ಪುಟ:ಕಮ್ಯೂನಿಸಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ ೭೭ ನುಡಿದಂತ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಗಮವೂ ಮತ್ತು ಸ್ವಯಂ ಹೊಂದಾಣಿಕೆಯೂ ಅಸಾಧ್ಯವೆಂದರು ; ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ರುವ ವಿರಸಗಳು ಅದರ ಉಳವನ್ನು ದುಸ್ಸಾಧ್ಯಗೊಳಿಸಿವೆ ಎಂದರು. ಬಂಡ ವಾಳಶಾಹಿ ವ್ಯವಸ್ಥೆ ಜನ್ಮಕೊಟ್ಟಿರುವ ಕಾರ್ಮಿಕವರ್ಗ ಬಂಡವಾಳಶಾಹಿ ವ್ಯವಸ್ಥೆಯನ್ನು ನಾಶಪಡಿಸಿ ಹೊಸ ವ್ಯವಸ್ಥೆಯನ್ನು ತರುವುವು ಎಂದು ಹೇಳಿದರು. ಹಾಗೆ ಹೊಸ ವ್ಯವಸ್ತೆ ಮೂಡಲು ಬಂಡವಾಳಶಾಹಿ ವ್ಯವಸ್ಥೆ ಯಲ್ಲಿಯೇ ಅವಕಾಶಗಳು ಸಾಮೂಹಿಕಉತ್ಪಾದನೆ, ತಾಂತ್ರಿಕ ಆಂಧೋ ಳನ, ಸ್ವಾಮ್ಯ ರಹಿತವಾದ ಕಾರ್ಮಿಕವರ್ಗ-ಪರಿಪಕ್ವವಾಗುತ್ತಿರುವುದಾಗಿ ತಿಳಿಸಿದರು, ಆರಂಭದಲ್ಲಿ ಬಂಡವಾಳಶಾಹಿ ವ್ಯವಸ್ತೆ ಪುರೋಗಾಮಿಯಾಗಿ ಪ್ರಪಂಚ ವನ್ನು ಆಕ್ರಮಿಸಿತು, ಸಂಪತ್ತನ್ನು ವೃದ್ಧಿ ಮಾಡಿತು. ಆದರೆ ಅದರ ಬೆಳವ ಣಿಗೆಯಲ್ಲಿ ಹೊಸ ಉತ್ಪಾದನಾ ಶಕ್ತಿಗಳು, ತಾಂತ್ರಿಕ ಆಂದೋಳನ, ಮತ್ತು ಸಾಮೂಹಿಕ ಉತ್ಪಾದನೆಯನ್ನು ತಂದಿತ್ತು ಕಾರ್ಮಿಕವರ್ಗಕ್ಕೆ ಜನ್ಮ ಕೊಟ್ಟಿತು. ಈಗ ಎರಡು ಮಾರ್ಗಗಳು ಉಳಿದಿವೆ: ಬಂಡವಾಳಶಾಹಿ ಉತ್ಪಾ ದನಾ ಕ್ರಮವಿರಬೇಕು. ಖಾಸಗೀ ಸ್ವಾಮ್ಯ ಲಾಭಕ್ಕಾಗಿ ಉತ್ಪಾದನೆ, ಲಾಭದ ವೈಯಕ್ತಿಕ ಅಪಹರಣ ಶೋಷಣೆ ಮತ್ತು ಕಾರ್ಮಿಕವರ್ಗದ ದಾಸ್ಯ, - ಇಲ್ಲವೇ ಬಂಡವಾಳಶಾಹಿ ಉತ್ಪಾದನಾಕ್ಷಮ ನಾಶಹೊಂದಬೇಕು, ಬಂಡ ವಾಳಶಾಹಿ ಉತ್ಪಾದನಾ ಕ್ರಮವನ್ನು ಉಳಿಸಿಕೊಳ್ಳಲು ಸ್ವಾಮ್ಯ ವರ್ಗ ದೃಡ ನಿಶ್ಚಯಮಾಡಿದೆ, ಆದರೆ ಎಚ್ಚೆತ್ತ ಕಾರ್ಮಿಕವರ್ಗ ಬಂಡವಾಳಶಾಹಿ ಉತ್ಪಾ ದನಾ ಕ್ರಮದ ನಾಶಕ್ಕಾಗಿ ಪಣತೊಟ್ಟಿದೆ. ಸ್ವಾಮ್ಯ ವರ್ಗಕ್ಕೂ ಕಾರ್ಮಿಕ ವರ್ಗಕ್ಕೂ ಹೋರಾಟ ಹತ್ತಿದೆ. ಈ ಹೋರಾಟದಿಂದ ಇತಿಹಾಸವೇ ಬದಲಾ ವಣೆಯಾಗುತ್ತಿದೆ. ಕಾರ್ಮಿಕರು ಸುಮ್ಮನಾಗಬೇಕಾದರೆ ಶೋಷಣೆ ನಾಶ ಹೊಂದಬೇಕು ; ಅದಕ್ಕೆ ಆಸ್ಪದಕೊಟ್ಟಿರುವ ಖಾಸಗೀ ಸ್ವಾಮ್ಯ ಹೋಗ ಬೇಕು, ದಂಗೆ ಎದ್ದಿರುವ ಕಾರ್ಮಿಕರ ಗುರಿ ಶೋಷಣೆಯನ್ನೂ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ನಾಶಪಡಿಸುವುದೇ ಆಗಿದೆ. ಉತ್ಪಾ ದನಾ ಸಾಧನಗಳ ಮೇಲೆ ಖಾಸಗೀ ಸ್ವಾಮ್ಯವಿಲ್ಲದ, ಶೋಷಣೆಗೆ ಅವಕಾಶ ವಿಲ್ಲದ, ಆರ್ಥಿಕ ವ್ಯವಸ್ಥೆ ಬೇಕಾಗಿದೆ. ಇದೇ ಸಮಾಜವಾದೀ ಆರ್ಥಿಕವ್ಯವಸ್ಥೆ ಯಾಗಿದೆ. ಸಮಾಜದ ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಕೆಲವರು