ಪುಟ:ಕಮ್ಯೂನಿಸಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ವೈಜ್ಞಾನಿಕ ಸಮಾಜವಾದ ವುದರ ಮೂಲಕ ವಿರಸಗಳನ್ನು ತೊಡೆಯಲು ಸಾಧ್ಯ ಮಾಡಿಕೊಡುತ್ತಲಿವೆ. ಬಂಡವಾಳ ವ್ಯವಸ್ಥೆಯ ಅಂತ್ಯದೊಡನೆ, ಹೊಸ ವ್ಯವಸ್ಥೆಯ ಉದಯ ದೊಡನೆ, ಮಾನವನ ಪೂರ್ವ ಇತಿಹಾಸದ ಅಂಕ ಪರಿಸಮಾಪ್ತಿಯಾಗು ತದೆ. 1

  • ಮಾರ್ಕ್-ಏಂಗೆಲ್ಪರು ಆರ್ಥಿಕ ಅಂಶಗಳಿಗೆ ಹೆಚ್ಚು ಗಮನವನ್ನು

ಕೊಡಲಿಕ್ಕೂ ಮತ್ತು ಸಮಾಜ ಸ್ವರೂಪದ ಬಗ್ಗೆ ಭೌತಾತ್ಮಕ ವಿವರಣೆ ಕೊಡಲಿಕ್ಕೂ ಕಾರಣವೇನು ? ಮಾರ್ಕ್-ಏಂಗೆಲ್ಪರ ಪ್ರಕಾರ ಸಮಾಜ ಜೀವನದಲ್ಲಿ ಮೂಲಭೂತವಾಗಿ ಕಾಣುವ ಮುಖ್ಯ ಅಂಶವೆಂದರೆ ಮಾನವ ಜೀವಿಗಳು ಪ್ರಾಣ ಸಂರಕ್ಷಿಸಿಕೊಳ್ಳುವ ಪ್ರಯತ್ನ. ಇದು ಎಷ್ಟು ಅಗತ್ಯ ವೆಂದರೆ, ಜೀವಸಂರಕ್ಷಣೆ ಆದ ಹೊರತು ಮಾನವ ಜೀವಿಗಳು ಇನ್ನಾವ ಕೆಲಸಕ್ಕೂ ಗಮನ ಕೊಡಲು ಸಿದ್ಧರಿಲ್ಲ. ಜೀವನದ ಮಿಕ್ಕ ಸೊಗಸುಗಳು ಎಷ್ಟೇ ಆಪ್ಯಾಯಮಾನವಾಗಿರಲಿ, ಅವನ್ನು ಹೊಂದುವುದು ಎಷ್ಟೇ ಪ್ರಾಮುಖ್ಯ ವಾಗಿರಲಿ, ಮೊದಲು ಜೀವಸಂರಕ್ಷಣೆಗಾಗಿ ದುಡಿಯಬೇಕು, ಪ್ರಕೃತಿಯನ್ನು ಭೇದಿಸಬೇಕು, ಉತ್ಪಾದನೆ ಮಾಡಬೇಕು ಮತ್ತು ಜೀವಿಸಬೇಕು. ಇದಕ್ಕಾಗಿ ಮಾನವರು ತಾಂತ್ರಿಕ ಸಲಕರಣೆಗಳನ್ನು (Implements) ಬಹು ಆದಿಕಾಲದಲ್ಲಿ ನಿರ್ಮಿಸಿದರು. ಕೆಲವರು ಕೆಲವು ಕೆಲಸಗಳಲ್ಲಿ ನಿರತ ರಾಗುವುದರಲ್ಲಿ ಸೌಲಭ್ಯಗಳನ್ನು ಕಂಡರು, ದುಡಿಮೆಯ ವಿಭಜನೆಯು ' (Division of labour) ಬಂದಿತು. ಮಾನವ ವ್ಯಕ್ತಿಗಳ ದುಡಿಮೆಯಲ್ಲಿ ಸಂಭವಿಸುವ ಪರಸ್ಪರ ಸಂಬಂಧ-ಉಳುವವನು ಯಾರು, ನೀರು ಹಾಯಿ ಸುವವನು ಯಾರು, ದನ ಕಾಯುವವನು ಯಾರು ಉತ್ಪಾದನೆಗೆ ಸಾಧನ ವಾದ ಪ್ರಕೃತಿಸಂಪತ್ತು ಯಾರ ಸ್ವಾಮ್ಯಕ್ಕೆ ಒಳಪಟ್ಟಿರಬೇಕು, ಉತ್ಪಾದನೆ ಆದದ್ದು ಹೇಗೆ ವಿಭಜನೆಯಾಗಬೇಕು, ಇತ್ಯಾದಿಗಳನ್ನು ಪ್ರತಿಬಿಂಬಿಸುವ ಸಂಬಂಧ-ಆರ್ಥಿಕ ಸಂಬಂಧಗಳಾಗಿವೆ. ಸಮಾಜದ ಕಟ್ಟಳೆ, ಕಾನೂನು, ನ್ಯಾಯ ಮತ್ತು ಧರ್ಮ-ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆ-ಇವು ಗಳನ್ನು ಸಂರಕ್ಷಿಸುತ್ತವೆ. ಹೀಗೆ ಮಾನವರು ಒಡಗೂಡಿ, ಸಮಾಜ ಜೀವಿ ಗಳಾಗಿ, ಜೀವನ ಸಾಗಿಸಲು ನಿರ್ಮಿಸಿಕೊಂಡ ಆರ್ಥಿಕ ಜೀವನ ಅವರು (1) Preface to a contribution to the critique of politi- cal economy : Marx, (M.&.E.S.W, Pages 327-339.)