ಪುಟ:ಕಮ್ಯೂನಿಸಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದದ ಆಧಾರ ೪೩ ಸಿದ್ಧಾಂತಕ್ಕೆ ಮಾತ್ರ ಸ್ಥಳವಿದೆ. ಶೋಷಿತವರ್ಗದ ಆಶೋತ್ತರಗಳನ್ನು ಪ್ರತಿಬಿಂಬಿಸುವುದು ಪಕ್ಷೀಯವಾದರೆ ಬಾಧಕವಿಲ್ಲ. ಸಮಾಜದ ಸ್ವರೂಪವನ್ನು ಅರಿಯಲು ಮಾರ್ಕ್ಸ್-ಏಂಗೆಲ್ಲರ ಸಿದ್ದಾಂತ ಹೊಸ ಕ್ರಮವನ್ನು ನಿರೂಪಿಸಿದೆ. ಈ ಸಿದ್ಧಾಂತದೃಷ್ಟಿಗೆ ಮಾರ್ಕ್ಸ್-ಏಂಗೆಲ್ಸ ರು ಎಷ್ಟು ಬಾಧ್ಯರೋ ಅಷ್ಟೇ ಅವರು ಈ ಹೊಸ ಸಿದ್ದಾಂತ ಸೃಷ್ಟಿಸುವುದಕ್ಕೆ ಸಹಾಯಕರಾದ ಮಹನೀಯರುಗಳಿಗೂ ಋಣಿ ಗಳಾಗಿರುತ್ತಾರೆ. ಆದುದರಿಂದ ಅವರ ಸಿದ್ಧಾಂತ ಜ್ಞಾನಾದವಲ್ಲ. ಈ ಸಿದ್ಧಾಂತದ ಅನೇಕ ಭಾಗಗಳು ಇತರರು ಪ್ರತಿಪಾದಿಸಲು ಯತ್ನಿಸಿದ, ಅಥವಾ ಸ್ವಲ್ಪ ಮಟ್ಟಿಗೆ ಯತ್ನಿಸಿ ಅಲ್ಲೇ ನಿಂತ್ರ ಅಥವಾ ವಿಷಯಗೋಚರ ವಾಗಿ ಹೇಳುವುದನ್ನು ತಪ್ಪು ರೀತಿಯಲ್ಲಿ ಹೇಳಿರುವ ಅಥವಾ ವಿಷಯ ಗೋಚರವಾಗಿ ಅದಕ್ಕೆ ಕಾರಣಗಳು ಬೇರೆಯಾಗಿವೆಯೆಂದು ಹೇಳಿದ ಗ್ರಂಥ ಗಳಲ್ಲಿ ಕಾಣುತ್ತವೆ. ಈ ಕಾರಣದಿಂದ ಮಾರ್ಕ್ಸ್-ಏಂಗೆಲ್ಪರ ಸಿದ್ದಾಂತ ದೃಷ್ಟಿಗೆ ಯೂರೋಪಿನ 19 ನೇ ಶತಮಾನದ ಆದಿ ಭಾ ಗ ದಲ್ಲಿ ಪ್ರಬುದ್ಧಾವಸ್ಥೆಗೆ ಬಂದ ಮೂರು ತತ್ವಗಳು ಸಹಾಯಕ ಭಾಗವಾಗಿ ಸೇರಿವೆ. ಮೊದಲನೆಯದಾಗಿ, ಜರ್ಮನಿ ದೇಶದ ಅತಿ ವಿಖ್ಯಾತ ತತ ವೇತ ಹೆಗೆಲ್ ಎಂಬಾತನು ಪ್ರತಿಪಾದನೆ ಮಾಡಿದ ಇತಿಹಾಸ ದೃಷಿ ಮತ್ತು ತರ್ಕ ; ಎರಡನೆಯದಾಗಿ, ಫ್ರಾನ್ಸ್ ದೇಶದಲ್ಲಿ ಪ್ರತಿಪಾದಿತವಾದ ಸಮಾಜವಾದ ತತ್ತ್ವ; ಕೊನೆಯದಾಗಿ, ಇಂಗ್ಲೆಂಡ್ ದೇಶದಲ್ಲಿ ಕೈಗಾರಿಕಾ ಕ್ರಾಂತಿಯನಂತರ ವ್ಯವಸ್ಥೆ ಹೊಂದಿದ ಬಂಡವಾಳ ಆರ್ಥಿಕ ವ್ಯವಸ್ಥೆ, ಅದರ ಸ್ವರೂಪವನ್ನು ತಿಳಿಸಲು ಪ್ರತಿಪಾದಿತವಾದ ಆತ್ಯಾಮ ಸ್ಮಿತ್ ಮತ್ತು ರಿಕಾರ್ಡೊಗಳ ಅರ್ಥಶಾಸ್ತ್ರ ಮತ್ತು ಪದಾರ್ಥಗಳ ಮೌಲ್ಯವನ್ನು ನಿರ್ಧರಿ ಸಲು ದುಡಿಮೆಯನ್ನು ಆಧಾರಮಾಡಿದ ತಮ್ಮ ತತ್ವ ಜ್ಞಾನಿ ಹೆಗೆಲ್ಲನು 1 ಮಾನವ ಇತಿಹಾಸವನ್ನು ಈಕ್ಷಿಸಿ ಮಾನವ ಸಮಾಜಗಳಲ್ಲಿ ಚಲನೆ ಮತ್ತು ಬೆಳವಣಿಗೆಯನ್ನು ಕಂಡನು. (1) ಜರ್ಮನಿ: ದೇಶದ ಅತಿ ಪ್ರಖ್ಯಾತ ತತ್ವವೇತ್ತ (1770-1831). ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. ಈತನ ಬರೆಹಗಳಲ್ಲಿ ಬುದ್ದಿ ಮಾಮಾಂಸೆ' (Phenomenology of Mind), ' ತರ್ಕ ವಿಜ್ಞಾನ' (Science of Logic), 1 ಇತಿಹಾಸ ತ ' (Philosophy of History) 'ಧರ್ಮದ ತತ್ರ (Philosophy of Right),ಬಹು ಮುಖ್ಯವಾದವು. - ವ ಬಿ ಎ