ಪುಟ:ಕಮ್ಯೂನಿಸಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ ೮೭ ನಾಲ್ಕನೆಯದಾಗಿ, ವರ್ಗಗಳ ಇರುವಿಕೆಗೆ ಮತ್ತು ವರ್ಗಹೋರಾಟಕ್ಕೆ ಕಾರಣವಾದ ಉತ್ಪಾದನಸಾಧನಗಳಲ್ಲಿ ಖಾಸಗೀ ಸ್ವಾಮ್ಯ ಮತ್ತು ಬಂಡ ವಾಳಶಾಹಿ ವ್ಯವಸ್ಥೆ ಇವುಗಳನ್ನು ನಾಶಗೊಳಿಸುವುದು ಮತ್ತು ಉತ್ಪಾದನಾ ಸಾಧನಗಳನ್ನು ಸಮಾಜೀಕರಣಮಾಡುವುದು ಸಮಾಜವಾದೀ ವ್ಯವಸ್ಥೆಯ ತಳಹದಿ. ಇದು ಮೊದಲನೆಯ ಹೆಜ್ಜೆ. ಆದರೆ ಇನ್ನೂ ಬಂಡವಾಳಶಾಹಿ ವ್ಯವಸ್ಥೆ ಯ ಶೇಷಗಳು, ಬಂಡವಾಳ ವರ್ಗದಿಂದ ನಡೆಯುವ ಸಮಾಜ ವಿನಾಶಕಾರೀ ಪಿತೂರಿಗಳು, ವರ್ಗವೈಷಮ್ಯ, ಮತ್ತು ವರ್ಗಹೋರಾಟ ಇದ್ದೇ ಇರುತ್ತವೆ. ಕ್ರಾಂತಿಯು ನಡೆದ ಮರುಗಳಿಗೆಯಲ್ಲೇ ವರ್ಗರಹಿತ ಸುಖಮಯೇ ಸಮಾಜ ಬರುವುದಿಲ್ಲ. ಆದುದರಿಂದ ಕಾರ್ಮಿಕವರ್ಗ ರಾಜ್ಯ ಶಕ್ತಿಯನ್ನು (ಬಲಪ್ರಯೋಗ) ಬಂಡವಾಳವರ್ಗದಿಂದ ಬರುವ ಪ್ರತಿಭಟನೆ ಯನ್ನು ಧ್ವಂಸಮಾಡಲು ಉಪಯೋಗಿಸಬೇಕು. ಇದಕ್ಕಾಗಿ ರಾಜ್ಯ ಶಕ್ತಿಯ ಆವಶ್ಯಕತೆ ಇದೆ, ಕ್ರಾಂತಿಯನಂತರ ಸಮಾಜವಾದೀ ಸಮಾಜ ವ್ಯವಸ್ಥಿತ ವಾಗುತ್ತದೆ (Socialist Society). ಆದರೆ ಸಮಾಜವಾದೀ ವ್ಯವ ಸ್ಥೆಯೇ ಕೊನೆಯಲ್ಲ. ಈ ವ್ಯವಸ್ಥೆ ಸಮವಾದೀ (ಕಮ್ಯೂನಿಸ್ಟ್) ಸಮಾಜಕ್ಕೆ ಪೀಠಿಕೆ. ಐದನೆಯದಾಗಿ, ಸಮಾಜವಾದೀ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಶಕ್ತಾನುಸಾರ ಕೆಲಸಮಾಡುವ ಸಮಾನ ಕರ್ತವ್ಯ ಮತ್ತು ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವ ಹಕ್ಕು ಇರುತ್ತವೆ. ಜನರಿಗೆ ಸೂಕ್ತ ವಿದ್ಯಾಭ್ಯಾಸ, ಉತ್ತಮ ಆವರಣ ಮತ್ತು ಅವಕಾಶಗಳ ನಿರ್ಮಾಣ, ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ, ಅಳಿದುಳಿದ ಬಂಡವಾಳಶಾಹಿ ವ್ಯವಸ್ಥೆಯ ಅವಶೇಷಗಳ ನಾಶ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದರ ಮೂಲಕ ಸಂಪತ್ತಿನ ಅಭಿವೃದ್ಧಿ ಇವೆಲ್ಲವೂ ಸಮಾಜವಾದೀ ವ್ಯವಸ್ಥೆ ಬಲಗೊಳ್ಳುವ ಹಾಗೆ ಮಾಡುತ್ತವೆ ; ವರ್ಗರಹಿತ ಸಮವಾದೀ (ಕನ ನಿಸ್ಟ್) ಸಮಾಜವನ್ನು ಸಾಧಿಸಲು ಸಾಧ್ಯ ಮಾಡಿಕೊಡುತ್ತವೆ. ಆರನೆಯದಾಗಿ, ಕಮ್ಯೂನಿಸ್ಟ್ ಸಮಾಜದ ಆಗಮನ ಹೊಸಯುಗದ ಆರಂಭ. ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಶಕ್ತಾನುಸಾರ ದುಡಿಯುವುದು ಮತ್ತು ಅವರವರ ಆವಶ್ಯಕತೆಗಳಿಗನುಸಾರವಾಗಿ ಅನು ಕೂಲಗಳನ್ನು ಅನುಭವಿಸುವುದು ಸಹಜವಾಗುತ್ತದೆ. ಈ ವರ್ಗರಹಿತ ವ್ಯವಸ್ಥೆ CHe a 29