ಪುಟ:ಕಮ್ಯೂನಿಸಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದದ ಆಧಾರ ಬಂಡವಾಳ ವ್ಯವಸ್ಥೆ ಜನ್ಮವಿತ್ರ ದುಸ್ಥಿತಿಪೀಡಿತ ಕಾರ್ಮಿಕವರ್ಗದಿಂದಲೇ ಬಂಡವಾಳ ವ್ಯವಸ್ಥೆ ಯ ನಾಶ ಆಗುವುದಾಗಿ ಘೋಷಿಸಿದರು. ಬಂಡವಾಳ ಉತ್ಪಾದನ ಕ್ರಮದಲ್ಲಿರುವ ಚೇತನವೆಂದರೆ ಉತ್ಪಾದನಾಶಕ್ತಿ (Produc- tive forces) ಗಳಾದ ಯಂತ್ರಗಳು (Machines) ಮತ್ತು ಉಪಕರಣ (Tools) ಗಳಾಗಿವೆ. ಹೆಚ್ಚು ಉತ್ಪಾದನೆ ಮಾಡಲು, ತನ್ಮೂಲಕ ಹೆಚ್ಚು ಲಾಭಗಳಿಸಲು ಉತ್ಪಾದನಾ ಶಕ್ತಿಗಳನ್ನು ಬೆಳಸಲಾಗಿದೆ. ಈ ಶಕ್ತಿಗಳ ಬೆಳವಣಿಗೆ ಮೊದಮೊದಲು ಹೆಚ್ಚು ಹೆಚ್ಚು ಲಾಭ ತರುವುವು. ಕೊನೆಗೆ ಅವು ತರುವ ಬದಲಾವಣೆಗಳು ಮತ್ತು ಪರಿಣಾಮಗಳು ಖಾಸಗೀ ಸ್ವಾಮ್ಯಕ್ಕೆ ಮೃತ್ಯುವಾಗಿ ಪರಿಣಮಿಸುವುವು. ಬಂಡವಾಳ ವ್ಯವಸ್ಥೆ ವಿರಸ ಪೂರಿತವಾಗುತ್ತವೆ. ಲಾಭದ ಅಂಶ ಕಡಿಮೆಯಾದ ಹಾಗೆ ಬಂಡವಾಳ ಶೇಖರಣೆ ಮತ್ತು ಬಂಡವಾಳ ವ್ಯವಸ್ಥೆ ಕುಗ್ಗುತ್ತದೆ. ನಿರುದ್ಯೋಗ, ದುಸ್ಥಿತಿ ಹೆಚ್ಚುತ್ತದೆ. ಕಾರ್ಮಿಕವರ್ಗ ಕ್ರಾಂತಿಕಾರಿಯಾಗುತ್ತದೆ. ಖಾಸಗೀ ಸ್ವಾಮ್ಯದ ಬಂಧನದಲ್ಲಿ ಸಿಕ್ಕಿರುವ ಈ ಉತ್ಪಾದನಾ ಶಕ್ತಿಗಳ ಬಿಡುಗಡೆ ಅಗತ್ಯವಾಗುತ್ತದೆ. ಉತ್ಪಾದನಾ ಸಾಧನಗಳ ಮೇಲಿರುವ ಖಾಸಗೀ ಸ್ವಾಮ್ಯವನ್ನು ಕಾರ್ಮಿಕವರ್ಗ ನಾಶಪಡಿಸುತ್ತದೆ, 1 ಮೇಲ್ಕಂಡ ತತ್ತ್ರಯಗಳನ್ನು ಸಂಯೋಗಗೊಳಿಸಿ ಮಾರ್ಕ್ಸ್- ಏಂಗೆಲ್ವರು ಸಮಾಜದ ಚಲನವಲನಗಳ ಬಗ್ಗೆ ನಿಯಮಗಳನ್ನು ರಚಿಸಿ ದರು, ಅವುಗಳಲ್ಲಿ ಸೂತ್ರದಂತಿರುವ ನಿಯಮ ಸಂಕ್ಷಿಪ್ತವಾಗಿ ಈ ರೀತಿ ಇದೆ (1) ಮಾನವನು ಸಮಾಜಜೀವಿ, ಆತನು ಬದುಕಬೇಕು. ಬದುಕಲು ಅನ್ನ ಆಹಾರಾದಿಗಳನ್ನು ಸಂಪಾದಿಸಬೇಕು. ಹಾಗೆ ಮಾಡು ವುದರಲ್ಲಿ ನಿರತನಾಗಿ ಒಂಟಿಯಾಗಿಯೋ ಇತರರೊಡಗೂಡಿಯೋ ಜೀವನ ಸಾಮಗ್ರಿಗಳನ್ನು ಉತ್ಪಾದನೆ ಮಾಡಬೇಕು. ಇದರಿಂದ ಪಾರಾಗಲು ಸಾಧ್ಯವೇ ಇಲ್ಲ. ಒಂಟಿಯಾಗಿ ಮಾಡಿ, ಇತರರೊಡಗೂಡಿ ಮಾಡಲಿ, ಇಷ್ಟವಿರಲಿ ಇಲ್ಲದಿರಲಿ, ಉತ್ಪಾದನಾಕಾರ್ಯ ಒಬ್ಬರೊಬ್ಬರೊಡನೆ ಸಂಬಂಧ ವನ್ನು ಕಲ್ಪಿಸುತ್ತದೆ. ಈ ಉತ್ಪಾದನಾ ಸಂಬಂಧಗಳು ಎಲ್ಲ ಕಾಲದಲ್ಲೂ () ನಾಲ್ಕ ನೇ ಅಧ್ಯಾಯದಲ್ಲಿ ಬಂಡವಾಳ ವ್ಯವಸ್ಥೆ ಎಡೆಕೊಡುವ ವಿರಸ ಗಳನ್ನು ವಿವರಿಸಲಾಗಿದೆ.