ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೫] ಅರ್ಜನಾಭಿಗಮನಪರ್ವ 65. ದುಗುಡಹರುಷದ ಹುಗಿಲದಲೆಯ ತುಗಳಿಗಿಟ್ಟೆಯಾಗಿ ಗುಣವಾ ೪ಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ || ೩೦ ಆಗ ಆದ ಸುಶಕುನಗಳು. ಹರಡ ವಾಮದಲುಲಿಯ ಮಧುರ ಸ್ವರದಲಪಸವ್ಯದಲಿ ಹಸುಬನ ಸರಸವಾಹಿತಮಾಗೆ ಸೂರ್ಯೋದಯದ ಸಮಯದಲಿ | ಹರಿಣಭಾರದ್ವಾಜನುಡಿಕೆಯ ಸರಟನಕುಲನ ತಿರಿದುಗಳ ಕು ಕುರನ ತಾಳಿನ ಶಕುನವನು ಕೈಕೊಳುತ ನಡತಂದ || ೩೩ ನೀಲಕಂಠನ ಮನದ ಬಯಕೆಗೆ ನೀಲಕಂಠನೆ ಬಲಕೆ ಬಂದುದು ಮೇಲುಸೋಗಿನ ಸಿದ್ದಿ ದೈತ್ಯಾಂತಕನ ಬುದ್ದಿಯಲಿ | ಕಾಲಗತಿಯಲಿ ಬತಿಕ ಪರರಿಗೆ ಕಾಲಗತಿಯನು ಕಾಂಬೆವೈ ಸಲೆ ಶೂಲಧರನೇ ಬಲ್ಲನೆನು ತಂದನಾನಾರ್ಥ || ಇಂದ್ರಕೀಲಪರ್ವತದ ಬಳಿಗೆ ಹೋದುದು. ಅರಸ ಕೇಳ್ಳ ಬಟಕ ಭಾರತ ವರುಷವನು ದಾಂಟಿದನು ತಂಪಿನ ಗಿರಿಯ ತಪ್ಪಲಿನಿಂದನಹರಿವರುಷಸೀಮೆಯಲಿ | ಬೆರೆಸಿದನು ಬಳಕುತ್ತರೋತ್ತರ ಸರಣಿಯಲಿ ಸೈನಡೆದು ಹೊಕ್ಕನು ಸುರರ ಸೇವವನಿಂದ್ರಕೀಲಮಹಾಮಹೀಧರವ || ಅದರ ಸಮೀಪದ ವನದ ವರ್ಣನೆ ಗಿಳಿಯ ಮೃದುವಾತುಗಳ ಮಲಿಕೆ ಗಿಲೆಯ ಮಧುರಧ್ವನಿಯ ಹಂಸೆಯ ARANYA PARVA