ್ಕರಿಸಿ,