ಪುಟ:ಕರ್ಣವೃತ್ತಾಂತ ಕಥೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್ಯರು ಈ ಗ್ರಾಮದಲ್ಲಿ ತಮಗೆ ಸಲ್ಲುತಲಿದ್ದ ಆದಾಯವನ್ನು ಅವಲಂ ಬಿಸಿಕೊಂಡು ೧೬ ನೆಯ ಶತಮಾನದ ಆದಿಭಾಗದಲ್ಲಿ ಮೇಲುಕೋಟೆಯೆಂಬ ಕ್ಷೇತ್ರದಲ್ಲಿ ವಾಸವಾಗಿದ್ದರು. ಆ ಕ್ಷೇತ್ರಕ್ಕೆ ನಾರಾಯಣಸ್ವಾಮಿಯ ದರ್ಶನಕ್ಕಾಗಿ ಆಗಾಗ್ಗೆ ಬರುತ್ತಲಿದ್ದ ಮೈಸೂರು ರಾಜಒಡೆಯರವರು ಇವರನ್ನು ವಿಶ್ವಾಸಪೂರ್ವಕವಾಗಿ ಕಾಣುತಲಿದ್ದರು. ಈ ತಿರುವಲಾ ರ್ಯರ ಸಂಧಾನದ ಮೇಲೆಯೇ ವಿಜಯನಗರದ ವೆಂಕಟಪತಿರಾಯರು ಶ್ರೀ ರಂಗಪಟ್ಟಣದ ಸೀಮೆಯನ್ನು ರಾಜಒಡೆಯರವರಿಗೆ ಬಹುಮಾನವಾಗಿ ಕೊ ಟ್ಟಿರುವರು. ಆಗ ರಾಜಒಡೆಯರವರು ಮೇಲುಕೋಟೆಗೆ ಬಂದು ಈ ತಿಮ ಉರ್ಯರ ಬಾಂಧವಶಿಷ್ಠಾದಿಗಳಿಗೆ ತೆಂಗಿನಭಾಗದ ಅಗ್ರಹಾರದ ೧v ವೃತ್ತಿ, ಮುತ್ತೇಗೆರೆ ಅಗ್ರಹಾರದ ೫೦ ವೃತ್ತಿ, ಹಾವನೂರು ಅಗ್ರಹಾರದ ೬೦ ವೃತ್ತಿ, ಒಟ್ಟು ೧೦೨೪ ಪರಹ ಉತ್ಪತ್ತಿಯಾಗುವ ೧೭V ವೃತ್ತಿಗಳನ್ನೂ ಇತರ ಕೆಲವು ಭೂಮಿಗಳನ್ನೂ ಸರ್ವಮಾನ್ಯವಾಗಿ ದಯಪಾಲಿಸಿದರು. + ಕಲ್ಯಾಣಿಯ ತೀರದಲ್ಲಿ ಭೂದಾನಮಾಡಿದನಂತರ ರಾಜಒಡೆಯರವರು ಈ ತಿರುಮಲಾರ್ಯರನ್ನು ಕುರಿತು-" ನೀವು ತಿ ರಂಗಪಟ್ಟಣದಲ್ಲಿ ನಿಂತು ನ ಮಗೆ ಹಿತೋಪದೇಶವನ್ನು ಮಾಡುತ್ತಲಿರಬೇಕು' ಎಂದು ಕೇಳಿಕೊಂಡರು. ಅದಕ್ಕೆ ತಿರುಮಲಾರ್ಯರು- ನಾವು ನಿಮ್ಮ ಶ್ರೇಯಃಪ್ರಾರ್ಥನೆಯನ್ನು ಮಾಡುತ್ತ ಇಲ್ಲಿಯೇ ಇರುತ್ತೇವೆ. ನಮ್ಮ ಪೂರ್ವಿಕರ ಶಿಷ್ಯರುಗ ೪ಾಗಿದ್ದ ರಾಜರುಗಳೆಲ್ಲರೂ ಸ್ವರ್ಗಲೋಕಕ್ಕೆ ಹೋದರು. ನಾವು ಯಾ ವುದಾದರೂ ಒಂದು ಪುಣ್ಯಸ್ಥಳದಲ್ಲಿ ಭಾಸ್ಮಾದಿ ಗ್ರಂಥಗಳನ್ನು ಸೇವಿಸುತ್ತ ದೇಹಯಾತ್ರೆಯನ್ನು ಮಾಡುವೆವು, ನೀವು ಬೇರೆ ಗುರುಗಳನ್ನು ಆಶ್ರಯಿ ಸಿರುವಿರಿ. ಅವರೊಡನೆ ನೀವು ಸುಖವಾಗಿ ಧರ್ಮದಿಂದ ರಾಜ್ಯ ಪರಿಪಾಲನೆ ಮಾಡುತ್ತಲಿರಿ ” ಎಂದು ಹೇಳಲು; ಅದಕ್ಕೆ ರಾಜಒಡೆಯರು-" ನನಗೆ ಬೇರೆ ಗುರುಗಳೊಬ್ಬರಿದ್ದರೆ ಬಾಧಕವೇನು ? ಶ್ರೀರಾಮದೇವರಿಗೆ ವಸಿಷ್ಠ ಈ ಮೊದಲಾದ ಗುರುಗಳನೇಕರಿರಲಿಲ್ಲವೆ? ಶ್ರೀಕೃಷ್ಣದೇವರಿಗೆ ಸಂದೀ _ ಈ ಮರು ಅಗ್ರಹಾರಗಳಲ್ಲಿ ಮುತ್ತಗೆರೆ ಗ್ರಾಮದ ೧೬೧೪ ನೆಯ ಇಸವಿಯ ತಾವು ಶಾಸನವು ಮೆ|| ರೈಸ್ ಸಾಹೇಬರ ಶಾಸನಶಸ್ತಕದ ಶ್ರೀರಂಗಪಟ್ಟಣದ ತಾಲ್ಲೂಕಿನ ೧೫೭ ನೆಯ ಸಂಖ್ಯೆಯಲ್ಲಿ ಪ್ರಕಟವಾಗಿರುತ್ತದೆ,