ಪುಟ:ಕಮ್ಯೂನಿಸಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ವೈಜ್ಞಾನಿಕ ಸಮಾಜವಾದ

ದೃಷ್ಟಿಯೇ ಬಂಡವಾಳ ವ್ಯವಸ್ಥೆಯ ಜೀವನಾಡಿ ಎಂದು ತೀರ್ಮಾನಿಸಿದರು. ಲಾಭವೇ ಬಂಡವಾಳದ ಉತ್ಪಾದನಕ್ಕೆ ಅಭಿವೃದ್ಧಿಗೆ ಕಾರಣವೆಂದರು. ಸರಕುಗಳನ್ನು ತಯಾರಿಸಲು ವೇತನ ಕೊಟ್ಟು ದುಡಿಮೆಗಾರರನ್ನು ನೇಮಿಸಿ ಕೊಳ್ಳುವುದು ಸಹಜವಾಗಿ ಕಂಡರೂ, ದುಡಿಮೆಗೆ ಪ್ರತಿಯಾಗಿ ಕೊಡುವ ವೇತನ, ಕೂಲಿ, ದುಡಿವೆ.ಗಾರರು ಮಾಡುವ ಉತ್ಪನ್ನಕ್ಕೆ ಸರಿಸಮನಾಗಿಲ್ಲ ದಿರುವುದನ್ನು ಕಂಡರು. ದುಡಿಮೆಗಾರರಿಗೆ ಸರಿ ಪ್ರಮಾಣದಲ್ಲಿ ಕೂಲಿ ಕೊಡದೆ ದಕ್ಕಿಸಿಕೊಳ್ಳುವುದೇ ಲಾಭ, ಉದ್ಯಮಗಾರನು ಕೂಲಿ ಅಥವಾ ವೇತನವನ್ನು ಎಲ್ಲರೂ ಕಾಣುವಹಾಗೆ ಬಹಿರಂಗವಾಗಿ ನಿಷ್ಕರ್ಷಿಸಿ ಸರಿ ಸಮಾನದ ಪ್ರತಿಫಲವನ್ನು ಕೊಡುವಹಾಗೆ ಕಂಡರೂ ದುಡಿಮೆಯ ಶಕ್ತಿ (Labour Power) ಯಿಂದ ಆಗುವ ಉತ್ಪನ್ನದ ಅತ್ಯಧಿಕ ಭಾಗ ಬಂಡ ವಾಳಗಾರನಿಗೇ ಸಿಕ್ಕುತ್ತದೆ. ಇದೇ ಹೆಚ್ಚಿಗೇ ಮೌಲ್ಯ-ಲಾಭ. ಇದನ್ನು ಉದ್ಯಮಗಾರನು ದಕ್ಕಿಸಿಕೊಳ್ಳುತ್ತಾನೆ. ಒಂದು ದೃ ಷ್ಟಾ ೦ ತ ನ ನ್ನು ನೋಡೋಣ. ಒಬ್ಬ ಉದ್ಯಮಗಾರ ಒಬ್ಬ ಕೂಲಿಯವನನ್ನು ಒಂದು ದಿನದ ಮಟ್ಟಿಗೆ (8 ಘಂಟೆಯ ಕಾಲಕ್ಕೆ ಒಂದು ರೂಪಾಯಿ ಕೂಲಿಯ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುತ್ತಾನೆ. ಆ 'ದುಡಿಮೆಗಾರ 8 ಘಂಟೆಗಳ ಕಾಲ ಕೆಲಸ ಮಾಡುತ್ತಾನೆ. ದುಡಿಮೆಗಾರ ಚ ರ ಕ ದ ಸಹಾಯ ದಿಂದ ದಿನಕ್ಕೆ 3 ಲಡಿ ದಾರವನ್ನು ತೆಗೆಯುತ್ತಾನೆ. ಅದರ ಮಾಲ್ಯವೆಲ್ಲಾ ಉದ್ಯಮಗಾರನಿಗೇ ಸೇರುತ್ತದೆ. ಅದೇ ಮನುಷ್ಯನನ್ನು ಯಂತ್ರದಮೇಲೆ ಕೆಲಸ ಮಾಡಿಸಿದರೆ 30 ಲಡಿ ದಾರ ಬರುತ್ತದೆ. ದುಡಿಮೆಗಾರನ ದುಡಿಮೆ ಶಕ್ತಿ 3 ಲಡಿ ದಾರ ತೆಗೆಯಲಿ, ಅಥವಾ 30 ಲಡಿ ದಾರ ತೆಗೆಯಲಿ ಅದು ಗಣನೆಗೆ ಬರುವುದಿಲ್ಲ. ಕೊಂಡಿರುವುದು 8 ಘಂಟೆಯ ದುಡಿಮೆ, ಆದ್ದ ರಿಂದ ಹೆಚ್ಚಿಗೆ ಉತ್ಪಾದನೆಯೆಲ್ಲ-22 ಲಡಿ ದಾರದ ಮೌಲ್ಯ-ಉದ್ಯಮ ಗಾರನ ಲಾಭ ಇದೇ ಹೆಚ್ಚಿಗೆ ಮೌಲ್ಯ (Surplus value).

  • ಮಾರ್ಕ್-ಏಂಗೆಲ್ಸರು ಹೆಚ್ಚಿಗೇ ಮೌಲ್ಯದ ಗುಟ್ಟನ್ನು ಬಹಿರಂಗ

ಪಡಿಸುವುದರ ಮೂಲಕ ಶೋಷಣೆಯ ಆವಾಸಸ್ಥಾನವನ್ನು ಪತ್ತೆ ಹಚ್ಚಿದರು. ಬಂಡವಾಳಶಾಹಿ-ಆರ್ಥಿಕ ವ್ಯವಸ್ಥೆಗೆ ಊರೆಗೋಲಾಗಿರುವ ಲಾಭ ಮತ್ತು ಲಾಭದಾಹ ಬಂಡವಾಳ ವ್ಯವಸ್ಥೆಯಮೇಲೆ, ಸಮಾಜದಮೇಲೆ ಮತ್ತು ಕಾರ್ಮಿಕವರ್ಗದಮೇಲೆ ಮಾಡುವ ಪರಿಣಾಮಗಳನ್ನು ವಿಶದಪಡಿಸಿದರು.