ಪುಟ:ಕಬ್ಬಿಗರ ಕಾವಂ ೨.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಂದ್ರಕಿರಣಗಳನ್ನು ಕಾಣ ಕೆಗೊಟ್ಟು (೧೪೩),-“ಸ್ವಾಮಿ ! ಹಿಮವತ್ಪರ್ವತದ ಲ್ಲಿರುವ ಶಿವನೆಂಬ ಒಬ್ಬ ಜೋಗಿಯು (೧೪೫), ನೆನ್ನೆಯ ರಾತ್ರಿ ಯುದ್ದಮಾಡಿ, ನಮ್ಮ ಚಂದ್ರನನ್ನು ಕೈಸೆರೆಹಿಡಿದುಕೊಂಡಿರುವನು (೧೪೯). ಇದಕ್ಕೆ ತಕ್ಕ ಪ್ರತೀ ಕಾರವು ಮಹಾಸ್ವಾಮಿಯವರಿಗೆ ವೇದ್ಯವಾಗಿದೆ.” (೧೫೦) ಎಂದು ವಿಜ್ಞಾಪಿ ಸಿದನು. ಕೂಡಲೇ ರಾಜನು ಕೋಪಗೊಂಡು ಶಿವನ ಮೇಲೆ ಯುದ್ದಕ್ಕೆ ಪ್ರಯಾ ಯೋನ್ಮುಖನಾದನು. ಅದನ್ನು ನೋಡಿ, ಪಕ್ಕದಲ್ಲಿದ್ದ ಬಸಂತನು (೧೫೫೬)ರಾಯಭಾರಿಯನ್ನು ಕಳುಹಿಸಿ, ಆತನು ತರುವ ಸಮಾಚಾರವನ್ನು ತಿಳಿದು ಆ ಬಳಿಕ ಯುದ್ಧಕ್ಕೆ ಹೋಗುವದು ಉಚಿತವೆಂದು ತಿಳಿಸಿದನು (೧೫೪೯), ರಾಜನು ಅದಕ್ಕೆ ಒಪ್ಪಿ, ತಂಗಾಳಿಯನ್ನು ಕರೆದು,-“ ನೀನು ಗೊರವನ ಲ್ಲಿಗೆ ಹೋಗಿ, ನಮ್ಮ ಚಂದ್ರನನ್ನು ಬಿಡಿಸಿಕೊಂಡು ಬಾ ” ಎಂದು ಹೇಳಿದನು, ಕೂಡಲೆ ತಂಗಾಳಿಯು ಹೊರಟು ಹಿಮವತ್ಪರ್ವತವನ್ನು ಸೇರಿ, ಸಮಯವ ರಿತು ಈಶ್ವರನ ಸಭೆಯನ್ನು ಪ್ರವೇಶಿಸಿ (೧೬೦), ನಮಸ್ಕರಿಸಿ-'ನಮ್ಮ ಮಹಾ ರಾಜನು ತಮ್ಮ ಪ್ರಖ್ಯಾತಿಯನ್ನು ಕೇಳಿ, ತಮ್ಮಲ್ಲಿ ಸ್ನೇಹ ಬೆಳೆಯಿಸಬೇಕೆಂಬ ಇಚ್ಛೆಯಿಂದ ನನ್ನನ್ನು ಕಳುಹಿಸಿರುವನು (೧೬೯), ಪರಾಕ್ರಮಾದಿ ಗುಣಗಳಲ್ಲಿ ನೀವಿಬ್ಬರೂ ಸಮಾನರು, ತಾವು ನಮ್ಮ ಮಹಾರಾಜನ ಮೈತ್ರಿಯನ್ನು ಅಂಗೀ ಕರಿಸಿ ಚಂದ್ರನನ್ನು ಕಳುಹಿಸಿಕೊಡಿ,” ಎಂದು ವಿಜ್ಞಾಪಿಸಿದನು (೧೭೭). ಅದಕ್ಕೆ ಕುಪಿತನಾದ ಈಶ್ವರನು ನಸುನಕ್ಕು (೧೭೮), ಕರ್ವುವಿಲ್ಲನ ಪರಾಕ್ರಮವನ್ನು ಹಾಸ್ಯ ಮಾಡಿ, (೧೮೨- ೮೩) -- “ಚಂದ್ರನನ್ನು ಬಿಡಿಸಿಕೊಳ್ಳುವ ಸಾಹಸವಿದ್ದರೆ ನಿಮ್ಮ ಮಹಾರಾಜನೇ ಬಿಡಿಸಿಕೊಳ್ಳಲಿ,” (೧೮೪) ಎಂದು ಹೇಳಿದನು, “ನಮ್ಮ ಮಹಾರಾಜನ ಪರಾಕ್ರಮವನ್ನು ನೀವಿನ್ನೂ ಕಂಡಿಲ್ಲ. ಸಹಸ್ರಾ ಕ್ಷ, ಬ್ರಹ್ಮ, ಇವರ ಪಾಡೇನಾಯಿತೋ ನೀವೇ ನೋಡಿಕೊಳ್ಳಿ (೧೮೬), ಬಿಟ್ಟು ಕಳುಹದಿದ್ದರೆ ಪುಷ್ಪಬಾಣದ ಪೆಟ್ಟನ್ನು ಇನ್ನೆಂಟು ದಿವಸದಲ್ಲಿ ನೀವೇ ನೋಡು ತೀರಿ,” ಎಂದು ಹೇಳಿ, ಅಲ್ಲಿಂದ ಹೊರಟು, ಕರ್ವುವಿಲ್ಲನಲ್ಲಿಗೆ ಬಂದು “ಗೊ ರವನು ಚಂದ್ರನನ್ನು ಬಿಡನು; ಯುದ್ದಕ್ಕೆ ನಿಂತಿರುವನು.” ಎಂದು ತಿಳಿಸಿದನು (೧೮೮), ಕರ್ವುವಿಲ್ಲನು ಕೋಪಾವಿಷ್ಟನಾಗಿ- “ಓಹೋ! ಆ ಬಡಗೊರವನು ನನ್ನ ಬಾಣಗಳನ್ನು ಉಟ್ಟು ಕೊಳ್ಳುವ ಹುಲಿದೊಗಲೆಂದು ನೆನೆದ; ಇಲ್ಲವೇ ಒಟ್ಟಿಕೊಳ್ಳುವ ಬೂದು ಬಗೆದನೋ ! (೧೮೯). ಇದಕ್ಕೆ ತಕ್ಕುದನ್ನು ಈಗಲೇ ಮಾಡಿ, ಅವನನ್ನು ಅರೆವೆಣಾಗಿ ಮಾಡಿ ಬಿಡುವೆನು (೧೯೫), ”ಎಂದು ಉರಿದೆದ್ದು, ಸನ್ನಾಹಭೇರಿಯನ್ನು ಹೊಡಿಸಿ, ಬಸಂತನಿಗೂ ಮೆಲ್ಲೆ ಲರಿಗೂ ಸಮ