ಪುಟ:ಕಬ್ಬಿಗರ ಕಾವಂ ೨.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ku - ಸ್ನ ಸೈನ್ಯವನ್ನು ಸಿದ್ಧ ಪಡಿಸುವಂತೆ ಆಜ್ಞಾಪಿಸಿದನು. ಕೂಡಲೇ ಸೈನ್ಯವು ಸಿದ್ಧ ವಾಯಿತು. ಆಗ ಕರ್ವುವಿಲ್ಲನು ತನ್ನ ವಿದ್ಯಾ ಬಲದಿಂದ ಮಾಯಾಸೈನ್ಯವನ್ನು ನಿರ್ಮಿಸಿ, ಅದನ್ನು ಮುಂದುಗಡೆಯಲ್ಲಿಯೂ, ತನ್ನ ನಿಜವಾದ ಸೈನ್ಯವನ್ನು ಅದರ ಹಿಂದೆಯ ಕಳುಹಿಸಿ, (೧೯೬) ಅವುಗಳ ಹಿಂದೆ ಶುಭಲಗ್ನದಲ್ಲಿ ಜೈತ್ರಯಾತ್ರೆ ಹೊರಟು, (೧೯೭) ಹೇರಡವಿಯನ್ನು ದಾಟಿ (೨೯), ಮುಂದೆ ಸಿಕ್ಕಿದ ಪರ್ವ ತದಲ್ಲಿ ತಪಸ್ಸು ಮಾಡುತ್ತಿದ್ದ ಸವಣನಿಗೆ ನಮಸ್ಕರಿಸಿ (೨೩೨), ಅಲ್ಲಿಂದ ಹೊರಟು ಮುಂದಿನ ವನವನ್ನು ದಾಟಿ (೨೩೪) ರನ್ನ ಗಲ್ಲೆ೦ಬ ಬೆಟ್ಟದ ತಪ್ಪಲಲ್ಲಿ ಬೀಡನ್ನು ಬಿಟ್ಟನು (೨೩೭). ಈ ಸಮಾಚಾರವನ್ನು ಕೇಳಿ ಈಶ್ವರನು ವೀರಭದ್ರನನ್ನು ಕರೆಂಸಿಸಿ(೨೩೯) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಆಜ್ಞಾಪಿಸುವಷ್ಟರಲ್ಲಿಯೆ; ಕಾವನ ಕುದುರೆಗಳು “ಹೊಲ” ದಲ್ಲಿದ್ದವರ ಮೇಲೆ ಬಿದ್ದು ಎಂದು ಒಂದು ಕೋಲಾಹಲ ಧ್ವನಿಯುಂಟಾಯಿತು (೨೪೭), ಆ ಗಲಭೆಯನ್ನು ಕೇಳಿ, ಈಶ್ವರನು ಒಂದು ಮಾಯಾ ಸೈನ್ಯವನ್ನು ನಿರ್ಮಿಸಿ (೨೪೯), ವೀರಭದ್ರಾದಿಗಳೊಡನೆ ಕಳುಹಿಸಿದನು (೨೫೦). ಈ ಸೈನ್ಯವು ಹಿಮವತ್ಪರ್ವತದಿಂದ ಹೊರಟು, ಯುದ್ಧ ರಂಗಕ್ಕೆ ಬಂದು ವ್ಯೂ ಹವನ್ನು ರಚಿಸಿ ನಿಂತುದು (೨೫೨), ಬಳಿಕ ಉಭಯಸೇನಾನಾಯಕರ ಅಪ್ಪಣಿಯ ಮೇರ (೨೬೪) ಎರಡು ಸೈನ್ಯ ಘೋರವಾದ ಯುದ್ದ ನಡೆದು (೨೬೫), ಈಶ್ವರಸೇನೆಯು ಪೆಟ್ಟು ತಿಂದು ಹೋಯಿತು, ಅದನ್ನು ನೋಡಿ ತನ್ನ ಸೈನ್ಯದಮೇಲೆ ಕಾಣಿಸಿಕೊಂಡ ವೀರಭದ್ರಾದಿಗಳನ್ನು ಕಾವನು ಬಡಿದಟ್ಟ, ಓಡಿ ಸಿಕೊಂಡು ಹೋಗಿ, ಹಿಮವತ್ಪರ್ವತಕ್ಕೆ ಮುತ್ತಿಗೆ ಹಾಕಿದನು (೨೮೮), ತನ್ನ ಸೈನ್ಯವೆಲ್ಲಾ ನಷ್ಟವಾದರೂ ಲಕ್ಷ್ಯ ಮಾಡದೆ ಈಶ್ವರನು ಏಕಾಕಿಯಾಗಿ ಪ್ರತಿಭ ತಿಸಿ ನಿಂತನು (೨೯೨೪), ಆಗ ಈಶ್ವರನನ್ನು ನೋಡಿ ಕಾವನು- “ಗೊರವ ! ನಿನ್ನ ಸೈನ್ಯವೆಲ್ಲಾ ಹತವಾಯಿತು. ಇನ್ನಾದರೂ ಚಂದ್ರನನ್ನು ಬಿಟ್ಟು ಕಳುಹಿಸಿ ಬದುಕು.” (೨೯೫) ಎಂದು ಮೂದಲಿಸಿ ಬಾಣ ಪ್ರಯೋಗಮಾಡಿದನು. ಆ ಪೆ ಟ್ಟಿಗೆ ಈಶ್ವರನು ಅರೆಣಂದನ (೩೦೮). ಕೂಡಲೆ ಈಶ್ವರನು ರೋಷಾವಿಷ್ಟ ನಾಗಿ “ಹಿರಿಯರೆಂಬುದನ್ನು ಒಗೆಯದೆ ಕೊಬ್ಬಿನಿಂದ ಎನ್ನೊಡನೆ ಕಾದಿದೆ. ಆದುದರಿಂದ ನೀನು ನಿನ್ನ ಪತ್ನಿಯಿಂದಗಲಿ ಇತರರಿಗೆ ತಿಳಿಯದ ಹಾಗೆ ನಿನ್ನನ್ನು ನೀನು ಮರೆತಿರು.” ಎಂದು ಶಪಿಸಿದನು. (೩೧೨) ಇದನ್ನು ಒಸಂತನ ಮುಖದಿಂದ ಕೇಳಿದ ಆಚೆಗಾರ್ತಿ ಇನ್ನೂ ಪ್ರವಾಸಿ ಸುತ್ತಿರುವಳು (೩೧೨). ಶಾಪಗ್ರಸ್ತನಾದ ನೀನು ಪತ್ನಿಯಿಂದಗಲಿ ಇಲ್ಲಿ ನನೆಯಂ