ಪುಟ:ಕಮ್ಯೂನಿಸಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ವೈಜ್ಞಾನಿಕ ಸಮಾಜವಾದ ವನ್ನು ಹೂಡುವಂತೆ ಮಾಡುತ್ತವೆ. ಕಾರ್ಮಿಕವರ್ಗ ತಮ್ಮ ದುಸ್ಥಿತಿಗೆ ಸ್ವಾಮ್ಯವರ್ಗವೇ, ಬಂಡವಾಳ ವ್ಯವಸ್ಥೆಯೇ ಕಾರಣವೆಂದು ತಿಳಿಯುತ್ತದೆ. ಅಲ್ಲದೆ ಆರ್ಥಿಕ ಮುಗ್ಗಟ್ಟು, ವಸಾಹತುಗಳ ದಾಹ, ಆರ್ಥಿಕ ಏರಿಳಿತಗಳು, ವಸಾಹತು ಜನರ ಅತ್ಯಧಿಕ ಶೋಷಣೆ, ಯುದ್ಧ, ಇತ್ಯಾದಿಗಳನ್ನು ಬಂಡ ವಾಳ ಉತ್ಪಾದನಾಕ್ರನು (Capitalist Mode of Production) ಸಾಲುಸಾಲಾಗಿ ತರುತ್ತಲೇ ಇರುತ್ತದೆ. ಆರ್ಥಿಕ ಭದ್ರತೆ, ಉದ್ಯೋಗ, ಶೋಷಣಾರಹಿತ ಕೆಲಸಗಳಿಗಾಗಿ ಕಾರ್ಮಿಕ ವರ್ಗದಿಂದ ಚಳವಳಿ ಆರಂಭ ವಾಗುತ್ತದೆ. ಸ್ವಾಮ್ಯ ವರ್ಗದ ನಾಶ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣ, ಇವುಗಳ ಮೂಲಕವೇ ಅಧೋಗತಿಯಿಂದ ಪಾರಾಗಲು ಸಾಧ್ಯವೆಂಬುದು ಕಾರ್ಮಿಕವರ್ಗಕ್ಕೆ ಅರಿವಾಗುತ್ತದೆ. ಅಂದೇ ಸಮಾಜ ವಾದದ ಉದಯ ನಿಶ್ಚಯವಾಗುತ್ತದೆ. ಸಮಾಜವಾದದ ಅರ್ಥವಿವರಣೆಯಲ್ಲಿ ಮಾರ್ಕ್ಸ್-ಏಂಗೆಲ್ಸ ರು ಅನುಸರಿಸಿರುವ ಕ್ರಮದಲ್ಲಿ ಒಂದು ವಿಶೇಷವಿದೆ, ಮಿಕ್ಕವರ ಹಾಗೆ ಸಮಾಜವಾದೀ ವ್ಯವಸ್ಥೆಯ ಚಿತ್ರವನ್ನು ಮೊದಲು ಬರೆದು ಅದೇ ಗರಿ ಅಥವಾ ಉತ್ಕೃಷ್ಟ ಅಥವಾ ಪರಿಪೂರ್ಣತೆಯ ಸಮಾಜವೆಂದು ಹೇಳಲಿಲ್ಲ; ಅದನ್ನು ಸಾಧಿಸಲು ಕರೆ ಕೊಡಲಿಲ್ಲ. ಹಾಗೆ ಮಾಡಿದ್ದರೆ ಇವರುಗಳೂ ಸಹ ಕಲ್ಪನಾ ಸಮಾಜವಾದಿಗಳಾಗುತ್ತಿದ್ದರು. ಸುಂದರವಾದ ಸಮಾಜ ರಚ ನೆಯ ಗೋಜಿಗೆ ಹೋಗಲಿಲ್ಲ. ಬಂಡವಾಳ ವ್ಯವಸ್ಥೆಯ ಚಲನವಲನೆಯ ವಿನ್ಯಾಸಗಳನ್ನು ಚಿತ್ರಿಸುವುದರಲ್ಲಿ ತೃಪ್ತರಾದರು. ಬ೦ ಡ ವಾಳ ವ್ಯವಸ್ಥೆಯಲ್ಲಿರುವ ವಿರಸಗಳ ಮತ್ತು ವರ್ಗ ಹೋರಾಟದ ನಿರೂಪಣೆ ಮಾತ್ರ ಇದೆ. ಬಂಡವಾಳ ವ್ಯವಸ್ಥೆ ತಾನು ಜನ್ಮಕೊಟ್ಟ ಕಾರ್ಮಿಕವರ್ಗವೇ ಬಂಡವಾಳ ವ್ಯವಸ್ಥೆಯ ನಿರ್ಮೂಲಕ್ಕೆ ಕಾರಣವಾಗುತ್ತದೆಂದರು, ಶೋಷಣೆ ಯಿಂದಲೂ ವಿರಸಗಳಿಂದಲೂ ಪಾರಾಗಲು ಖಾಸಗೀ ಸ್ವಾಮ್ಯವನ್ನೂ, ಬಂಡವಾಳ ಉತ್ಪಾದನಾ ವ್ಯವಸ್ಥೆಯನ್ನೂ ಕಾರ್ಮಿಕವರ್ಗ ನಾಶಗೊಳಿಸು ವುದೆಂದರು ಇವುಗಳ ನಿರ್ಮೂಲವೇ ಸಮಾಜವಾದೀ ವ್ಯವಸ್ಥೆ ಆಗುತ್ತದೆ. ವಿರಸಗಳಿಲ್ಲದ, ವರ್ಗಗಳಿಲ್ಲದ, ಶೋಷಣೆ ಇಲ್ಲದ ಆರ್ಥಿಕ ವ್ಯವಸ್ಥೆ ಬರು ಇದೆ. ವೈಜ್ಞಾನಿಕ ಸಮಾಜವಾದವೆಂದರೆ ಇಂತಹ ವ್ಯವಸ್ಥೆ ಹೇಗೆ ಬರುತ್ತದೆ, ಅದರ ಆವಶ್ಯಕತೆ ಏನು ಮತ್ತು ಅದನ್ನು ತರುವವರು ಯಾರು