ಪುಟ:ಕಮ್ಯೂನಿಸಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಷ್ಯಾದಲ್ಲಿ ಸಮಾಜವಾದ ೧೦೧ ಕಮ್ಯೂನಿಸ್ಟ್ ವ್ಯವಸ್ಥೆಯ ಕಾಲದಲ್ಲಾಗಲೀ ಜನರ ಅಭಿರುಚಿ ಮತ್ತು ಆವಶ್ಯಕತೆಗಳು ಗುಣದಲ್ಲಾಗಲೀ ಗಾತ್ರದಲ್ಲಾಗಲೀ ಒಂದೇ ಸಮಾನ ವಾಗಿರುವುದಿಲ್ಲವೆಂಬ ಆಧಾರದ ಮೇಲೆ ಮುಂದುವರೆದಿದೆ. ಇದೇ ಮಾರ್ಕ್ಸ್‌ವಾದದಲ್ಲಿ ಸಮತ್ವ ಶಬ್ದಕ್ಕೆ ಇರುವ ಅರ್ಥ, ಮಾರ್ಕ್ಸ್‌ವಾದ ಇನ್ನಾವ ವಿಧವಾದ ಸಮಾನತೆಯನ್ನು ಒಪ್ಪಿಲ್ಲ ಮತ್ತು ಅಂಗೀಕರಿಸಿಯೂ

ಸಮಾಜವಾದ ವ್ಯಕ್ತಿಗಳ ಜೀವನ ಮತ್ತು ಅಭಿರುಚಿಯನ್ನು ಮಟ್ಟ

ಮಾಡು (Levelling) ವುದರ ಮೂಲಕ ಸಮಾನತೆ ತರುತ್ತಿದೆ ಎನ್ನುವ ಅಭಿಪ್ರಾಯಕ್ಕೆ ಬರುವುದೂ ಮತ್ತು ಮಾರ್ಕ್ಸ್‌ವಾದಿಗಳ ಪ್ರಕಾರ ಎಲ್ಲರೂ ಒಂದೇ ವಿಧವಾದ ಬಟ್ಟೆಯನ್ನು ಧರಿಸಬೇಕು, ಒಂದೇ ವಿಧವಾದ ಆಹಾರ ವನ್ನು ಒಂದೇ ಪ್ರಮಾಣದಲ್ಲಿ ಎಲ್ಲರೂ ತೆಗೆದುಕೊಳ್ಳಬೇಕು ಎನ್ನುವುದೂ ಮಾರ್ಕ್ಸ್‌ವಾದವನ್ನು ಅಪಹಾಸ್ಯಕ್ಕೆ ಗುರಿಮಾಡುವುದಾಗಿದೆ. ಮಾರ್ಕ್ಸ್‌ವಾದ ಎಲ್ಲರನ್ನೂ ಒಂದೇ ಮಟ್ಟಕ್ಕೆ ತರುವ ಕ್ರಿಯೆಗೆ ವಿರುದ್ಧವಾದ ಶಕ್ತಿ ಎಂಬುದನ್ನು ಎಷ್ಟು ಬೇಗನೆ ತಿಳಿದುಕೊಂಡರೆ ಅಷ್ಟು ಉತ್ತಮ. ಈ ಕಾರಣದಿಂದಲೇ ಮಾರ್ಕ್ಸ್-ಏಂಗೆಲ್ಸ ರು ತಮ್ಮ ಕಮ್ಮ ನಿಸ್ಟ್ ಪ್ರಣಾಳಿಕೆಯಲ್ಲಿ ಪ್ರಾಚೀನ ಸಮಾಜವಾದಗಳನ್ನು ಬಹುಉಗ್ರವಾಗಿ ಟೀಕಿಸಬೇಕಾಯಿತು. ಪ್ರಾಚೀನ ಸಮಾಜವಾದಗಳು ಎಲ್ಲರಲ್ಲಿಯೂ ವಿರಕ್ಕಿ ಯನ್ನೂ ಮತ್ತು ಅತಿ ಅನಾಗರಿಕ ಸಮಾಜದಲ್ಲಿರುವ ಸಮಾನತೆಯನ್ನೂ ಬೋಧಿಸಿದ್ದರಿಂದ ಅವನ್ನು ಪ್ರಗತಿ ವಿರೋಧಿ ಎಂದರು, ಸಮಾನತೆಗಾಗಿ ಕಾರ್ಮಿಕರು ಮಾಡುತ್ತಿರುವ ಬೇಡಿಕೆಯ ನಿಜಸ್ವರೂಪವೆಂದರೆ ವರ್ಗ ಗಳನ್ನು ನಾಶಮಾಡಬೇಕೆನ್ನುವ ಬೇಡಿಕೆಯಾಗಿದೆ.' ! ಈ ವಿವರಣೆ ಸಮಾಜವಾದೀ ಆರ್ಥಿಕವ್ಯವಸ್ಥೆಯಲ್ಲಿ ವ್ಯಕ್ತಿಗಳ ಆರ್ಥಿಕ ಸ್ಥಾನಮಾನಗಳನ್ನು ಅರಿಯುವುದಕ್ಕೆ ಸಾಧ್ಯ ಮಾಡಿಕೊಟ್ಟಿದೆ. ಬಂಡ ವಾಳಶಾಹಿ ವ್ಯವಸ್ಥೆಯಲ್ಲಿರುವಂತೆ ವ್ಯಕ್ತಿಗಳು ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿರಲೂ ಮತ್ತು ಕೂಲಿಗಾರರನ್ನು ನೇಮಿಸಿಕೊಂಡು ತಮಗೆ ಲಾಭ ದೊರಕುವ ರೀತಿಯಲ್ಲಿ ಪದಾರ್ಥಗಳನ್ನು ಉತ್ಪಾದಿಸಿ

  • (1) 17 ನೇ ಕ ನಿಸ್ಟ್ ಪಕ್ಷದ ಕಾಂಗ್ರೆಸಿಗೆ ಸ್ಟಾಲಿನ್ ಇತ್ಯ ವರದಿ

ಯಿಂದ : (Stalin Reports-P. P. H. Bombay, 1944, Page 161).