ಪುಟ:ಕಮ್ಯೂನಿಸಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨. ವೈಜ್ಞಾನಿಕ ಸಮಾಜ ವಾದ - ಒಂದೇ ಅರ್ಥವನ್ನು ಕೊಟ್ಟಿಲ್ಲ. ಈ ಕಾರಣದಿಂದ ಸಮಾಜರಚನೆಯ ಬಗ್ಗೆ, ಸಮಾಜಕಲ್ಯಾಣದ ಬಗ್ಗೆ ಏಕಾಭಿಪ್ರಾಯ ಇರುವುದಿಲ್ಲ. ಯಾವುದು ಧರ್ಮಸಮಾಜ, ಸುಖೀರಾಜ್ಯ ಆಗಿದೆ ಅಥವಾ ಆಗಿಲ್ಲ ಎಂಬುದನ್ನು ತೀರ್ಮಾನಿಸುವುದು ಕಷ್ಟವಾಗುತ್ತದೆ; ಅಷ್ಟಲ್ಲದೆ ಅಭಿಪ್ರಾಯ ವೈಯಕ್ತಿಕ ವಾಗುತ್ತದೆ, ಇನ್ನು ಮತೀಯ ಸಮಾಜವಾದಿಗಳ ಬಗ್ಗೆ ಹೆಚ್ಚು ವಿಮರ್ಶೆ ಅನಾ ವಶ್ಯಕವಾಗಿದೆ. ನೀತಿಬೋಧೆಯ ಮನಃಪರಿವರ್ತನೆಯ ಕೆಲಸ ಎಡೆಬಿಡದೆ ಆಗುತ್ತಿದ್ದರೂ ಸಮಾಜ ಕಲ್ಯಾಣ ಮತ್ತು ಸುಖೀರಾಜ್ಯ ಮಾತ್ರ ಇನ್ನೂ ಲಭಿಸಿಲ್ಲ ! ಮತೀಯ ಸಮಾಜವಾದ ತನ್ನ ನಿಷ್ಪ ಯೋಜನೆಯನ್ನು ವ್ಯಕ್ತಪಡಿಸಿದೆ. ಇಷ್ಟಲ್ಲದೆ, ಆಗಾಗ್ಗೆ ಹಣಬೆಯಂತೆ ಹುಟ್ಟಿಸಾಯುವ ಸಮಾಜವಾದಗಳ ಬಗ್ಗೆ ಶೋಷಿತವರ್ಗ ಬಹು ಎಚ್ಚರಿಕೆಯಿಂದ ಇರ ಬೇಕಾದ ಅವಶ್ಯಕತೆ ಇದೆ ಎಂದು ಮಾರ್ಕ್ಸ್-ಏಂಗೆಲ್ಸ್ರು ಎಚ್ಚರಿಕೆ ಇತ್ತರು. ಮೊ ದಲ ನೆ ಯ ದಾ ಗಿ ಊಳಿಗಮಾನ್ಯದ-ಸಮಾಜವಾದ (Feudal Socialism). ಈ ವಾದ ನಾನಾಕಾಲದಲ್ಲಿ ನಾನಾರೂಪವನ್ನು ತಾಳುತ್ತಿರುತ್ತದೆ. ಸ್ಥಾನ ಮಾನಗಳನ್ನು ಕಳೆದುಕೊಂಡಿರುವ ಅಥವಾ ಕಳೆದು ಕೊಳ್ಳುತ್ತಿರುವ ಅಥವಾ ಕಳೆದುಕೊಳ್ಳಬೇಕಾಗಿರುವ ವ್ಯಕ್ತಿಗಳು, ತಮ್ಮೆದುರು ಆಗುತ್ತಿರುವ ಬದಲಾವಣೆಗಳಿಗೆ ಅಂಜುವರು, ಇವರು ಜನರ ಮನಸ್ಸನ್ನು ಆಕರ್ಷಿಸುವರೀತಿಯಲ್ಲಿ ಗತಿಸಿದ ಮತ್ತು ಗತಿಸುತ್ತಿರುವ ಸಮಾಜಗಳು ಸುಖ ಸಮಾಜಗಳೆಂದೂ ಬದಲಾವಣೆ ಕ್ಷೇಮಕರವಲ್ಲವೆಂದೂ ಪ್ರಸಾರಮಾಡು ತ್ತಾರೆ. ಈ ಮೂಲಕ ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸು ತ್ಯಾ ಶೋಷಿತವರ್ಗದ ಹಿತಚಿಂತಕರಾಗಿ ಅವರ ಕ್ಷೇಮವನ್ನು ಬಯಸುವುದು ಅವರ ನಿತ್ಯದ ಮಾತಾಗುತ್ತದೆ. 'ಮಕರ (Crocodile) ಸಮಾಜವಾದಿಗ ಳಾಗುತ್ತಾನೆ. ಅದರಂತೆ ಬದಲಾವಣೆಗಳಿಗೆ ವಿಚ್ಛತರಲು ಕಂಕಣಬದ್ಧರಾಗಿ ನಿಲ್ಲುತ್ತಾರೆ. ಎರಡನೆಯದಾಗಿ, ಇನ್ನು ಕೆಲವುವೇಳೆ ಸಮಾಜದಲ್ಲಿ ಆಗು ತಿರುವ ಬದಲಾವಣೆಗಳನ್ನು ಸುದೀರ್ಘವಾಗಿ ಅರಿಯಲು ಕೆಲವರು ಅಶಕ್ತ ರಾಗಿ ರಸ (ಭಾವ) ಪ್ರಧಾನದ ಸಮಾಜವಾದಿಗಳಾಗುತ್ತಾರೆ (Senti- mental Socialism), ನಿತ್ಯ ಕಾಣುವ ಯಾತನೆ, ಕಷ್ಟ, ದುಃಸ್ಥಿತಿಗಳು ಮನದಟ್ಟಾಗಿ, ದಿಕ್ಕು ತೋಚದೆ, ಗತಿಸಿದ ಸಮಾಜಗಳ ವೈಭವದ ಆರಾ