ಪುಟ:ಕಮ್ಯೂನಿಸಂ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81 ೧೦೫ ಇರುವ ಅಭಿಪ್ರಾಯಕ್ಕೆ ರಷ್ಯಾದಲ್ಲಿ ಸಮಾಜವಾದ ವಿಲ್ಲದೆ ಅದನ್ನು ವ್ಯಕ್ತಪಡಿಸಲು ಸಾಧ್ಯವಿದೆ. ಬರುವ ಅಭಿಪ್ರಾಯ ಬಹು ಮತದ್ದು ಇಲ್ಲವೇ ಅಲ್ಪಸಂಖ್ಯಾತರದು, ಸಮಾಜ ವ್ಯವಸ್ಥೆ ನಡೆಯಬೇಕಾ ದರೆ ಬಹುಮತದ ಅಭಿಪ್ರಾಯಕ್ಕೆ ಮಾನ್ಯತೆ ಇರಬೇಕು. ಭಿನ್ನಾಭಿ ಪ್ರಾಯವುಳ್ಳವರು ಒಂದು ಸಮಸ್ಯೆ ನಿರ್ಧಾರವಾಗುವ ವೇಳೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ. ಭಿನ್ನಾಭಿಪ್ರಾಯವನ್ನು ಸಭೆ ಬಹುಮತದಿಂದ ಅನುಮೋದಿಸುವುದಾದರೆ ಅದೇ ಕಾರ್ಯನೀತಿಯಾ ಗುತ್ತದೆ, ಶಾಸನವಾಗುತ್ತದೆ. ಇಲ್ಲವಾದರೆ, ಅಲ್ಪ ಸಂಖ್ಯಾತರು ಬಹುಮತ ತಲೆಬಾಗಬೇಕು ಅಭಿಪ್ರಾಯಗಳಲ್ಲಿ ಭಿನ್ನತೆ ಎರಡು ರೂಪಗಳಲ್ಲಿದೆ. ಒಂದನೆಯದು, ಆರ್ಥಿಕ ಸಮಾನತೆ ಇಲ್ಲದಿರುವ ವ್ಯವಸ್ಥೆಯಲ್ಲಿ ಬರಬಹುದಾದ ಭಿನ್ನಾಭಿ ಪ್ರಾಯಗಳು, ಭಿನ್ನಾಭಿಪ್ರಾಯ ಸ್ವಾಭಾವಿಕವಾದರೂ ಸ್ವಾಮ್ಯದ ಪ್ರಶ್ನೆ ಬಂದಾಗ ಸ್ವಾಮ್ಯ ಉಳ್ಳವರ ಮತ್ತು ಇಲ್ಲದವರ ಅಭಿಪ್ರಾಯ ಪರಸ್ಪರ ವ್ಯತಿರಿಕ್ತವಾಗಿ ಇರುತ್ತದೆ. ಏಕೆಂದರೆ, ಸ್ವಾಮ್ಯದ ಪ್ರಶ್ನೆ ಒಂದು ವರ್ಗದ ಜನರಿಗೆ ಸಂಬಂಧಿಸಿದೆ ಮತ್ತು ಸ್ವಾಮ್ಯವರ್ಗದ ಸ್ಥಾನಮಾನಗಳು ಅವರು ಹೊಂದಿರುವ ಸ್ವಾಮ್ಯದಿಂದ ನಿರ್ಧಾರವಾಗುತ್ತಿವೆ. ಆದುದರಿಂದ, ಸ್ವಾಮ್ಯ ವರ್ಗದ ಅಭಿಪ್ರಾಯವು ಪ್ರತ್ಯೇಕತೆ ಅಥವಾ ವಿಶೇಷಣತೆಯನ್ನು ಹೊಂದಿರು ವಂತೆ ಖಾಸಗೀ ಸ್ವಾಮ್ಯವು ಮಾಡಿವೆ. ಈ ವಿಶೇಷಣತೆಯಿಂದ ಕೂಡಿ ರುವ ಭಿನ್ನಾಭಿಪ್ರಾಯ ಮೂಲಭೂತವಾದದ್ದು ; ಮತ್ತು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯಕ್ಕೆ ಎಡೆಯಿರ ವ ಆರ್ಥಿಕ ವ್ಯವಸ್ಥೆಗಳ ಲೆಲ್ಲಾ ಸ್ವಾಮ್ಯದ ರಕ್ಷಣೆಯೇ ವರ್ಗ ರಾಜಕೀಯಕ್ಕೂ (Class- politics) ಮತ್ತು ವಿವಿಧ ರಾಜಕೀಯ ಪಕ್ಷಗಳು ಜನ್ಮತಾಳುವುದಕ್ಕೂ ಕಾರಣವಾಗಿದೆ. ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ (Capitalist or Bourgeoisie Democracy) ವಿವಿಧ ರಾಜಕೀಯ ಪಕ್ಷಗಳ ಒಳ೦ತರಾಳ (ಸಮಾಜವಾದೀ ಪಕ್ಷಗಳು ಹೊರತು) ಇದೇ ಆಗಿದೆ. ಇದರಿಂದಾಗಿ, ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಸ್ವರೂಪವನ್ನೂ ಮತ್ತು ಧೈಯಗಳನ್ನೂ ವಿಂಗಡಿಸುವಾಗ ಇವು ಖಾಸಗೀ ಸ್ವಾಮ್ಯದ ಬಗ್ಗೆ ಹೊಂದಿರುವ ಧೋರಣೆಯನ್ನು ಮುಖ್ಯವಾಗಿ ಪರಿಗಣಿಸಬೇಕು. ಆಗಲೇ ಖಾಸಗೀ ಸ್ವಾಮ್ಯ ಇರುವ ಎಡೆ, ವಿವಿಧ