ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇದರಿಂದ ಶಿವಸರ್ವೊತ್ತಮತ್ವವು ಅರ್ಹನನ ಮತವೇ ಅಲ್ಲದಾ ಗಿರುವಾಗ ಅರ್ಜನನ ಧ್ಯಾನಪ್ರಕಾರವನ್ನು ಅನುವದಿಸುವ ಗ್ರಂಥ ಕಾರನು ಆವತದವನೆಂದು ಹೇಳುವುದು ಸಕಾರಣವಾಗಿರುವುದಿಲ್ಲ. ಹೀಗೆಯೇ ಶಿವನನ್ನು ಸಮೀಪಿಸಿದಾಗ ಅರ್ಜನನ ಅಪರಾಧ ಹಮಾಪನಪೂರ್ವಕವಾದ ಶಿವಸ್ತುತಿವಾಕ್ಯಗಳು ಕೂಡ ಗ್ರಂಥಕಾರನ ಮತವನ್ನು ತಿಳಿಸುವುದಕ್ಕೆ ಅನುಕೂಲವಲ್ಲ ವಾಸ್ತವವಾಗಿ ಮೂಲಭಾರ ತದಲ್ಲಿ ಈ ಪ್ರಕರಣದಲ್ಲಿ ಕಂಡು ಬರುವ ಕೆಲವು ಶ್ಲೋಕಗಳ ಅಭಿಮಾ ಯವನ್ನು ತಿಳಿಸುವ ವಾಕ್ಯಗಳು ಕರ್ಣಾಟಕ ಭಾರತದಲ್ಲಿ ಈಪ್ರಕರಣ ದಲ್ಲಿ ಕಂಡುಬರುವುದಿಲ್ಲ. ಕೆಲವು ಅಭಿಪ್ರಾಯಗಳಿಗೆ ಸಂವಾದಿಯಾದ ವಾಕ್ಯಗಳು ಕಂಡುಬಂದರೂ ಆ ವಾಕ್ಯಗಳು ಸರ್ವಮತದವರೂ ತಮ್ಮ ತಮ್ಮ ಮತಾನುಸಾರವಾಗಿ ಹೊಂದಿಕೆಮಾಡಿಕೊಳ್ಳಲು ತಕ್ಕು ವಾಗಿವೆ. ಆದುದರಿಂದ ಇಲ್ಲಿರುವ ವಾಕ್ಯಗಳು ಕೂಡ ಮೂಲಭಾರ ತದಲ್ಲಿರುವ ವಾಕ್ಯಗಳಂತೆ ಸರ್ವಮತಗಳಿಗೂ ಅನುಕೂಲವಾಗತಕ್ಕವು ಗಳಾಗಿವೆ. ಮೂಲಭಾರತದಲ್ಲಿಲ್ಲದ ಅಭಿಪ್ರಾಯಗಳನ್ನು ತಿಳಿಸುವ ವಾಕ್ಯ ಗಳು ಮತಾಭಿಮಾನಿಗಳಿಂದ ಸೇರಿಸಲ್ಪಟ್ಟವೆಂದಾಗಲಿ ಇತರ ಮತಗಳಿಗೆ ನುಕೂಲವಾದ ವಾಕ್ಯಗಳು ಗ್ರಂಥದಿಂದ ತೆಗೆದು ಹಾಕಲ್ಪಟ್ಟಿವೆಯೆಂ ದಾಗಲಿ ಹೇಳಬಹುದಾಗಿದೆ. ಆದುದರಿಂದ ಇಷ್ಟು ಮಾತ್ರದಿಂದೇ ಗ್ರಂಥ ಕಾರನ ಮತನಿರ್ಣಯವು ಆಗುವುದಿಲ್ಲ. ಅಲ್ಲದೆ ಮೊದಲನೆಯ ಸಂಪುಟದ ಅವತರಣಿಕೆಯಲ್ಲಿ ಗ್ರಂಥ ಕಾರನು ಇಂತಹ ಮತದವನೆಂಬುದನ್ನು ನಿರ್ಣಯಿಸುವುದಕ್ಕೆ ಸಾಧಕ ಗಳಂದು ನಾವು ತೋರಿಸಿರುವ ಆದ್ದಂತಗಳಲ್ಲಿ ವೀರನಾರಾಯಣನಾ ಮಾಂಕನಾದಿಗಳ ಸಾಧಕಗಳಂದು ತಿಳಿವುದುಚಿತವೆಂದು ಹೇಳಬಹು ದಾಗಿದೆ. ಇದೇ ವಿಷಯದಲ್ಲಿ ಅದೈತಮತದ ತತ್ವವನ್ನು ಅರಿತು ವಿಚಾರ ಮಾಡಿದರೆ ಆ ಮತದ ಪ್ರಕಾರ ಕೈವವೈಷ್ಣವ ವಿಭಾಗವು ಅನಾವಶ್ಯಕ