ಪುಟ:ಕಮ್ಯೂನಿಸಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ ೩೧ ನಿಯಾಮಕವೇ ? ವಿಧಿ ವಿಲಾಸವೇ ? 3,000 ವರ್ಷಗಳ ಹಿಂದೆಯೇ ಈ ಪ್ರೇರೇಪಣೆ ಹೊಳೆದಿದ್ದರೆ ಮಾನವಕೋಟಿಗೆ ಎಷ್ಟು ಉಪಕಾರವಾಗು ತಿತ್ತು. ಈ ಪ್ರಶ್ನೆಗೆ ಉತ್ತರ ಸಿಗುವುದು ದುರ್ಲಭವಾಗುತ್ತದೆ. 18 ನೇ ಶತಮಾನದನಂತರ ಈ ಪ್ರೇರಣೆ ಹೊಳೆದಿರುವುದರಿಂದ ಅಲ್ಲಿಂದೀಚಿನ ವ್ಯಕ್ತಿಗಳು ಮಹಾಬುದ್ದಿವಂತರೆಂದೂ, ಹಿಂದಿನವರೆಲ್ಲರೂ ದಡ್ಡರೆಂದೂ, ಕಲ್ಯಾಣಸಮಾಜದ ಭಾವನೆಯೂ ಅವರಿಗೆ ದರ್ಶನವಾಗಲಿಲ್ಲವೆಂದೂ ಅಥವಾ ಗ್ರಹಿಸಲು ಅಸಮರ್ಥರಾದರೆಂದೂ ತೀರ್ಮಾನಕ್ಕೆ ಬರಬೇಕಾಗು ತದೆ. ಆದುದರಿಂದ ಕಲ್ಪನೆ, ಊಹೆಗಳ ಮೂಲಕ ಸಮಾಜವಾದದ ನಿರ್ಮಾಣವನ್ನು ಬಿಡಬೇಕು. ಎಲ್ಲ ವಿಷಯಗಳಲ್ಲೂ ಸಮಾನತೆ ಇರುವ ಸಮಾಜವನ್ನು ಆದರ್ಶ ವನ್ನಾಗಿ ಬಯಸಿದ ಸಮಾಜವಾದವೂ (Equilitarian Socialism) ಸಹ ಕಲ್ಪನೆಯಾಗಿದೆ, ಮತ್ತು ಆಭಾಸದ ಪರಮಾವಧಿಯೂ ಆಗಿದೆ. ಎಲ್ಲ ವ್ಯಕ್ತಿಗಳ ಅಭಿರುಚಿ ಮತ್ತು ಆವಶ್ಯಕತೆ ಒಂದೇ ತೆರನಾಗಿ ಇರಲು ಸಾಧ್ಯವಿಲ್ಲ. ಒಂದುವೇಳೆ ಸಮಾನಸಮಾಜದ ಮೂಲಕ ಸುಖ ಲಭಿಸುವುದಾಗಿದ್ದರೆ, ಅಸಮಾನತೆ, ಖಾಸಗೀ ಸ್ವಾಮ್ಯ ಇವುಗಳು ಹೇಗೆ ಜನ್ಮತಾಳಿದವು ? ಹಿಂದಿನವರಿಗೆ ಈ ಭಾವನೆ ಏಕೆ ಉಂಟಾಗಲಿಲ್ಲ ? ಆದುದರಿಂದ ಸಮಾನತೆಯನ್ನೂ ಸುಖೀರಾಜ್ಯವನ್ನೂ ಕಲ್ಪನೆಯ ಮೂಲಕ ಸೃಷ್ಟಿಸುವುದಕ್ಕಾಗುವುದಿಲ್ಲ. ಸಾಧ್ಯವಿದ್ದಿದ್ದರೆ ಸಮಾನಸಮಾಜ ಎಂದೋ ಜನ್ಮ ತಾಳುತ್ತಿತ್ತು. ಇಂತಹ ಭಾವನೆ ಉತ್ಕೃಷ್ಟ ಸಮಾಜದ ಮಾದರಿ ಯಾಗಿ ಉಳಿದು, ಪುನಃ ಸಮಾಜವಾದದ ಪ್ರತಿಪಾದನೆಗೆ ಆವಶ್ಯಕತೆಯೇ ಇರುತ್ತಿರಲಿಲ್ಲ. ಮಿಕ್ಕ ಸಮಾಜವಾದಗಳ ಸ್ವರೂಪವೂ ಸಹ ಹೆಚ್ಚು ಕಡಿಮೆ ಇದೇ ಆಗಿದೆ. ಧರ್ಮಕ್ಕೆ, ನ್ಯಾಯಕ್ಕೆ ಅನುಗುಣವಾಗಿರುವ ಧರ್ಮಸಮಾಜ, ಸುಖೀ ರಾಜ್ಯ, ನ್ಯಾಯಸಮಾಜಗಳ ನಿರ್ಮಾಣದ ಕಾರ್ಯವೆಂದರೆ ಧರ್ಮ, ನ್ಯಾಯ ಎಂದರೆ ಏನು ಮತ್ತು ಯಾವುದು ಎಂಬ ಜಿಜ್ಞಾಸೆ ಬರುತ್ತದೆ. ಧರ್ಮ, ನ್ಯಾಯಗಳ ಬಗ್ಗೆ ಇತಿಹಾಸದ ಉದ್ದಕ್ಕೂ ವಿವಿಧ ಸಮಾಜಗಳಲ್ಲಿ ವಿವಿಧ ಭಾವನೆಗಳಿರುವುದರಿಂದಲೂ ಮತ್ತು ಒಂದೇ ಸಮಾಜದಲ್ಲೇ ಕಾಲ ಕಾಲಕ್ಕೆ ಧರ್ಮ, ನ್ಯಾಯಗಳ ಭಾವನೆಯ ಬಗ್ಗೆ ಬದಲಾವಣೆಗಳಾಗಿರುವುದರಿಂದಲೂ, ಧರ್ಮ ಮತ್ತು ನ್ಯಾಯಗಳಿಗೆ ಎಲ್ಲರೂ