ಪುಟ:ಕರ್ಣವೃತ್ತಾಂತ ಕಥೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆದ್ದರಿಂದ ರಾಜಒಡೆಯರವರಿಗೆ ಗುರುಗಳಾಗಿದ್ದ ತಿರುಮಲಾರ್ಯರೇ ಈ ಗ್ರಂಥವನ್ನು ರಚಿಸಿರಬೇಕು. ಮತ್ತು ಈ ಕರ್ಣನಾಂಗತ್ಯದ ಶೈಲಿಗೂ ಮಂತ್ರಿ ತಿರುಮಲೈಯಂಗಾರರ 11 ಚಿಕದೇವರಾಜವಿಜಯ * 6 ಚಿಕದೇವರಾಯವಂಶಾ ವಳಿ ಮುಂತಾದ ಗ್ರಂಥಗಳ ಶೈಲಿಗೂ ಅನೇಕವಾಗಿ ವ್ಯತ್ಯಾಸಗಳು ಕಂಡು ಬರುತ್ತವೆ. ಮಂತ್ರಿ ತಿಮಿಯಂಗಾರರು ತಮ್ಮ ಗ್ರಂಥಗಳಲ್ಲಿ ಚಿಕದೇವರಾಯನ ಹೆಸರನ್ನು ಎಲ್ಲಿಯಾದರೂ ಎತ್ತದೆ ಇರುವುದಿಲ್ಲ. ಈ ಗ್ರಂಥದಲ್ಲಿ ಯಾವ ರಾಜನ ಹೆಸರನ್ನೂ ಸೂಚಿಸಿಲ್ಲ. ಇದೂ ಅಲ್ಲದೆ ಈ ಗ್ರಂಥದ ಶೈಲಿಯು ಮಂತ್ರಿ ತಿರುಮಲೈ ಯಂಗಾರ್ಯರ ಶೈಲಿಗಿಂತ ಪ್ರಾಚೀನ ಪದ್ಧತಿಯನ್ನು ಅನುಸರಿಸಿ ಇದೆ ಶ್ರೀವೈಷ್ಣವ ಮತಸಿದ್ದಾ೦ಶಪ್ರಕ್ರಿಯೆಯನ್ನು ಈಗ್ರಂಥದ ಪೀಠಿಕಾ ಸಂಧಿಯಲ್ಲಿ ತಿಳಿಸುವ ಕ್ರಮ ವನ್ನು ನೋಡಿಯೇ ಮಂತ್ರಿ ತಿರುಮಲೈಯಂಗಾರ್ಯರು ತಮ್ಮ ಗ್ರಂಥಗಳ ಪೀಠಿಕೆ ಗಳನ್ನು ಬರೆದಿರಬಹುದೆಂದು ತೋರುತ್ತದೆ. ಈ ಕಾರಣಗಳಿಂದ ಈ ಗ್ರಂಥವನ್ನು ರಚಿಸಿದವರು ರಾಜಒಡೆಯರಿವರಿಗೆ ಗುರುಗಳಾಗಿದ್ದ ಪ್ರಧಾನಿ ತಿರುಮಲಾರ್ಯರೆಂದೇ ನಿಶ್ಚಯಿಸಬೇಕು. ಮೈಸೂರು ರಾಜರುಗಳ ಚರಿತ್ರವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ರುವ ಮ ರಾ|| ಎಡ್ವಕೇಟ್ ಎಂ. ವಿ. ಶ್ರೀನಿವಾಸಾಚಾರ್ಯರು ಈ ನಮ್ಮ ಅಭಿಪ್ರಾಯವನ್ನು ಅನುಮೋದಿಸಿದ್ದೂ ಅಲ್ಲದೆ, ಈ ಗ್ರಂಥಕರ್ತರ ವಿಚಾರವಾಗಿ ತಮಗೆ ತಿಳಿದಿದ್ದ ಹೆಚ್ಚಾದ ಅಂಶಗಳನ್ನು ಕೆಳಗೆ ಕಂಡ ರೀತಿಯಲ್ಲಿ ಬರೆದು ಕಳು. 'ಹಿಸಿರುತ್ತಾರೆ. ಇದಕ್ಕಾಗಿ ಅವರಿಗೆ ನಾವು ಬಹಳ ಕೃತಜ್ಞರಾಗಿರುತ್ತೇವೆ. “ ಈ ಗ್ರಂಥಕರ್ತರಾದ ಪ್ರಧಾನಿ ತಿರುಮಲಾರ್ಯರು ಶ್ರೀಮದಾ ಮಾನುಜಾಚಾರ್ಯರ ಕಾಲದಲ್ಲಿ ನಿರ್ಣಿತರಾದ ಎಪ್ಪತ್ತು ನಾಲ್ಕು ಆಚಾರ್ ಇರುಪರುಗಳಲ್ಲಿ ಒಬ್ಬರಾದ ಅನಂತಾಡ್ಯರ ವಂಶೋತ್ಪನ್ನರು. ಇವರ ಪೂ ರ್ವಿಕರುಗಳು ವಿಜಯನಗರವನ್ನು ಆಳಿದ ಯಾದವ ತುಳುವ ಕುಲಗಳ ಈಜರುಗಳಿಗೂ, ಮೈಸೂರು ದೊರೆಗಳ ಪೂರ್ವಿಕರಾದ ಕರ್ನಾಟದೇಶದ ಯಾದವರಜರುಗಳಿಗೂ ಗುರುಗಳಾಗಿದ್ದು ಅವರುಗಳಿಂದ ವೃತ್ತಿಕ್ಷೇತುದಿ ಗಳನ್ನು ಪಡೆದು ಸುಖದಿಂದಿರುತ್ತಲಿದ್ದರು. ಆ ರಾಜರುಗಳ ಕಾಲಾನಂತರ ಆ ವೃತ್ತಿಕ್ಷೇತಾದಿಗಳೆಲ್ಲವೂ ಹೋಗಿ, ವಿಜಯನಗರದ ಕೃಷ್ಣರಾಯರು, .ಶ. ೧೫೧೬ ರಲ್ಲಿ ಕೊಟ್ಟಿದ್ದ ಮಂಡ್ಯ ಮೊದಲಾದ ಐದು mನಗಳು ಮತ್ತೆ ಕೆಲವು ಗ್ರಾಮಗಳು ಮಾತ್ರ ಉಳಿದಿದ್ದುವು. ಈ ತಿರುಮಲು