ಪುಟ:ಕರ್ಣವೃತ್ತಾಂತ ಕಥೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ ಈ ಗ್ರಂಥವನ್ನು ನಮಗೆ ದೊರೆತ ಅಸಮಗ್ರವಾದ ಒಂದೇ ಮಾತೃಕೆಯ ಆಧಾರದಿಂದ ಮುದ್ರಿಸಿದ್ದೇವೆ, ಕಥೆಯು ನಿಂತಿರುವ ಕಡೆಯನ್ನು ನೋಡಿದರೆ ಕವಿಯು ಇನ್ನು ನಾಲ್ಕು ಸಂಧಿಗಳಲ್ಲಿ ಗ್ರಂಥವನ್ನು ಮುಗಿಸಿರಬಹುದೆಂದು ತೋರುತ್ತದೆ. ಕವಿ ಚರಿತ್ರೆ : ಈ 11 ಕರ್ಣ ವೃತ್ತಾಂತಕಥೆ ” ಎಂಬ ಸಾಂಗತ್ಯ ಗ್ರಂಥವನ್ನು ರಚಿಸಿದವನು ಮೈಸೂರು ಸಂಸ್ಥಾನದ ಪ್ರಧಾನಿ ತಿರುಮಲಾರ್ಯನು. - ಮೈಸೂರು ಸಂಸ್ಥಾನದ ಪ್ರಾಚೀನಚರಿತ್ರೆಯಲ್ಲಿ ತಿರುಮಲಾರ್ಯನೆಂಬ ಹೆಸ ರಿನಿಂದ ಮರುಜನ ಪ್ರಸಿದ್ಧರಾಗಿದ್ದರು. ಅವರಲ್ಲಿ ರಾಜಒಡೆಯರವರಿಗೆ ಗುರುವಾ ಗಿದ್ದವರು ಒಬ್ಬರು, ಚಿಕದೇವಮಹಾರಾಜರಿಗೆ ಮಂತ್ರಿಯಾಗಿದ್ದವರೊಬ್ಬರು, ಶ್ರೀರಂಗಪಟ್ಟಣದ ಯುದ್ಧಗಳಲ್ಲಿ ಮೈಸೂರು ರಾಜರ ಪರವಾಗಿ ಇಂಗ್ಲೀಷರವರ ಕಡೆ ರಾಯಭಾರಿಯಾಗಿದ್ದವರೊಬ್ಬರು, ಈ ಮೂವರಲ್ಲಿ ಈ ಗ್ರ೦ಧಕರ್ತರು ಯಾರಾಗಿರಬಹುದೆಂಬುದನ್ನು ವಿಚಾರಿಸೋಣ : ಚಿಕದೇವಮಹಾರಾಜರಿಗೆ ಮಂತ್ರಿಯಾಗಿದ್ದ ತಿರುಮಲಾರರಿಗೆ ಐಯa ಗಾರ್ ಅಥವಾ ತಿರುಮಲೈಯಂಗಾರ' ಎಂಬ ಹೆಸರೇ ಪ್ರಸಿದ್ಧವಾಗಿದ್ದಿತು. ಇವ ರಿಗೆ ಪ್ರಧಾನಿ ತಿರುಮಲೈಯಂಗಾರ್ ಎಂಬ ಹೆಸರಿದ್ದಂತಯ ಇವರು ಪ್ರಧಾನಿ ಯ ಕೆಲಸಗಳನ್ನು ಮಾಡುತ್ತಿದ್ದಂತೆಯ ಎಲ್ಲಿಯೂ ಹೇಳಿಲ್ಲ. ತಾನ್ನ ತಮ್ಮ ಗ್ರಂಥಗಳಲ್ಲಿ ಹೇಳಿಕೊಂಡಿಲ್ಲ. ಆದ್ದರಿಂದ ಇವರು ಈಗ್ರಂಥಕ್ಕೆ ಕರ್ತೃವಲ್ಲ. ರಾಯಭಾರಿ ತಿರುಮಲಾರ್ಯರು ಈ ಗ್ರಂಥವನ್ನು ರಚಿಸಿದವರಲ್ಲವೆಂದು ಖಂಡಿತವಾಗಿ ಹೇಳಬಹುದು. ಇವರಿಗೆ ತಿರುಮಲರಾವ್ ಎಂಬ ಹೆಸರೇ ಪ್ರಸಿದ್ಧ ವಾಗಿದ್ದಿತು. ಇವರು ತಮ್ಮ ಕಾಲವನ್ನೆಲ್ಲಾ ರಾಜಕೀಯ ಕಾರ್ಯದಲ್ಲಿಯೇ ಕಳೆ ದರು. ಇವರಿಗೆ ಗ್ರಂಥಗಳನ್ನು ರಚಿಸುವಷ್ಟು ವಿದ್ವತ್ತಿರಲಿಲ್ಲ ವೆಂದು ತಿಳಿಯಬರು ಇದೆ. ಇವರ ಚರಿತ್ರೆಯ ವಿಷಯವಾಗಿ ಹುಟ್ಟಿದ : ತಿರುಮಕಾರ್ಯವಿಜಯ ' . ವೆಂಬ ಚಂಪೂಗ್ರಂಥದಲ್ಲಿ ಇವರಿಗೆ ಸಂಸ್ಕೃತದಲ್ಲಾಗಲಿ, ಕನ್ನಡದಲ್ಲಾಗಲಿ ಗ್ರಂಥ ರಚನೆ ಮಾಡುವಷ್ಟು ಪಾಂಡಿತ್ಯವಿದ್ದಿತೆಂದು ಸೂಚಿಸಿಯ ಇಲ್ಲ.