ಪುಟ:ಕಮ್ಯೂನಿಸಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದದ ಆಧಾರ ಸಮಾಜ ಪರಿವರ್ತನೆಗೆ ಊಹೆ, ದೈವ ಪ್ರೇರಣೆ ಕಾರಣವಾಗಿಲ್ಲ ಪರಿವರ್ತನೆಗೆ ಕಾರಣವು ಆರ್ಥಿಕ ಬದಲಾವಣೆಗಳಲ್ಲಿ ಹುದುಗಿದೆ, ಮೂಲ ಕರ್ತೃಗಳು ಮಾನವರು, ಮಾನವರೇ ಇತಿಹಾಸವನ್ನು ಬೆಳಸುವವರು. ಮಾನವ ಜೀವಿಗಳ ಬಾಳಿಗೆ ಆಧಾರವಾಗಿ ಆರ್ಥಿಕ ವ್ಯವಸ್ಥೆ ಜನಿಸಿದೆ. ಪ್ರತಿಯೊಂದು ಆರ್ಥಿಕ ವ್ಯವಸ್ಥೆಯಲ್ಲಿಯೂ ಉತ್ಪಾದನಾ ಶಕ್ತಿಗಳಿಂದ ಸಹಾಯಪಡೆದು ಉತ್ಪಾದನಾಕ್ರಮ ಸಾಗುತ್ತಿರುತ್ತದೆ. ಉತ್ಪಾದನಾ ಕ್ರಮದ ಶಕ್ತಿ ಸಾಮರ್ಥ್ಯಗಳು ಮಾನವ ವ್ಯಕ್ತಿಗಳು ಅಭಿವೃದ್ಧಿ ಮಾಡಿರುವ ಉತ್ಪಾದನಾ ಶಕ್ತಿಗಳನ್ನು ಹೊಂದಿಕೊಂಡಿರುತ್ತವೆ. ಹೀಗಿರುವಾಗ ಅಭಿ ವೃದ್ಧಿ ಹೊಂದುತ್ತಿರುವ ಉತ್ಪಾದನಾ ಶಕ್ತಿಗಳು ಉತ್ಪಾದನಾಕ್ರಮ ಬದಲಾ ವಣೆ ಹೊಂದುವಂತೆ ಮಾಡುತ್ತವೆ. ವ್ಯವಸ್ಥೆ ಹೊಂದಿರುವ ಹಿತಗಳಿಗೆ ಬದಲಾವಣೆ ಧಕ್ಕೆ ತರುತ್ತದೆ. ಹಿತಸಂರಕ್ಷಿಸಿಕೊಳ್ಳಲು ಹಳೆಯ ಆರ್ಥಿಕ ವ್ಯವಸ್ಥೆಲ್ಲಿರುವ ಹಕ್ಕು ದಾರವರ್ಗ (ಸ್ವಾಮ್ಯವರ್ಗ ಬದಲಾವಣೆಯನ್ನು ತಡೆಯಲು ಯತ್ನಿಸುತ್ತದೆ. ಸಂದಿಗ್ಧ ಸಮಯ ಬರುತ್ತದೆ. ಹಳೆಯ ವ್ಯವಸ್ಥೆ ಇರಬೇಕು, ಇಲ್ಲವೆ ಹೊಸ ವ್ಯವಸ್ಥೆ, ಹೊಸ ಉತ್ಪಾದನಾ ಶಕ್ತಿ ಗಳಿಂದ ಉಪಯೋಗಪಡೆಯಬೇಕು. ಇದೇ ಉಂಟಾಗುವ ವಿರಸ. ಈ ವಿರಸ ಸಮಾಜದಲ್ಲಿ ಆಂದೋಳನ ತರುತ್ತದೆ. ಹಳೆಯ ಆರ್ಥಿಕ ವ್ಯವಸ್ಥೆ ಕ್ರಮೇಣ ಬದಲಾವಣೆ ಹೊಂದುತ್ತದೆ. ಆರ್ಥಿಕ ವ್ಯವಸ್ಥೆಯ ಪರಿವರ್ತ ನೆಯೇ ಸಮಾಜ ಪರಿವರ್ತನೆಯಾಗಿದೆ. ಈಗಿರುವ ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆ ಕ್ರಮೇಣ ಗತಿಸಿದ ಆರ್ಥಿಕ ವ್ಯವಸ್ಥೆಗಳಿಂದ ಮೂಡಿದ್ದಾಗಿದೆ. ಇದಕ್ಕೆ ಹಿಂದೆ ಊಳಿಗ ಮಾನ್ಯ ವ್ಯವಸ್ಥೆ ಇತ್ತು. ಅದಕ್ಕೆ ಹಿಂದೆ ಪ್ರಾಚೀನ ಆರ್ಥಿಕ ವ್ಯವಸ್ಥೆ ಇತ್ತು. ಈ ಪ್ರತಿಯೊಂದು ವ್ಯವಸ್ಥೆಯನ್ನೂ ಉತ್ಪಾದನಾ ಕ್ರಮದಲ್ಲಿರುವ ವ್ಯತ್ಯಾಸ ವಿಂಗಡಿಸುತ್ತದೆ. ಅತ್ಯಂತ ಪ್ರಾಚೀನಕಾಲದ ಆರ್ಥಿಕ ವ್ಯವಸ್ಥೆ ಎಂದರೆ ಖಾಸಗೀ ಸ್ವಾಮ್ಯ, ದಾಸ್ಯ ಪದ್ಧತಿ, ಕನಿಷ್ಠ ದರ್ಜೆಯ ಉಪಕರಣಗಳು ಹೆಚ್ಚಿಗೇ ಪದಾರ್ಥಗಳ ಅದಲುಬದಲು, ಉತ್ಪಾದನಾ ಶಕ್ತಿಗಳು ಬೆಳೆದು ಉತ್ಪಾದನೆ ಹೆಚ್ಚು ವವರೆಗೂ ದಾಸ್ಯಪದ್ದತಿ ಮುಂದುವರಿಯಿತು. ಕ್ರಮೇಣ ಉತ್ಪಾದನಾ ಶಕ್ತಿಗಳ ಬೆಳವಣಿಗೆ ಊಳಿಗಮಾನ್ಯ ಪದ್ಧತಿಯನ್ನು