ಪುಟ:ಕಮ್ಯೂನಿಸಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬. ವೈಜ್ಞಾನಿಕ ಸಮಾಜ ವಾದ ಪ್ರ ಸಕ್ತ ಅನೇಕ ಭಾಗಗಳಿಗೆ ಮುಖ್ಯವಾಗಿ ಫ್ರಾನ್ಸ್, ಬೆಲ್ಸಿಯಂ ಮತ್ತು ಜರ್ಮನಿ ದೇಶಗಳಿಗೆ ಹರಡಲಾರಂಭಿಸಿತು. ಈ ಕ್ರಾಂತಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ರಾಜಕೀಯ ಕ್ರಾಂತಿಗಳಷ್ಟೇ ಮುಖ್ಯವಾದದ್ದು. ಬಹುಶಃ ಕೈಗಾ ರಿಕಾ ಕ್ರಾಂತಿ ಈ ಎರಡು ಕ್ರಾಂತಿಗಳಿಗಿಂತ ಮಿಗಿಲಾದ ಪರಿಣಾಮವನ್ನು ಪ್ರಪಂಚದ ನಾನಾಭಾಗಗಳಲ್ಲಿ ಉಂಟುಮಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಉತ್ಪಾದನೆಯಲ್ಲಿ ಯಾಂತ್ರಿಕ ಶಕ್ತಿಯನ್ನು ಉಪಯೋಗಿ ಸುವುದೇ ಕೈಗಾರಿಕಾ ಕ್ರಾಂತಿ, ಈ ಕ್ರಾಂತಿ ಖಾಸಗೀ ಬಂಡವಾಳ ಶೇಖರಣೆ, ಕೂಲಿಗಾರರ ಸಂಖ್ಯೆಯ ಅಭಿವೃದ್ಧಿ ಲಾಭೆಕ ಧೈಯ ದಿಂದ ಸರಕುಗಳ ಉತ್ಪಾದನೆ ಇವು ಉಂಟಾದುವು. ಕೂಲಿಗಾರರು ಸಾಮೂಹಿಕವಾಗಿ ತಯಾರಿಸಿದ್ದೆಲ್ಲಾ ಬಂಡವಾಳಗಾರನ ಸ್ವತ್ತಾಯಿತು. ಕೂಲಿಗಾರರಿಗೆ ಯಾವ ಸ್ವಾಮ್ಯವೂ ಇಲ್ಲದೆ ದುಡಿಮೆ ಮಾತ್ರ ಉಳಿಯಿತು,

  • ಕೈಗಾರಿಕಾ ಕ್ರಾಂತಿ ಮತ್ತೊಂದು ಕಠೋರ ಪರಿಣಾಮವನ್ನು ತಂದಿತ್ತು. ವ್ಯವಸಾಯ ರಂಗದಲ್ಲಿ ಜೀತ, ಕೂಲಿ ವಾರ ಗುತ್ತಿಗೆಯ ಮೂಲಕ ಶೋಷಣೆ ಆಗುತ್ತಿರುವಂತೆ ಕೈಗಾರಿಕಾ ರಂಗದಲ್ಲಿ ಇನ್ನೂ ಹೆಚ್ಚಾದ ಶೋಷಣೆ ಪ್ರಾರಂಭವಾಯಿತು. ಶೋಷಣೆ ಹೆಚ್ಚಿದಂತೆ ದೇಶದಲ್ಲಿ ದಾರಿದ್ರ, ನಿರ್ಗತಿ ಹೆಚ್ಚಿದವು. ಇನ್ನೊಂದು ಕಡೆ ಕೈಗಾರಿಕಾ ಸ್ವಾಮ್ಯ ವರ್ಗದಲ್ಲಿ ಸಂಪತ್ತು ಸಂಗ್ರಹವಾಯಿತು. ಸಮಾಜ ಇಬ್ಬಾಗವಾಗಿ ಒಡೆ ಯಿತು. ಸ್ವಾಮ್ಯವುಳ್ಳವರ್ಗ, ಸ್ವಾಮ್ಯವಿಲ್ಲದ ದುಡಿಮೆಗಾರ ವರ್ಗ ಉಂಟಾದವು. ಪ್ರಾರಂಭದಲ್ಲಿ ಕೈಗಾರಿಕಾ ಕ್ರಾಂತಿಯ ಪರಿಣಾಮ ವನ್ನು ಕಾರ್ಮಿಕವರ್ಗ ಗಮನಿಸಲಿಲ್ಲ. ಕ್ರಮೇಣ ಶೋಷಣೆ ಅತ್ಯಧಿಕ ರೀತಿಯಲ್ಲಿ ಆಗುತ್ತಿರುವುದನ್ನು ಕಾರ್ಮಿಕವರ್ಗ ಕಂಡಿತು ; ಅವರಿಂದ ಪ್ರತಿ ಭಟನೆ ಮುಷ್ಕರಗಳು ಆರಂಭವಾದವು. ಇಲ್ಲಿ ಕೈಗಾರಿಕಾ ಕ್ರಾಂತಿ ಜನಸಮುದಾಯಕ್ಕೆ ತಂದ ನಿರ್ಗತಿಕ ಬಾಳನ್ನು ನೋಡಿ, ಮರುಕತಾಳಿ, ತಡೆಗಟ್ಟಲು ಕೆಲವು ಉದಾರಿಗಳು ಮುಂದೆ ಬಂದರು. ಇಂತಹ ಉದಾರಿಗಳಲ್ಲಿ ಇಂಗ್ಲೆಂಡಿನ ರಾಬರ್ ಓವೆನ್ (1771-1858) ಎಂಬಾತನು ಚಿರಸ್ಮರಣೀಯನು, ಯಂತ್ರದ ಉಪ ಯೋಗದಿಂದ ಶೋಷಣೆಯಾಗುವುದಿಲ್ಲ. ಅದರ ಉಪಯೋಗದಿಂದ ಬಂದ ಪ್ರತಿಫಲವನ್ನು (ಲಾಭವನ್ನು) ದುಡಿಯುವ ಕೂಲಿಗಳಿಗೆ ಹಿಂತಿರುಗಿ