ಪುಟ:ಕಮ್ಯೂನಿಸಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ : ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ ಸಮಾಜವಾದಿಗಳ ಗುರಿಯಾಗಿದ್ದಿತು, ಶೋಷಿತವರ್ಗದ ಚ ಳ ವ ೪ ವರ್ಗವೈಷಮ್ಯವನ್ನು ತರುವುದೆಂದೂ, ಪಕ್ಷೀಯವಾಗುವುದೆಂದೂ ಮತ್ತು ಧರ್ಮಸಂಸ್ಥಾಪನೆ ಸರ್ವರ ಕರ್ತವ್ಯವಾದ್ದರಿಂದ ಶೋಷಿತವರ್ಗದ ಚಳ ವಳಿ ಅನಾವಶ್ಯಕವೆಂದೂ ತಿಳಿಸಿದರು. ಅಲ್ಪ ಸ್ವಲ್ಪ ಮಟ್ಟಿಗೆ ಫ್ರೆಂಚ್ ಮಹಾ ಕ್ರಾಂತಿಯಿಂದ ಸ್ಪೂರ್ತಿ ಪಡೆದು ಪ್ರತಿಪಾದಿತವಾಗಿದ್ದ ಉಗ್ರಗಾಮಿಗಳ ವಾದ ಶೋಷಿತವರ್ಗದ ವಾದವಾಗಿತ್ತು. ಸ್ವಾಮ್ಯ ಮತ್ತು ಶೋಷಕವರ್ಗದ ನಿರ್ಮೂಲವೇ ಶೋಷಿತವರ್ಗದ ವಿಮುಕ್ತಿಗೆ ಹೆದ್ದಾರಿ ಎಂದು ಉಗ್ರವಾದಿಗಳು ಘೋಷಿ ಸಿದ್ದರು. ಆದರೆ ಶೋಷಣೆ ಹೇಗೆ ನಡೆಯುತ್ತಿದೆ, ಸ್ವಾಮ್ಯವನ್ನಾಗಲೀ ಅಥವಾ ಶೋಷಣೆಯನ್ನಾಗಲೀ ನಿರ್ಮೂಲಮಾಡುವ ಬಗೆ ಹೇಗೆ, ಶೋಷಿತ ವರ್ಗ ಮಾಡಬೇಕಾಗಿರುವುದು ಏನು ಎಂಬುದರ ಬಗ್ಗೆ ವಿವರಣೆಯನ್ನು ಕೊಡಲು ಅಶಕ್ತರಾಗಿದ್ದರು. ಒಟ್ಟಿನಲ್ಲಿ ಎಲ್ಲರೂ ಭಾವುಕರಾಗಿ ಅಥವಾ ಮಾದರಿ ಸಮಾಜಗಳ ನಿರ್ಮಾಣದಲ್ಲಿ ಕಾಲ ಕಳೆದರು. ನಾನಾ ತರಹದ ವಿವರಣೆಯ ಪರಿಣಾಮವಾಗಿ ಸಮಾಜವಾದವೆಂಬ ಶಬ್ದ ಪ್ರಯೋಗದಲ್ಲಿ ಬಂದರೂ ನಾನಾರ್ಥವನ್ನು ತಾಳಿದ್ದಿತು. ಸ್ವಾಮ್ಯ ಮತ್ತು ಶೋಷಣೆ ಯನ್ನು ನಿರ್ಮೂಲ ಮಾಡಬೇಕೆಂದವರು, ಸ್ವಾಮ್ಯ ಮತ್ತು ಶೋಷಣೆಯ ಪ್ರಶ್ನೆ ಯನ್ನೆ ಚರ್ಚಿಸದವರು, ಶೋಷಿತವರ್ಗದ ದುಃಸ್ಥಿತಿಗೆ ಧರ್ಮ ಚ್ಯುತಿಯೂ ನ್ಯಾಯ ಚ್ಯುತಿಯೂ ಕಾರಣವಾಗಿದೆ ಎಂದವರು, ಮಾದರೀ ಸಮಾಜ ನಿರ್ಮಾಪಕರು ಎಲ್ಲರೂ ಸಮಾಜವಾದಿಗಳಾಗಿದ್ದರು. ಎಲ್ಲವೂ ಗೊಂದಲವಾಗಿದ್ದಿತು.

  • ಇಂತಹ ಸಮಯದಲ್ಲಿ ಶೋಷಿತವರ್ಗದ ಕಾರ್ಯಾಚರಣೆಯಿಂದಲೇ

ಮುಕ್ತಿ, ಹೋರಾಟವೇ ಉಳಿದಿರುವ ಮಾರ್ಗ, ಸ್ವಾಮ್ಯವೇ ಶೋಷಣೆಯ ಮೂಲ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣವೇ ತಮ್ಮ ಗುರಿ ಸ್ವಾಮ್ಯ ಮತ್ತು ಸ್ವಾಮ್ಯವರ್ಗದ ಸರ್ಕಾರದ ಮೂಲೋತ್ಪಾಟನೆಯೇ ತಮ್ಮ ಧೈಯ ಎಂದು ಕಾರಾಚರಣೆಯಲ್ಲಿ ನುರಿತಿದ್ದ ಕ್ರಾಂತಿಕಾರ ಯೋಧರು ತಮ್ಮದೇ ಆದ ' ನ್ಯಾಯವಾದಿಗಳ ಸಂಘ' (Federation of the Just) ವೊಂದನ್ನು 1836 ರಲ್ಲಿ ಫ್ರಾನ್ಸ್ ದೇಶದಲ್ಲಿ ಸ್ಥಾಪಿಸಿ ದರು. ಕ್ರಮೇಣ ಈ ಸಂಘ ಯೂರೋಪ್ ಖಂಡದ ನಾನಾ ದೇಶಗಳ