ಪುಟ:ಕಮ್ಯೂನಿಸಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಅಡಿ ವೈಜ್ಞಾನಿಕ ಸಮಾಜ ವಾದ ಭಾವುಕ ಸಮಾಜವಾದಗಳೆಂದು ಕರೆದರು (Utopian Socialism). ಕಲ್ಪನಾ ಸಮಾಜವಾದಗಳನ್ನು ಉಗ್ರ ಟೀಕೆಗೆ ಗುರಿಪಡಿಸಿದರು. ಅವುಗಳ ನಿಶ್ಚಯೋಜಕತೆಯನ್ನು, ಅವೈಜ್ಞಾನಿಕ ಸ್ವರೂಪವನ್ನೂ ಬಯಲು ಮಾಡಿದರು. ಒಂದನೆಯದಾಗಿ, ಯಾರು ಯಾರು ಸಲ್ವರಿಗೂ ಸುಖಮಯ ಜೀವನವನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಬುದ್ಧಿಶಕ್ತಿಯ ಮೂಲಕ 1 ಮಾದರೀ' ಸಮಾಜಗಳನ್ನು ನಿರ್ಮಾಣಮಾಡಿ, ಅವುಗಳನ್ನು ಅನುಕರಿ ಸುವಂತೆ ಕರೆ ಇತ್ತರೆ, ಅವರನ್ನೆಲ್ಲಾ ಕಲ್ಪನಾಸಮಾಜವಾದಿಗಳೆಂದರು. ಈ ಜನರಲ್ಲಿರುವ ವಿಶೇಷವೆಂದರೆ ಸುಂದರವಾದ ಸಮಾಜದ ಮಾದರಿಗಳನ್ನು ರಚಿಸುವುದು, ಹಿಂಬಾಲಕರನ್ನು ಆಕರ್ಷಿಸಲು ಪ್ರದರ್ಶನಕ್ಕೆ ಮಾದರಿ ಗಳನ್ನು ಇಡುವುದು, ಅವರ ಮನಸ್ಸನ್ನು ಒಲಿಸಿಕೊಳ್ಳುವುದು, ಅವರ ಧರ್ಮಬುದ್ಧಿಗೆ ತಾಕುವಂತೆ ವಿಜ್ಞಾಪಿಸಿಕೊಳ್ಳುವುದು, ಒಂದು ಮಾದರಿ ಯನ್ನು ಪ್ರೇಕ್ಷಕರು ಒಪ್ಪದಿದ್ದ ಪಕ್ಷದಲ್ಲಿ ನಿರ್ಮಾಣಮಾಡಿದ್ದ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು, ಹಾಗೆಯೂ ಒಪ್ಪದಿದ್ದ ಪಕ್ಷದಲ್ಲಿ ತಮ್ಮ ತಪ್ಪು ಏನೂ ಇಲ್ಲವೆಂದು ಹತಾಶರಾಗುವುದು. ಮಾರ್ಕ್ಸ್-ಏಂಗೆಲ್ಸ್ರು ಕಲ್ಪನಾಸಮಾಜವಾದದಲ್ಲಿ ಅಡಗಿರುವ ದೋಷಗಳನ್ನು ವಿವರಿಸಿದ್ದಾರೆ. ಸಮಾಜಕಲ್ಯಾಣ ಬುದ್ಧಿಶಕ್ತಿಯಿಂದ ರಚಿತವಾಗುವ ' ಮಾದರಿ ' ಗಳಿಂದ ಆಗುವುದಾದರೆ, ಸಮಾಜ ಕಲ್ಯಾಣದ ಭಾವನೆಯೂ ಮತ್ತು ಮಾದರಿಗಳೂ ಒಬ್ಬ ವ್ಯಕ್ತಿಯನ್ನು ಅನುಸರಿ ಸುತ್ತವೆ. ಒಬ್ಬನು ಇನ್ನೊಬ್ಬನ ಹಾಗೆ ಯೋಚಿಸುವುದಿಲ್ಲ ; ಒಬ್ಬನಿಗೆ ಅಪ್ಯಾಯಮಾನವಾದದ್ದು ಇನ್ನೊಬ್ಬ ನಿಗೆ ಕಹಿಯಾಗಿ ಇರಬಹುದು. ಅವನ ವನ ಮಟ್ಟಕ್ಕೆ ಅನುಗುಣವಾಗಿ ನಿರ್ಮಾಣಹೊಂದುವ ಭಾವನೆಗಳಲ್ಲಿ ಯಾವುದು ಉತ್ತಮವಾದುದೆಂದು ತೀರ್ಮಾನಿಸಲು ಮತ್ತೊಬ್ಬನ ಬಳಿಗೆ ತೀರ್ಪಿಗೆ ಹೋಗಬೇಕಾಗುತ್ತದೆ. ಉತ್ಕೃಷ್ಟವಾದ ಮಾದರಿಯ ಬದಲು ವೈಯಕ್ತಿಕವೈಪರೀತ್ಯಗಳ ಹುಚ್ಚಾಟಗಳ ತಾರುಮನೆಯಾಗುತ್ತದೆ. ಅಷ್ಟೇ ಅಲ್ಲ ; ಇನ್ನೊಂದು ಪ್ರಶ್ನೆಯೂ ಉದ್ಭವಿಸುತ್ತದೆ. ಕಲ್ಯಾಣಸಮಾ ಜದ ನಿರ್ಮಾಣ ಕೆಲವರಿಗೆ ಹೊಳೆದು ಮಾದರಿಗಳ ಮೂಲಕ ವ್ಯಕ್ತವಾಗಿ ದ್ದರೆ ಈ ಪ್ರೇರಣೆ ಇಷ್ಟು ದಿವಸವೂ ಏಕೆ ಆಗಿರಲಿಲ್ಲ ? ಆದಿಯಿಂದ ಇಲ್ಲಿಯವರೆಗೆ ಮಾನವ ಜೀವಿಗಳು ಕಷ್ಟವನ್ನನುಭವಿಸಬೇಕೆಂಬುದು ದೇವರ