ಪುಟ:ಕಮ್ಯೂನಿಸಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬ ವೈಜ್ಞಾನಿಕ ಸಮಾಜವಾದ ಯಾದ ಆರ್ಥಿಕ ಸಮಾನತೆಯ ಸಮಾಜವಾದೀ ಆರ್ಥಿಕವ್ಯವಸ್ಥೆಯ ಸ್ಥಾಪನೆಯ ಮೂಲಕ ಬರುವುದಾಗಿಯೂ ಸಮಾಜವಾದೀ ವ್ಯವಸ್ಥೆಯ ಅನಿವಾರ್ಯತೆಯನ್ನು ರಷ್ಯಾದೇಶದ ಸ್ಥಿತಿಗತಿಗಳು ಸಾಧ್ಯಮಾಡಿಕೊಟ್ಟರು ವುದಾಗಿಯೂ ಲೆನಿನ್ ವಿವರಣೆ ಇತ್ತು, ಅಂತರರಾಷ್ಟ್ರೀಯ ಬಂಡವಾಳ ಶಾಹಿಯ (International Capitalism) ಭಾಗವಾಗಿ, ಅದರ ಏರಿಳಿತಗಳ ಅಲೆಗೂಸಾಗಿ, ಅಬಲವಾಗಿರುವ ಮತ್ತು ವಿರಸಪೂರಿತವಾಗಿ ರುವ ರಷ್ಯಾದ ಬಂಡವಾಳ ಆರ್ಥಿಕವ್ಯವಸ್ಥೆಯನ್ನು ಕಾರ್ಮಿಕರು ಕಿತ್ತೊಗೆದು, ಸಮಾಜವಾದೀ ಆರ್ಥಿಕವ್ಯವಸ್ಥೆಯನ್ನು ಸ್ಥಾಪಿಸುವಂತೆ ಕಾರ್ಮಿಕರಿಗೆ ಕರೆ ಇತನು. ಈ ಮಹಾಕಾರ್ಯ ಕಾರ್ಮಿಕರಿಂದಲ್ಲದೆ ಮತ್ತಾರಿಂದಲೂ ಸಾಧ್ಯವಿಲ್ಲವೆಂದನು. ಕಾರ್ಮಿಕರ ವಿಮೋಚನೆ, ಶೋಷಣೆಯ ನಾಶ, ವರ್ಗಗಳ ನಾಶ, ಎಲ್ಲವೂ ರಷ್ಯಾ ದೇಶದ ಬಂಡವಾಳ ವರ್ಗವನ್ನೂ ಅದಕ್ಕೆ ಆಶ್ರಯದಾತನಾಗಿರುವ ರಷ್ಯಾದ ರಾಜಮನೆತನ ಅದು ಪೀಳಿಗೆಯವರು ಮತ್ತು ಹಿಂಬಾಲಕರನ್ನು ಸದೆಬಡಿಯುವುದರಲ್ಲೂ ಮತ್ತು ಕಾರ್ಮಿಕರ ಆಡಳಿತದ ಘೋಷಣೆಯಲ್ಲೂ ಅಡಗಿರುವುದಾಗಿ ತಿಳಿಸಿದನು. * ರಷ್ಯಾದಲ್ಲಿ ಸಮಾಜವಾದೀ ವ್ಯವಸ್ಥೆಯ ಸ್ಥಾಪನೆಯ ಸಾಧ್ಯತೆಯನ್ನು ಮಾತ್ರ ಹೇಳಿ ಲೆನಿನ್ ತನ್ನ ವಿವರಣೆಯನ್ನು ಮುಗಿಸಲಿಲ್ಲ, ಕಾರ್ಮಿಕ ವರ್ಗದ ಮುಖಂಡತ್ವದಲ್ಲಿ ಎಲ್ಲಾ ಶೋಷಿತವರ್ಗಗಳನ್ನು ಸಂಘಟಿಸಿ, ಕ್ರಾಂತಿಮುಖರನ್ನಾ ಗಿ ಮಾಡಿದನು ಕಾರ್ಮಿಕವರ್ಗಕ್ಕೆ ಎಚ್ಚರಿಕೆಯಿತ್ತು ಗಳಿಸಿರುವ ವಿಜಯವನ್ನು ಸಂರಕ್ಷಿಸಲೂ, ಬಂಡವಾಳವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲೂ ಮತ್ತು ಸಮಾಜವಾದೀ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸಲೂ ಕಾರ್ಮಿಕವರ್ಗದ ಏಕೈಕ ಪ್ರಭುತ್ವ (The Dictatorship of the Proletariat) ಮತ್ತು ರಾಜ್ಯ ಶಕ್ತಿಯ ಉಪಯೋಗ ಇವು (The Retention of the State) ಅತ್ಯಗತ್ಯವಾಗಿವೆಯೆಂದು ತಿಳಿಸಿದನು. ಅದರಂತೆ ಕಾರ್ಮಿಕರ ಆಡಳಿತ ಮತ್ತು ಕಾರ್ಮಿಕವರ್ಗದ ಏಕೈಕ ಪ್ರಭುತ್ವ ಸ್ಥಾಪಿತವಾದವು. * ರಷ್ಯಾದ ಮಹಾಕ್ರಾಂತಿಯಲ್ಲಿ ನಾಯಕ ಲೆನಿನ್ನ ನ ಮುಖಂಡತ್ವದಷ್ಟೆ ರಷ್ಯಾದ ಕಮ್ಯೂನಿಸ್ಟ್ ಪಕ್ಷದ ಪಾತ್ರವೂ ಹಿರಿದಾಗಿದೆ. ಲೆನಿನ್ನ ನಂತಹ