ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ 40 ಗಳು ! ರಷ್ಯಾದಲ್ಲಿ ಸಮಾಜವಾದ ಮೊದಲನೆಯದಾಗಿ, ರಷ್ಯಾದಲ್ಲಿದ್ದ ವಿವಿಧ ಜನಾಂಗಗಳಿಗೆ ಸ್ವಯಂ ನಿರ್ಣಯದ ಹಕ್ಕನ್ನು (Right of Self Determination) ನೀಡಲಾಗಿದೆ. ಪ್ರತಿ ಜನಾಂಗ ತನ್ನ ಸ್ವಂತ ಇಚ್ಛೆಯಿಂದ ಸಮಾಜವಾದೀ ರಾಜ್ಯ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಕೊಡಲಾಗಿದೆ. ಈ ಜನಾಂಗ ಗಳು ರಷ್ಯಾದೇಶದಲ್ಲಿ ಸಂಯುಕ್ತ ಸಮಾಜವಾದೀ ಸೋವಿಯಟ್ ರಾಷ್ಟ್ರ (Union of the Soviet Socialist Republics) ಎಂಬ ಹೆಸರಿನಿಂದ ಒಂದು ಒಕ್ಕೂಟಕ್ಕೆ ಸೇರಿವೆ. ಎರಡನೆಯದಾಗಿ, ಕ್ರಾಂತಿಯ ಕಾಲದಲ್ಲಿ ಕಾರ್ಮಿಕವರ್ಗದ ಅಧಿಕಾರ ವನ್ನು ವ್ಯಕ್ತಪಡಿಸುವ ಸೋವಿಯಟ್ ಗಳು (ಆಡಳಿತ ಸಮಿತಿಗಳು) ಪ್ರತಿ ಸರ್ಕಾರದ ಹಾಗೆ (Counter Government) ದೇಶದಾದ್ಯಂತ ಉದ್ಭವಿಸಿದವು. ಕಾರ್ಮಿಕರ ಏಕೈಕ ಪ್ರಭುತ್ವವನ್ನು ಪ್ರತಿಬಿಂಬಿಸುವ ಕೇಂದ್ರ ಗಳಾದವು. ಸೋವಿಯಟ್ ಗಳಿಂದ ಚುನಾಯಿತರಾದ ಪ್ರತಿನಿಧಿಗಳಿಂದ ಪ್ರಾಂತೀಯ ಮತ್ತು ಕೇಂದ್ರ ಸರ್ಕಾರ ರಚನೆಯಾಯಿತು. ಮೂರನೆಯದಾಗಿ, ಸೋವಿಯಟ್ ಪೌರರು ವಾಕ್ ಸ್ವಾತಂತ್ರ ವನ್ನೂ, ಅಭಿಪ್ರಾಯ ಸ್ವಾತಂತ್ರ್ಯವನ್ನೂ, ಸಂಘ ಸ್ವಾತಂತ್ರ್ಯವನ್ನೂ, ಮತಕೊಡುವ ಆಧಾರದ ಮೇಲೆ ರೂಪಿತವಾಗಿರುವ ಪ್ರಜಾಸತ್ತ ನೈಜ ಪ್ರಜಾಸತ್ತೆಯಾಗುವುದಿಲ್ಲ. (Real Dermocracy), ಹಣದ ಪ್ರಭಾವವಿದ್ದು, ರಾಜಕೀಯವೂ, ಸಾರ್ವಜನಿಕ ಜೀವನವೂ ಹಣವುಳ್ಳವರ ಅಥವ ಅವರ ಹಿಂಬಾಲಕರ ಅಥವ ರಾಜಕೀಯ ನಡೆಸಿ ಹಣ ಸಂಪಾದನೆ ಮಾಡಿ ಕೊಳ್ಳುವವರ ಸ್ವತ್ತು ಅಥವ ಉದ್ಯೋಗವಾಗುತ್ತದೆ. ಸರ್ಕಾರವು ಹಣಗಾರರ ಅಥವ ಸ್ವಾಮ್ಯವುಳ್ಳವರ ಹಿತರಕ್ಷಣೆಗಾಗಿ ಇರುತ್ತದೆ. ವರ್ಗಗಳ ಇರುವಿಕೆಯನ್ನೂ ಸ್ವಾಮ್ಯದ ಪ್ರಭಾವವನ್ನೂ ಹೋರಾಟ ಹೂಡಿದ ರಷ್ಯಾದ ಸಮಾಜವಾದೀ ಕ್ರಾಂತಿ ತನ್ನದೇ ಆದ ಮತ್ತು ಕಾರ್ಮಿಕ ವರ್ಗದ ಏಕೈಕ ಪ್ರಭುತ್ವ ವಿರುವ ಕಾರ್ಮಿಕರ ಪ್ರಜಾಸತ್ತೆಯನ್ನು ಸ್ಥಾಪಿಸಿದೆ, ಹೊಸ ಆರ್ಥಿಕವ್ಯವಸ್ಥೆಯ ಸನ್ನಿವೇಶದಲ್ಲಿ ಹೊಸ ರೂಪದ ರಾಜಕೀಯವ್ಯವಸ್ಥೆಗೆ ಅಣಿಮಾಡಿದೆ. ಆದುದರಿಂದ ರಷ್ಯಾದ ಕಾರ್ಮಿಕರ ಪ್ರಜಾಸತ್ತೆಯನ್ನು ಬಂಡವಾಳಶಾಹಿ ಪ್ರಜಾಸತ್ತೆ ಕೊಟ್ಟಿರುವ ಲಕ್ಷಣ ಗಳಿಂದ ಅಳೆದು ನೋಡುವುದು ತಪ್ಪಾಗುತ್ತದೆ, ಬಂಡವಾಳಶಾಹಿ ಪ್ರಜಾಸತ್ತೆಗೂ ಪಾರ್ ಲಿಯಮೆಂಟರಿ ಪ್ರಜಾಸತ್ತೆಗೂ ಇರುವ ಸಂಬಂಧದಬಗ್ಗೆ ಮತ್ತು ಪ್ರಜಾಸತ್ತೆಯಬಗ್ಗೆ ಮಾರ್ಕ್ಸ್ ವಾದದ ಧೋರಣೆ ಬಗ್ಗೆ ಮುಂದೆ 9 ನೇ ಅಧ್ಯಾಯವನ್ನು ನೋಡಿ, ನಾಶಪಡಿಸಲು ಸಮಾಜವಾದೀ