ಪುಟ:ಕಮ್ಯೂನಿಸಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಸಮಾಜ ವಾದದ ಜನನ

೧೯

ಸಾಧ್ಯವಾಗುತ್ತದೆಂದು ತಿಳಿಸಿದರು. ಇನ್ನು ಕೆಲವರು ಸಮಾಜವಾದೀಸಮಾಜ ಒಂದುಗುರಿ (Ideal), ಅದು ಯಾವಾಗ ಲಭಿಸುತ್ತದೆಯೋ ಹೇಳು ವುದಕ್ಕಾಗುವುದಿಲ್ಲ; ಆ ಗುರಿಯನ್ನು ಜ್ಞಾಪಕದಲ್ಲಿಟ್ಟು ಖಾಸಗೀ ಸ್ವಾಮ್ಯ ವ್ಯವಸ್ಥೆ ಯನ್ನು ಹಲವೆಡೆಗಳಲ್ಲಿ ಸುಧಾರಣೆ ಮಾಡುವುದಾದರೆ ಕ್ರಮೇಣ ಆ ಗುರಿಯನ್ನು ಮುಟ್ಟಬಹುದೆಂದು ನುಡಿದರು. ಅಂತೂ ಶೋಷಿತವರ್ಗದ ಚಳವಳಿಗಿಂತ ಮಿಗಿಲಾಗಿ ಸಮಾಜವಾದಿಗಳೆಂದು ಹೇಳಿಕೊಳ್ಳುವ ತತ್ತ್ವ ನಿರೂಪಕರ ಗೊಂದಲ ಹೆಚ್ಚಾಯಿತು, ನ್ಯಾಯವಂತೂ ಶೋಷಿತವರ್ಗಕ್ಕೆ ಲಭಿಸಲಿಲ್ಲ. ಅವರ ಚಳವಳಿಯೂ ನಿಲ್ಲಲಿಲ್ಲ. ಸ್ವಾಮ್ಯವರ್ಗದ ಮನಃ ಪರಿವರ್ತನೆಯೂ ಆಗಲಿಲ್ಲ. ಬಂದ ಸುಧಾರಣೆಗಳು ಶೋಷಣೆಯನ್ನು ಚ್ಯುತಿಗೊಳಿಸಲಿಲ್ಲ. ಶೋಷಿತವರ್ಗ ದಿಕ್ಕೆಟ್ಟು, ಕಂಗಲಾಗಿ, ಚಳವಳಿಗಳಲ್ಲಿ ನೊಂದು ಬೇಸತ್ತಿರುವಾಗ ಮಾರ್ಕ್ ಮತ್ತು ಏಂಗೆಲ್ಸ್ ಎಂಬ ಜರ್ಮನೀ ದೇಶದ ಗೆಳೆಯರು ತಮ್ಮದೇ ಆದ ಒಂದು ಹೊಸ ರೂಪದ ಸಮಾಜ ವಾದ ವನ್ನು ಪ್ರತಿಪಾದಿಸಿದರು. ತಮ್ಮ ಸಮಾಜವಾದವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು. ಇತರ ಸಮಾಜವಾದಗಳನ್ನು ಕಾಲ್ಪನಿಕ ಸಮಾಜವಾದಗಳೆಂದು ಘೋಷಿಸಿದರು. ತಮ್ಮ ವಾದದ ಮೂಲಕ ಶೋಷಿತವರ್ಗದ ಚಳವಳಿಯ ಇಷ್ಟಾರ್ಥ ಕೈಗೂಡುವುದೆಂದು ತಿಳಿಸಿದರು. ಶೋಷಿತವರ್ಗದ ವಿಮುಕ್ತಿ ಶೋಷಿತವರ್ಗದ ಚಳವಳಿಯಿಂದ ಮಾತ್ರ ಸಾಧ್ಯವೆಂದು ಸ್ಪಷ್ಟಪಡಿಸಿದರು. ಅಂದಿನಿಂದ ಶೋಷಿತವರ್ಗದ ಚಳವಳಿ ಕಾರ್ಮಿಕವರ್ಗದ, ರೈತವರ್ಗದ ಮತ್ತು ಪ್ರಾಜ್ಞರ ಚಳವಳಿಯಾಗಿದೆ. ಮಾರ್ಕ್ಸ್ ತತ್ರ ಈ ಚಳವಳಿಯ ತತ್ತ್ವವಾಗಿದೆ. ಈ ತತ್ತ್ವವನ್ನು ಆಚರಣೆಗೆ ತರಲು ಹೂಡಿರುವ ಚಳವಳಿ ಸಮಾಜವಾದೀ ಚಳವಳಿ ಅಥವಾ ಕಮ್ಯೂನಿಸ್ಟ್ ಚಳವಳಿ ಆಗಿದೆ, ಅಧ್ಯಯನ : What Happened in History: G. Childe, Pelican, London. Social Evolution

Watts, London: Origin of the family, private property and the state; F. Engels : (Marx and Engels Selected Works Vol. II, Pages 155-278; Ed. 1951).