ಪುಟ:ಕಮ್ಯೂನಿಸಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

UAS LIBRARY Unvn 14561 ದ ೨೫ ವರ್ಗ ಹೋರಾಟವೇ (Class struggle) ಶೋಷಿತವರ್ಗದ ಉಸಿರಾಗಿರುವುದು ಕಂಡುಬಂದಿತ್ತು. ಮಾರ್ಕ್-ಏಂಗೆಲ್ಸ್ರು ಈ ಹೋರಾ ಟದ ಚಿತ್ರವನ್ನು ಖಾಸಗೀ ಸ್ವಾಮ್ಯ ಆರಂಭವಾದಾಗಿನಿಂದ ಪ್ರತಿಯೊಂದು ಸಮಾಜದಲ್ಲಿ ನಡೆದಿರುವುದನ್ನು ಕಂಡರು. ತಮ್ಮ ಕಾಲವಾದ ಹತ್ತೊಂ ಬತ್ತನೇ ಶತಮಾನದಲ್ಲಿ ಹೋರಾಟ ಇನ್ನೂ ಹೆಚ್ಚು ಪ್ರಮಾಣದಲ್ಲಿ ಪ್ರತಿ ಧ್ವನಿಗೊಳ್ಳುತ್ತಿರುವುದು ಗೋಚರವಾಯಿತು. ಫ್ರಾನ್ಸಿನ ಮಹಾ ಕ್ರಾಂತಿಯ ಕಾಲದಲ್ಲಿ ಬೆಳ್ಳೂಫ್ ಮತ್ತು ಆತನ ಸಹಪಾಠಿಗಳು ಸಮಾನತೆಯನ್ನು ನ್ಯಾಯದ ಹೆಸರಿನಲ್ಲಿ ಸಾರಿ ಸಾವನ್ನಪ್ಪಿದ್ದರೆ, ಬೆಳ್ಳೂಫನ ಪ್ರತಿಬಿಂಬಗಳು ಯೂರೋಪಿನ ನಾನಾ ಭಾಗಗಳಲ್ಲಿ ಕಾಣಿಸಿಕೊಂಡು, ಸ್ವಾಮ್ಯವರ್ಗವನ್ನು ಮೂಲೋತ್ಪಾಟನ ಮಾಡಲು ಶೋಷಿತವರ್ಗ ನಿರತರಾಗಿರುವುದನ್ನು ಕಂಡರು. ಫ್ರಾನ್ಸ್ ದೇಶದಲ್ಲಿ ಶೋಷಿತ ವರ್ಗದ ಪ್ರತಿಭಟನೆ 1848 ರ ಹೊತ್ತಿಗೆ ಮತ್ತೆ ಉಗ್ರರೂಪವನ್ನು ತಾಳಿದ್ದಿತು. ಇಂಗ್ಲೆಂಡ್ ದೇಶದಲ್ಲ ಸಹ ಕಾರ್ಮಿಕವರ್ಗ ಸ್ವಾಮ್ಯ ವರ್ಗವನ್ನು ಬಹಿರಂಗವಾಗಿ ಟೀಕಿಸಿತು. ಕಾರ್ಮಿಕವರ್ಗದ ಆಶೋತ್ತರಗಳನ್ನು ಪತ್ರಮುಖೇನ ಮಂಡಿಸುವುದಕ್ಕೆ (The Chartist movement) ಚಳವಳಿಯನ್ನು ಆರಂಭಿಸಿತ್ತು. ಯೂರೋಪಿನ ಪ್ರಮುಖ ರಾಜಧಾನಿಗಳಲ್ಲಿ ನಿರಂಕುಶ ಪ್ರಭುತ್ವ ಮತ್ತು ಸ್ವಾಮ್ಯವರ್ಗದ ದರ್ಪವನ್ನಡಗಿಸಲು ಚಳವಳಿಗಳೆದ್ದಿದ್ದವು. ಮುಖ್ಯವಾಗಿ, 1848 ರ ಹೊತ್ತಿಗೆ ಶೋಷಿತವರ್ಗದ ಚಳವಳಿ ಸ್ಪಷ್ಟವಾದ ರೂಪವನ್ನು ತಾಳಿ ಸ್ವಾಮ್ಯದ ಮೇಲೆ ಧಾಳಿ ಆರಂಭವಾಗಿತ್ತು. ಆದರೆ ಶೋಷಿತವರ್ಗದ ಆಶೋತ್ತರಗಳಿಗೆ ಪರಿಹಾರವನ್ನು ದೊರಕಿಸಿ ಕೊಡಲು ಹೊರಟ ವಾದಗಳು ಹಲವು ಬಗೆಯಲ್ಲಿದ್ದುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೀರ್ಮಾನಿಸುವುದೇ ಕಷ್ಟದ ಕೆಲಸ ವಾಯಿತು. ಎಲ್ಲವೂ ಧರ್ಮದ ನ್ಯಾಯದ ಹೆಸರಿನಲ್ಲಿ ಪ್ರತಿಪಾದಿತವಾಗಿ ದ್ದುದರಿಂದ ಮತ್ತು ಧರ್ಮ ನ್ಯಾಯಗಳ ಸಂರಕ್ಷಣೆ ಎಲ್ಲರ ಕರ್ತವ್ಯವೆಂದು ತಿಳಿಸಿದ್ದುದರಿಂದ ಧರ್ಮಕ್ಕೆ ನ್ಯಾಯಕ್ಕೆ ಚ್ಯುತಿ ಉಂಟಾಗಿರುವ ಬಗೆಯನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಯಿತು. ಮೇಲಾಗಿ ಈ ಹಲವು ವಾದಗಳು ತಮ್ಮ ಪರಿಹಾರಮಾರ್ಗವನ್ನು ಶೋಷಿತವರ್ಗಕ್ಕೆ ಮಾತ್ರ ಅನ್ವಯಿಸಿರಲಿಲ್ಲ, ಅಖಿಲ ಸಮಾಜದ ಉದ್ದಾರ ಧರ್ಮ-ಸಮಾಜವಾದಿಗಳ ಮತ್ತು ನ್ಯಾಯ