ಪುಟ:ಕಮ್ಯೂನಿಸಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದಗಳು. ಅಧ್ಯಾಯ-2, 1848 ಅತಿ ಮುಖ್ಯವಾದ ವರ್ಷ. ಈ ವರ್ಷದ ರ್ಜೂ ತಿಂಗಳಲ್ಲಿ ಮಾರ್ಕ್ ಮತ್ತು ಏಂಗೆಲ್ಸ್ರು ತಮ್ಮ ತತ್ತ್ವದ ತಿರುಳನ್ನು ಸಂಕ್ಷಿಪ್ತವಾಗಿ “ಸಮವಾದಿಗಳ ಪ್ರಣಾಳಿಕೆ " (Communist Manifesto) ಎಂಬ ಗ್ರಂಥದ ಮೂಲಕ ಪ್ರಕಟಪಡಿಸಿದರು. ಇವರು ಈ ಸಂದರ್ಭದಲ್ಲಿ ತಮ್ಮದೇ ಆದ ಸಮಾಜವಾದೀ ತತ್ತ್ವವನ್ನು ಪ್ರಕಟಿಸುವುದಕ್ಕೂ ತಾವು ಪ್ರಕಟಿಸಿದ ಗ್ರಂಥಕ್ಕೆ “ಸಮವಾದಿಗಳ ಪ್ರಣಾಳಿಕೆ” ಎಂದು ಹೆಸರು ಇಡುವುದಕ್ಕೂ ಕಾರಣ ಗಳಿದ್ದವು. ಇವುಗಳ ಪರಿಚಯ ಮಾರ್ಕ್-ಏಂಗೆಲ್ಸರು ಪ್ರತಿಪಾದಿಸಿರುವ ಸಮಾಜವಾದೀ ತತ್ತ್ವದ ಸ್ವರೂಪ, ಅದರ ವೈಶಿಷ್ಟ್ಯತೆ ಮತ್ತು ಸಮಾಜ ವಾದದ ಇತಿಹಾಸದಲ್ಲಿ ಮಾರ್ಕ್ಸ್ ವಾದದ ಪಾತ್ರವನ್ನು ತಿಳಿಯಲು ಸಾಧಕ ವಾಗಿದೆ.

  • ಮಾರ್ಕ್ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಪ್ರಚಾರ

ದಲ್ಲಿದ್ದ ಸಮಾಜವಾದೀ ತತ್ತ್ವಗಳಿಗೆ ಮನಸೋತನು. ಅವುಗಳ ಅಧ್ಯಯನ ಕ್ಯಾಗಿ ಸಮಾಜವಾದೀ ತತ್ತ್ವಗಳಿಗೆ ತೌರುಮನೆಯಂತಿದ್ದ ಫ್ರಾನ್ಸ್ ದೇಶಕ್ಕೆ ಬಂದನು. ಹಾಗೆಯೇ ಮಾರ್ಕ್ನ ಜೀವನದ ಸಹೋದ್ಯೋಗಿ (1) ಕಾರ್ಲ್ ಮಾರ್ಕ್ಸ್ (1818-1883) – 5 ನೇ ಮೇ 1818 ರಲ್ಲಿ ಜರ್ಮನೀ ದೇಶದ ಟೀಂ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ವಕೀಲ ವೃತ್ತಿಯವರು ಟೀ‌ನಲ್ಲಿ ಮಾರ್ಕ್ಸ್ ತನ್ನ ಪ್ರಾರಂಭದ ವ್ಯಾಸಂಗಗಳನ್ನು ಮುಗಿಸಿ, ಬಾನ್ ಮತ್ತು ಬರಿನ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸಿ ದನು, ಸಮಾಜದ ಆಗು ಹೋಗುಗಳನ್ನು ತಿಳಿಯಲು ಯತ್ನಿಸಿ ಅಂದು ವಿಖ್ಯಾತ ರಾಗಿದ್ದ ಕೆಗೆಲ್ ಮತ್ತು ಪೂಯರ್ ಬಾಕ್ ಎಂಬ ತತ್ವವೇತ್ತಿಗಳ ಅನುಯಾಯಿ ಯಾದನು. ಆದರೆ ಬೆಳಕು ಸಿಗಲಿಲ್ಲ. ಸಮಾಜದ ಆರ್ಥಿಕ ವ್ಯವಸ್ಥೆ ಯ ಅರಿವಿ ನಲ್ಲಿ ಸಮಾಜದ ಆಗು ಹೋಗುಗಳು ಅಡಗಿರುವುದನ್ನು ಕಂಡನು, ಭತವಾದಿ ಯಾದನು. ತನ್ನ ಸಂದೇಶವನ್ನು ಸಾರಲು ಸಿದ್ದನಾದನು. ಜರ್ಮನಿಯಲ್ಲಿ ಅಂದು ಪ್ರಗತಿ ವಿರುದ್ದ ವಾತಾವರಣವಿದ್ದುದರಿಂದ ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಅವಲಂಬಿಸುವುದು ಕಷ್ಟವಾಯಿತು, ಕಲೋನ್ ನಗರದಲ್ಲಿ ಪ್ರಕಟವಾಗುತ್ತಲ್ಲಿದ್ದ ತೀವ್ರಗಾಮಿ ಬೂ‌ಶ್ಯಾ ಪತ್ರಿಕೆಯ