ಪುಟ:ಕಮ್ಯೂನಿಸಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ವೈಜ್ಞಾನಿಕ ಸಮಾಜವಾದ ಇತಿಹಾಸದ ಉದ್ದಕ್ಕೂ ಸಮಾಜ ಬೇರೆ ಬೇರೆ ಸ್ವರೂಪದಲ್ಲಿದ್ದು ಒಂದೊಂದು ಕಾಲದಲ್ಲೂ ಅದರ ಸ್ವರೂಪವು ಕ್ರಮೇಣ ಬದಲಾವಣೆಯಾಗಿ ಬೇರೊಂದು ಸ್ವರೂಪ ತಾಳುವುದು ವ್ಯಕ್ತವಾಯಿತು, ಆದಿ ಅಂತ್ಯವಿಲ್ಲದ ಚಲನೆಯೇ ಇತಹಾಸದ ಸ್ವರೂಪವೆಂದು ಹೆಗೆಲ್ಲನು ತನ್ನ ತರ್ಕದ ಆಧಾರದ ಮೇಲೆ ತೀರ್ಮಾನಕ್ಕೆ ಬಂದನು. ಆತನ ತಾರ್ಕಿಕಕ್ರಮ (Dialectics) ವಸ್ತು ಚಲನೆಯನ್ನು ಪ್ರತಿಬಿಂಬಿಸುವುದಕ್ಕೆ ಉತ್ಕೃಷ್ಟವಾದ ಸಾಧನ ದಂತಿತ್ತು, ಆದರೆ ಆತನು ಭಾವಾತ್ಮಕನಾಗಿದ್ದನು (Idealist). (2) Dialectics : ಗ್ರೀಕ್ ಶಬ್ದ. (dia+legein@discourse= ವಾದಸರಣಿ): ಪೂರ್ವದಲ್ಲಿ ಈ ಶಬ್ದದ ಅರ್ಥವನ್ನು ವಾದ ಪ್ರತಿವಾದಗಳ ಮೂಲಕ ಪ್ರತಿಸ್ಪರ್ಧಿಯ ವಾದಸರಣಿಯಲ್ಲಿ ವಿರುದ್ಧವನ್ನು ವ್ಯಕ್ತಪಡಿಸಿ, ವಿರುದ್ಧವನ್ನು ಹೋಗಲಾಡಿಸುವ ಕ್ರಮವೆಂದು ತಿಳಿದಿದ್ದರು. ಕ್ರಮೇಣ ಮಲ ಬದಲಾವಣೆಗಳ, ಒಳ ಸಂಬಂಧಗಳ ಮತ್ತು ವಿಕಾಸದ ಅಧ್ಯಯನವೆಂಬುದಾಗಿ ಶಬ್ದ ಅರ್ಥ ತಾಳಿತು, ಎಲ್ಲ ವಸ್ತು ವಿಶೇಷಗಳು ಚಲನೆಗೂ ಮತ್ತು ಬದಲಾವಣೆಗಳಿಗೂ ಒಳಪಟ್ಟನ ಯೆಂದೂ, ವಸ್ತು ವಿಶೇಷಗಳಲ್ಲೇ ಇರುವ ವಿರೋಧಾಭಾಸದಿಂದ (Confict of opposites taking place in all things)ಪ್ರಕೃತಿಯ ವಿಕಾಸ ಆಗುತ್ತಿರು ವುದಾಗಿಯೂ ಈ ಬಗೆಯ ತರ್ಕ ತಿಳಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿ ಗಳು ಆಜನ್ಮ ತಾರ್ಕಿಕರಾಗಿದ್ದರು. ಆದರೆ ಅವರು ವಸ್ತು ವಿಶೇಷಗಳಿಗಿರುವ ಸಂಬಂಧಗಳನ್ನು ವಿಶದವಾಗಿ ತಿಳಿಸಲು ಅಶಕ್ತರಾದರು. ಮುಂದಿನ ಶತಮಾನಗಳಲ್ಲಿ ವಸ್ತು ವಿಶೇಷಗಳ ಬಗ್ಗೆ ತಾರ್ಕಿಕ ದೃಷ್ಟಿ ನಶಿ ಸಿತು, ಅಚೈತನ್ಯದ ದೃಷ್ಟಿ ಬೆಳೆಯಿತು. ಆದರೆ 18 ನೇ ಶತಮಾನಾನಂತರ ಪುನಃ ತಾರ್ಕಿಕ ದೃಷ್ಟಿ ಪ್ರಾಧಾನ್ಯತೆ ಪಡೆಯಿತು. ಕ್ಯಾಂಟ್ ಎಂಬ ಜರ್ನT ತತ್ವವೇತ್ತನು ಪ್ರತಿಪಾದಿಸಿದ ಸೂರ್ಯಮಂಡಲದ ವಿಕಾಸ ಸಿದ್ದಾಂತ ತಾರ್ಕಿಕ ದೃಷ್ಟಿಗೆ ನಾಂದಿಯಾಯಿತು, ಹೆಗೆಲ್ ತತ್ತ್ವವೇತ್ತನು ತಾರ್ಕಿಕ ದೃಷ್ಟಿಯನ್ನು ತನ್ನ ಸಿದ್ಧಾಂತಕ್ಕೆ ಆಧಾರವನ್ನಾಗಿ ಮಾಡಿದನು.

  • ಈ ತಾರ್ಕಿಕ ಕ್ರಮ ಮರು ನಿಯಮಗಳನ್ನು ಒಳಗೊಂಡಿದ್ದಾಗಿದೆ. ಒಂದ

ನಯದಾಗಿ ಐಕ್ಯತೆ ಮತ್ತು ವಿಧಾಭಾಸ; ಎರಡನೆಯದಾಗಿ, ಗುಣದಿಂದ ಗಾತ್ರಕ್ಕೆ ಬದಲಾವಣೆ ; ಮೂರನೆಯದಾಗಿ ನಕಾರವನ್ನು ನಕಾರಗೊಳಿಸುವುದು, (3) ಭಾವವಾದ : ಭೌತವಾದಕ್ಕೆ ಪ್ರತಿಯಾದದ್ದು, ಬುದ್ಧಿಗೂ ವಸ್ತು ವಿಗೂ ಇರುವ ಸಂಬಂಧವನ್ನು ಹೇಳುವಾಗ ಬುದಿ ಯನ್ನು ಪ್ರಧಾನವೆಂದು ಪರಿ ಗಣಿಸುತ್ತದೆ, ಬುದ್ದಿ ವಸ್ತು ವಿನಿಂದ ಉಂಟಾಯಿತೆಂಬುದನ್ನೂ, ಬುದ್ದಿ ವಸ್ತು ವಿನ ಚಲನಾ ರೂಪವೆಂಬುದನ್ನೂ ನಿರಾಕರಿಸುತ್ತದೆ,