ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಲು ತಾನು ಮಾಡಿದ ಕಾರ್ಯವು ಅನುಚಿತವೆಂದು ಚಿಂತಿಸುವ ರೀತಿ ಯನ್ನು ಹೇಳುತ್ತವೆ. ಈ ಸಂದರ್ಭವನ್ನು ಚನ್ನಾಗಿ ಬುದ್ಧಿವಂತರು ಪರಿಭಾವಿಸಿದರೆ ಈ ಪದ್ಯಗಳು ಮೇಲೆ ಹೇಳಿದ ಅಭಿಪ್ರಾಯಕ್ಕೆ ಸಾಧಕ ವೆಂದು ಹೇಳಲವಕಾಶವಿರುವುದಿಲ್ಲ, - ಹೇಗೆಂದರೆ ಈ ಶೋಕಗಳು ಅರ್ಜುನನು ಚಿಂತಿಸಿದ ರೀತಿ ಯನ್ನು ತಿಳಿಸುತ್ತವೆಯೇ ಹೊರತು ಗ್ರಂಥಕಾರನ ಮತವನ್ನು ತಿಳಿಸು ವುವಲ್ಲ. ಅರ್ಜುನನು ಮಹಾಜ್ಞಾನಿಯೆಂದ ಸರ್ವಸಮ್ಮತನಾದುದರಿಂದ ಅರ್ಹನನ ಮತವು ದೈತಾ ದೈತಾದಿಮತಗಳಲ್ಲಿ ಒಂದೆಂದು ನಿಶ್ಚಯಿ ಸುವುದು ಶಕ್ಯವಲ್ಲ. ಈ ಪ್ರಕರಣದಲ್ಲಿ ಅರ್ಜುನನು ಶಿವಭಕ್ತಿಯನ್ನು ತೋರಿಸಿದಂತೆ ಸ್ಥಳಾಂತರಗಳಲ್ಲಿ ವಿಷ್ಣು ಭಕ್ತಿಯನ್ನು ಇನ್ನು ಹೆಚ್ಚಾಗಿ ವ್ಯಕ್ತಪಡಿಸಿದಂತೆ ಪ್ರತಿಪಾದಿಸುವ ವಚನಗಳು ದೊರೆಯುತ್ತವೆ. ಅಜ್ನ ನ ವುತ ರು ಯಾವುದಾದರೂ ಆಗಲಿ ಕವಿಯ ಮತವು ಅರ್ಡ್ನನ ಮತವೇ ಯೆಂದು ಹೇಳುವುದಕ್ಕೆ ಸಾಧಕವೇ ಇಲ್ಲವಾದುದ ರಿಂದ, ಈ ವಚನಗಳಿಂದ ಕವಿದು ಮತದ ನಿಶ ಯವಾಗುವುದಿಲ್ಲ, ಮತ್ತು ಆರ್ಯನನು ಶ್ರೀಕೃಷ್ಣ ಪ್ರೇರಣಾನುಸಾರವಾಗಿಸಾಶುಪತಾಸ್ತ್ರ ) ವನ್ನು ಸಂಸಾದಿಸಲು ಶಿವಸನ್ನಿಧಿಗೆ ಬಂದು ಶಿವಾರ್ಚನೆಯನ್ನು ಮಾಡಿ ದಾಗ ಈ ಸಂಭವವು ಉಂಟಾಯಿತಲ್ಲವೆ ? ಫಲಕಾಮನೆಯಿಂದ ಆರಾಧ ನೆಯನ್ನು ಮಾಡತಕ್ಕವನು ತನ್ನಿಂದ ಆರಾಧಿಸಲ್ಪಡುವ ದೇವತೆಗೆ ಸಂತೋಷಕರವಾದ ಧನಸ್ತುತಿನೊದಲಾದುದನ್ನು ಮಾಡುವುದು ಸಹ ಜವಲ್ಲವೆ ? ಆದರೆ ಅದೈತಮತಪ್ರಕಾರವಾಗಿ ಧಾನಕಾಲದಲ್ಲಿ ತೋರುವ ಧರ್ಮಗಳಲ್ಲವೂ ಆರೋಪಿತವಾದುದರಿಂದ ಶಿವನಲ್ಲಿ ಸರ್ವೋ ತಮತ್ತ ದಿಗಳನ್ನು ಫಲಾರ್ಥವಾಗಿ ಆರೋಪಿಸಿ ಅರ್ಜುನನು ಉಪಾಸಿ ಸಿದನೆಂದು ಹೇಳಬಹುದಾಗಿದೆ. ಆದುದರಿಂದ ಈ ಪದ್ಯಗಳು ತಮ್ಮ ವನ್ನು ತಿಳಿಸುವುವಲ್ಲಿ ಅಲ್ಲದೆ ಅರ್ಜನನು ಮತ್ತು ಇತರಏಎಂಡ ವರು ಸರ್ವದಾ ಶ್ರೀಕೃಷ್ಣನನ್ನೇ ಪರದೇವತೆಯೆಂದು ನಂಬಿದವರೆಂಬುದು ಇದೇ ಗ್ರಂಥದಲ್ಲಿ ಅನೇಕ ಭಾಗಗಳಲ್ಲಿಯೂ ಮತ್ತು ಭಗವದ್ಗೀತೆಯ ಲ್ಲಿಯೂ ಅತ್ಯಂತ ಸ್ಪಷ್ಟವಾಗಿರುತ್ತದೆ.