ಪುಟ:ಕಮ್ಯೂನಿಸಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಪನಾ ಮತ್ತು ವೈಜ್ಞಾನಿಕ ಸಮಾಜವಾದ ೩೭ ಕಾರ್ಮಿಕವರ್ಗ ಕೈಕೊಂಡ ಚಳವಳಿಯ ಫಲವಾಗಿ ಅವಶ್ಯಕವಾಗಿ ಸಮಾಜ ವಾದ ಜನ್ಮತಾಳುತ್ತದೆಂದರು. - ಮಾರ್ಕ್ಸ್-ಏಂಗೆಲ್ಪ ರು ತಾವು ಸಂಶೋಧಿಸಿದ ಮುಖ್ಯ ಎರಡು ಸಮಾಜ ಸೂತ್ರಗಳನ್ನು ( ಐತಿಹಾಸಿಕ ಭೌತವಾದ (Historical Materialism) ಮತ್ತು ಹೆಚ್ಚಿಗೇ ಮೌಲ್ಯ ' (Surplus Value) ಎಂದು ಕರೆದರು. ಮೊದಲನೆಯ ಸೂತ್ರದ ಸಹಾಯದಿಂದ ಸಮಾಜವಿಕಾಸದ ಸ್ವರೂಪವನ್ನು ಚಿತ್ರಿಸಿದರು. ಎರಡನೆಯ ಸೂತ್ರದ ಸಹಾಯದಿಂದ ಶೋಷಣೆಯ ಮರ್ಮವನ್ನು ಬಯಲುಮಾಡಿದರು. ಮಾರ್ಕ್- ಏಂಗೆಲ್ಲ ರಿಂದ ಹೆಚ್ಚಿಗೇಮೌಲ್ಯದ ಸೂತ್ರ ಪ್ರತಿಪಾದನೆಯಾಗುವವರೆಗೂ ಮೇಷ ಣೆಯ ಬಗ್ಗೆ ಖಂಡನೆ ಇತ್ತೆ ವಿನಾ ಯಾರೂ ಶೋಷಣೆ ಯಾವ ರೀತಿಯಲ್ಲಿ ಆಗುತ್ತಿದೆ ಎಂಬುದನ್ನು ತಿಳಿಸಲು ಸಮರ್ಥರಾಗಿರಲಿಲ್ಲ. ಮಾರ್ಕ್ಸ್-ಏಂಗೆಲ್ಪರು ಪ್ರತಿ ಸಮಾಜದ ವ್ಯವಸ್ಥೆಯಲ್ಲಿದ್ದ ಶೋಷಣೆ ಯನ್ನು ವಿವರಿಸಿ, ಬಂಡವಾಳ ವ್ಯವಸ್ಥೆಯಲ್ಲಿ ಸ್ವಾಮ್ಯವರ್ಗ ಕಾರ್ಮಿಕ ವರ್ಗವನ್ನು ಶೋಷಣೆ ಮಾಡುತ್ತಿರುವುದನ್ನು ಹೊರಹಾಕಿದರು, ಶೋಷಣೆ ಇಲ್ಲದೆ ಬಂಡವಾಳವರ್ಗ ಅತ್ಯಲ್ಪ ಕಾಲ ಬದುಕುವುದೂ ದುಸ್ತರವಾಗುವು ದೆಂದು ವಿವರಿಸಿದರು. ಶೋಷಣೆಯು ವರ್ಗದಂತರವನ್ನೂ ದುಸ್ಥಿತಿಯನ್ನೂ ತಂದು ಶೋಷಣೆಯ ವಿನಾಶ ಕಾರ್ಮಿಕವರ್ಗದ ಹೋರಾಟದಿಂದಲೇ ಸಾಧ್ಯವೆಂಬುದನ್ನು ಕಾರ್ಮಿಕವರ್ಗಕ್ಕೆ ಮನದಟ್ಟು ಮಾಡುತ್ತದೆಂದು ತಿಳಿಸಿ ದರು, ಶೋಷಿತವರ್ಗ ಶೋಷಕವರ್ಗವನ್ನು ನಿರ್ಮೂಲಗೊಳಿಸುವು ದೆಂದರು, ಸಮಾಜವಾದದ ಆಗಮನವು ಅನಿವಾರ್ಯವಾಗುತ್ತದೆಂದರು. ಸಂಕ್ಷಿಪ್ತವಾಗಿ ವೈಜ್ಞಾನಿಕ ಸಮಾಜವಾದದ (ಆಧುನಿಕ ಅಥವಾ ಮಾರ್ಕ್ಸ್‌ವಾದ) ಸ್ವರೂಪವನ್ನು ಹೇಳುವುದಾದರೆ ಅದು ಬಂಡವಾಳ ವ್ಯವಸ್ಥೆಯಲ್ಲಿರುವ ವಿರಸಗಳ ಪ್ರತಿಬಿಂಬವಾಗಿದೆ. ಸ್ವಾಮ್ಯವರ್ಗಕ್ಕೂ ಕಾರ್ಮಿಕವರ್ಗ (ಶೋಷಿತವರ್ಗ) ಕ್ಯೂ ನಡೆಯುವ ಬಡಿದಾಟವಾಗಿದೆ. ಬಂಡವಾಳ ಆರ್ಥಿಕ ವ್ಯವಸ್ಥೆ ವಿರಸಪೂರಿತವಾದ ವ್ಯವಸ್ಥೆ. ಅದು ದಾರಿದ್ರ, ನಿರುದ್ಯೋಗ, ಆರ್ಥಿಕ ದುಸ್ಥಿತಿ, ವರ್ಗದ ಆಂತರ, ಶೋಷಣೆ ಇವುಗಳನ್ನು ಉಂಟುಮಾಡುತ್ತದೆ. ಅವುಗಳ ವಿನಾಶಕ್ಕಾಗಿ ಕಾರ್ಮಿಕರು ಹೋರಾಟ